T20 World Cup 2026: ಟಿ20 ವಿಶ್ವಕಪ್​ಗೆ 12 ತಂಡಗಳು ಫೈನಲ್​..!

T20 World Cup 2026: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಇಲ್ಲಿ ಆತಿಥೇಯ ರಾಷ್ಟ್ರಗಳಾದ ಭಾರತ ಮತ್ತು ಶ್ರೀಲಂಕಾ ತಂಡಗಳಿಗೆ ನೇರ ಅರ್ಹತೆ ಪಡೆದುಕೊಂಡಿದೆ. ಹಾಗೆಯೇ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಸೂಪರ್-8 ಹಂತಕ್ಕೇರಿರುವ ಎಂಟು ತಂಡಗಳೂ ಕೂಡ ಮುಂಬರುವ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

T20 World Cup 2026: ಟಿ20 ವಿಶ್ವಕಪ್​ಗೆ 12 ತಂಡಗಳು ಫೈನಲ್​..!
T20 World Cup 2026
Follow us
ಝಾಹಿರ್ ಯೂಸುಫ್
|

Updated on:Jun 20, 2024 | 10:49 AM

T20 World Cup 2024: ಟಿ20 ವಿಶ್ವಕಪ್​ನ 9ನೇ ಆವೃತ್ತಿಯ ಮುಕ್ತಾಯಕ್ಕೂ ಮುನ್ನವೇ 10ನೇ ಆವೃತ್ತಿಯ ಬಿಗ್ ಅಪ್​ಡೇಟ್​ ಒಂದು ಹೊರಬಿದ್ದಿದೆ. ಅದೇನೆಂದರೆ ಮುಂಬರುವ ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಅರ್ಹತೆ ಪಡೆದಿರುವುದು. ಅಂದರೆ 2026 ರಲ್ಲಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ 12 ತಂಡಗಳು ಫೈನಲ್ ಆಗಿವೆ.

ಈ ಬಾರಿಯ ಟಿ20 ವಿಶ್ವಕಪ್​ನ ಸೂಪರ್-8 ಹಂತಕ್ಕೇರಿದ 8 ತಂಡಗಳಿಗೆ ನೇರ ಅರ್ಹತೆ ಲಭಿಸಿದರೆ, ಇನ್ನುಳಿದ 4 ತಂಡಗಳನ್ನು ಐಸಿಸಿ ಟಿ20 ತಂಡಗಳ ಶ್ರೇಯಾಂಕಾದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಅದರಂತೆ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ಐಸಿಸಿ ಟಿ20 ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಮುಂಬರುವ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆದುಕೊಂಡಿದೆ.

ಇನ್ನು ಭಾರತ ಮತ್ತು ಶ್ರೀಲಂಕಾ ತಂಡವು ಆತಿಥ್ಯ ರಾಷ್ಟ್ರವಾಗಿರುವುದರಿಂದ 2026 ರ ಟಿ20 ವಿಶ್ವಕಪ್​ಗೆ ಡೈರೆಕ್ಟ್ ಎಂಟ್ರಿಯಾಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿದು ಸೂಪರ್-8 ಹಂತಕ್ಕೇರಿರುವ ಯುಎಸ್​ಎ ತಂಡವು ಮುಂಬರುವ ಟಿ20 ವಿಶ್ವಕಪ್​ನಲ್ಲೂ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದಿರುವ 12 ತಂಡಗಳು:

  1. ಭಾರತ
  2. ಶ್ರೀಲಂಕಾ
  3. ಅಫ್ಘಾನಿಸ್ತಾನ್
  4. ಆಸ್ಟ್ರೇಲಿಯಾ
  5. ಬಾಂಗ್ಲಾದೇಶ್
  6. ಇಂಗ್ಲೆಂಡ್
  7. ಸೌತ್ ಆಫ್ರಿಕಾ
  8. ಯುಎಸ್​ಎ
  9. ವೆಸ್ಟ್ ಇಂಡೀಸ್
  10. ನ್ಯೂಝಿಲೆಂಡ್
  11. ಪಾಕಿಸ್ತಾನ್
  12. ಐರ್ಲೆಂಡ್

8 ತಂಡಗಳಿಗೆ ಅವಕಾಶ:

2026ರ ಟಿ20 ವಿಶ್ವಕಪ್​ನಲ್ಲೂ 20 ತಂಡಗಳು ಕಣಕ್ಕಿಳಿಯಲಿದ್ದು, ಇದೀಗ 12 ತಂಡಗಳು ಫೈನಲ್ ಆಗಿವೆ. ಇನ್ನುಳಿದ 8 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಈ ಸುತ್ತಿನ ಮೂಲಕ ಒಟ್ಟು 8 ತಂಡಗಳು ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಬಹುದು.

ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್

ಜಂಟಿ ಆತಿಥ್ಯ:

ಟಿ20 ವಿಶ್ವಕಪ್ 2026 ರ ಆಯೋಜನೆಯ ಹಕ್ಕನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ ಪಡೆದುಕೊಂಡಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್​ ಅನ್ನು ಉಭಯ ದೇಶಗಳು ಜಂಟಿಯಾಗಿ ಆಯೋಜಿಸಲಿದೆ. ಅದರಂತೆ ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ಭಾರತ ಆತಿಥ್ಯವಹಿಸುವ ಸಾಧ್ಯತೆಯಿದೆ.

Published On - 10:47 am, Thu, 20 June 24