ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

Asia Cup 2026: ಮಹಿಳಾ ಏಷ್ಯಾಕಪ್ ಟೂರ್ನಿಗೆ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ಬೆನ್ನಲ್ಲೇ ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂಬರುವ ಟೂರ್ನಿಗೆ ದಿನಾಂಕ ನಿಗದಿ ಮಾಡಿದೆ. ಈ ದಿನಾಂಕದಂತೆ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯು ಆಗಸ್ಟ್ 28 ರಿಂದ ಶುರುವಾಗಲಿದೆ.

ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!
Womens T20 Asia Cup
Image Credit source: ACC

Updated on: Aug 04, 2026 | 9:47 AM

ಮಹಿಳಾ ಟಿ20 ಏಷ್ಯಾಕಪ್ 2026 ರ ಪಂದ್ಯಾವಳಿಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಟೂರ್ನಿಗಾಗಿ ಡೇಟ್ ಫಿಕ್ಸ್ ಮಾಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಎಸಿಸಿ ಇಮೇಲ್ ಮತ್ತು ಲೋಗೋ ಹಂಚಿಕೆ:

ಜುಲೈ 22 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಅಧಿಕೃತ ಇಮೇಲ್ ಒಂದನ್ನು ಕಳುಹಿಸಿದೆ. ಅದರಲ್ಲಿ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಹಂಚಿಕೊಳ್ಳಲಾಗಿದ್ದು, ಆತಿಥೇಯ ದೇಶದ ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದರೊಂದಿಗೆ, ಎಲ್ಲಾ ತಂಡಗಳು ಆಗಸ್ಟ್ 27 ರೊಳಗೆ ಯುಎಇ ತಲುಪಬೇಕು ಮತ್ತು ಸೆಪ್ಟೆಂಬರ್ 13 ರಂದು ಫೈನಲ್ ಪಂದ್ಯ ಜರುಗಲಿದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪಿಸಿಬಿ  ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಅವರು ಎಸಿಸಿ ಅಧ್ಯಕ್ಷರಾಗಿದ್ದು, ಅವರ ಅಂತಿಮ ಅನುಮೋದನೆ ಸಿಕ್ಕ ತಕ್ಷಣ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಬಿಸಿಸಿಐ ಎಡವಟ್ಟು!

ಈ ಪಂದ್ಯಾವಳಿಯ ಸಿದ್ಧತೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಈ ತಾತ್ಕಾಲಿಕ ತಂಡದಲ್ಲಿ ಪ್ರೇಮಾ ರಾವತ್ ಸೇರಿದಂತೆ ಪ್ರಮುಖ ಆಟಗಾರ್ತಿಯರ ಹೆಸರಿತ್ತು. ಆದರೆ, ಎಸಿಸಿ ಇನ್ನು ಅಧಿಕೃತವಾಗಿ ವಿಂಡೋ ತೆರೆಯದ ಕಾರಣ ಬಿಸಿಸಿಐ ತಕ್ಷಣವೇ ಆ ಪೋಸ್ಟ್ ಅನ್ನು ತನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದೆ.

8 ದೇಶಗಳ ಕದನ:

ಮುಂಬರುವ ಮಹಿಳಾ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಾವುವು ಎಂದರೆ…

ಮುಖಾಮುಖಿಯಾಗಲಿರುವ 8 ಬಲಿಷ್ಠ ತಂಡಗಳು

  1. ಭಾರತ
  2. ಶ್ರೀಲಂಕಾ
  3. ಪಾಕಿಸ್ತಾನ್
  4. ಬಾಂಗ್ಲಾದೇಶ್
  5. ನೇಪಾಳ
  6. ಮಲೇಷ್ಯಾ
  7.  ಥಾಯ್ಲೆಂಡ್
  8. ಯುಎಇ

ಇದನ್ನೂ ಓದಿ: ಪಾಕಿಸ್ತಾನ್​ ಸೂಪರ್ ಲೀಗ್​ನಲ್ಲಿ ಮೊಹಮ್ಮದ್ ಅಮಿರ್ ‘ವಿದೇಶಿ ಆಟಗಾರ’!

ಈ ಏಷ್ಯಾ ಕಪ್ ವೇಳಾಪಟ್ಟಿಯು ಫೈನಲ್ ತಲುಪುವ ತಂಡಗಳಿಗೆ ಹೊಸ ಸಮಸ್ಯೆಯನ್ನುಂಟು ಮಾಡಲಿದೆ. ಏಕೆಂದರೆ ಜಪಾನ್‌ನ ನಾಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 17 ರಿಂದ 24 ರವರೆಗೆ ನಿಗದಿಯಾಗಿದೆ. ಏಷ್ಯಾ ಕಪ್ ಫೈನಲ್ ಮುಗಿದ ಕೇವಲ 4 ದಿನಗಳಲ್ಲಿ ಆಟಗಾರ್ತಿಯರು ಯುಎಇಯಿಂದ ಜಪಾನ್‌ಗೆ ಪ್ರಯಾಣ ಬೆಳೆಸಿ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us