T20 World Cup 2024: ಸೆಮಿಫೈನಲ್​ಗೇರಲು 3 ತಂಡಗಳ ನಡುವೆ ಪೈಪೋಟಿ

|

Updated on: Jun 23, 2024 | 8:05 AM

T20 World Cup 2024: ಸೂಪರ್-8 ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿ ಗ್ರೂಪ್​ನಲ್ಲೂ 4 ತಂಡಗಳಿವೆ. ಹಾಗೆಯೇ ಆಯಾ ಗ್ರೂಪ್​ಗೂ ಪಾಯಿಂಟ್ಸ್ ಟೇಬಲ್​ ಇದ್ದು, ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್​ಗೇರಲಿದೆ. ಅಲ್ಲದೆ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಅಲಂಕರಿಸುವ ತಂಡಗಳು ಟಿ20 ವಿಶ್ವಕಪ್​ನಿಂದ ಹೊರಬೀಳಲಿದೆ.

T20 World Cup 2024: ಸೆಮಿಫೈನಲ್​ಗೇರಲು 3 ತಂಡಗಳ ನಡುವೆ ಪೈಪೋಟಿ
SA-WI-ENG
Follow us on

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಗ್ರೂಪ್-2 ನಲ್ಲಿರುವ ಸೌತ್ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಸೆಮಿಫೈನಲ್​ ರೇಸ್ ಏರ್ಪಟ್ಟಿದೆ. ಪ್ರಸ್ತುತ ಗ್ರೂಪ್-2 ಪಾಯಿಂಟ್ಸ್​ ಟೇಬಲ್​ನಲ್ಲಿ 4 ಅಂಕಗಳೊಂದಿಗೆ ಸೌತ್ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದ್ದರೆ, 2 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ದ್ವಿತೀಯ ಸ್ಥಾನದಲ್ಲಿದೆ. ಇನ್ನು 2 ಅಂಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನ ಅಲಂಕರಿಸಿದೆ. ಹಾಗೆಯೇ ಆಡಿರುವ 2 ಪಂದ್ಯಗಳಲ್ಲೂ ಸೋತಿರುವ ಯುಎಸ್​ಎ ನಾಲ್ಕನೇ ಸ್ಥಾನದಲ್ಲಿದೆ.

ನೆಟ್ ರನ್ ರೇಟ್ ಲೆಕ್ಕಾಚಾರ:

ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವು +0.625 ನೆಟ್ ರನ್ ರೇಟ್ ಹೊಂದಿದ್ದರೆ, ವೆಸ್ಟ್ ಇಂಡೀಸ್ ತಂಡ +1.814 ನೆಟ್​ ರನ್ ರೇಟ್ ಸಂಪಾದಿಸಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡದ ನೆಟ್ ರನ್ ರೇಟ್ +0.412 . ಅಂದರೆ ಈ ಮೂರು ತಂಡಗಳ ನೆಟ್ ರನ್​ ರೇಟ್ ಪ್ಲಸ್​ನಲ್ಲಿದ್ದು, ಕೊನೆಯ ಪಂದ್ಯದ ಫಲಿತಾಂಶವು ಎಲ್ಲಾ ತಂಡಗಳ ಪಾಲಿಗೆ ನಿರ್ಣಾಯಕವಾಗಿರಲಿದೆ.

ನಾಕೌಟ್ ಹಾದಿ:

ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದೆ. ಅತ್ತ ಇಂಗ್ಲೆಂಡ್ ತಂಡದ ಎದುರಾಳಿ ಯುಎಸ್​ಎ.

  • ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ, ಆಫ್ರಿಕನ್ನರು ನೇರವಾಗಿ ಸೆಮಿಫೈನಲ್​ಗೇರಲಿದೆ.
  • ಒಂದು ವೇಳೆ ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದರೆ ನೆಟ್ ರನ್ ರೇಟ್ ಮೂಲಕ ವಿಂಡೀಸ್​ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅಲ್ಲದೆ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.
  • ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿದರೆ, ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್​ಗೇರುವ ಅವಕಾಶ ಹೆಚ್ಚಾಗಲಿದೆ.
  • ಅಂದರೆ ಕೊನೆಯ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಭರ್ಜರಿ ಜಯ ಸಾಧಿಸಿ ನೆಟ್​ ರನ್ ರೇಟ್​ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಹಿಂದಿಕ್ಕುವ ಮೂಲಕ ಅವಕಾಶ ಇಂಗ್ಲೆಂಡ್ ತಂಡಕ್ಕಿರಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿ ಇಂಗ್ಲೆಂಡ್ ಸೆಮಿ ಫೈನಲ್​ಗೇರಬಹುದು.
  • ಒಂದು ವೇಳೆ ವೆಸ್ಟ್ ಇಂಡೀಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೋತರೆ, ಇಂಗ್ಲೆಂಡ್ ತಂಡಕ್ಕೆ ನೇರವಾಗಿ ಸೆಮಿಫೈನಲ್​ಗೇರಬಹುದು. ಅಂದರೆ ಕೊನೆಯ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಜಯ ಸಾಧಿಸಿ 4 ಅಂಕಗಳೊಂದಿಗೆ ನಾಕೌಟ್ ಹಂತಕ್ಕೇರಬಹುದು.
  • ಇನ್ನು ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಸೋತರೂ ನೆಟ್ ರನ್ ರೇಟ್​ ಗಣನೆಗೆ ಬರಲಿದೆ. ಅದರಂತೆ ಯುಎಸ್​ಎ ತಂಡ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಸೆಮಿಫೈನಲ್​ಗೇಬಹುದು. ಇಲ್ಲ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್​ ತಂಡಗಳಲ್ಲಿ ಯಾರು ನೆಟ್ ರನ್ ರೇಟ್​ನಲ್ಲಿ ಮೇಲಿರಲಿದ್ದಾರೆ ಅವರು ಸೆಮಿಫೈನಲ್​ಗೇರಲಿದೆ.

ಇದನ್ನೂ ಓದಿ: Mitchell Starc: ಸ್ಟಾರ್ಕ್​ ಸ್ಪಾರ್ಕ್​: ಹೊಸ ವಿಶ್ವ ದಾಖಲೆ ಸೃಷ್ಟಿ

ಒಟ್ಟಿನಲ್ಲಿ ಗ್ರೂಪ್-2 ನಲ್ಲಿನ ಕೊನೆಯ ಎರಡು ಪಂದ್ಯಗಳು ಮೂರು ತಂಡಗಳ ಪಾಲಿಗೆ ನಿರ್ಣಾಯಕ. ಈ ಪಂದ್ಯಗಳ ಮೂಲಕ ಯಾವ ತಂಡ ಸೆಮಿಫೈನಲ್​ಗೇರಲಿದೆ ಎಂಬುದೇ ಈಗ ಕುತೂಹಲವಾಗಿ ಮಾರ್ಪಟ್ಟಿದೆ.

 

Published On - 12:08 pm, Sat, 22 June 24