‘ಇಂಡಿಯಾ ಚಾಂಪಿಯನ್ಸ್​’ ತಂಡ ಪ್ರಕಟ

ವಿಶ್ವ ಕ್ರಿಕೆಟ್‌ನ ಹಳೆಯ ತಾರೆಗಳ ಜಿದ್ದಾಜಿದ್ದಿನ ಕಾದಾಟಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ನಿವೃತ್ತಿಯ ನಂತರವೂ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದ 'ವರ್ಲ್ಡ್ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್'  ಟೂರ್ನಿ ಇದೀಗ ತನ್ನ ಮೂರನೇ ಆವೃತ್ತಿಗೆ ಸಂಪೂರ್ಣವಾಗಿ ಸಜ್ಜಾಗಿದೆ. ಈ ಬಾರಿ ಟೂರ್ನಿಯು ಹೊಸ ಹವಾ ಸೃಷ್ಟಿಸಲು ಹೊಸ ದೇಶಕ್ಕೆ ಲಗ್ಗೆ ಇಡುತ್ತಿದ್ದು, ಜಾಗತಿಕ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇಂಡಿಯಾ ಚಾಂಪಿಯನ್ಸ್​ ತಂಡ ಪ್ರಕಟ
ಇಂಡಿಯಾ ಚಾಂಪಿಯನ್ಸ್
Image Credit source: WCL

Updated on: Sep 12, 2026 | 12:20 PM

ಬಹುನಿರೀಕ್ಷಿತ ವರ್ಲ್ಡ್ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್- 2026 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಹೈ-ವೋಲ್ಟೇಜ್ ಟೂರ್ನಿಗಾಗಿ ಭಾರತದ ದಿಗ್ಗಜ ಆಟಗಾರರನ್ನೊಳಗೊಂಡ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. 23 ಸದಸ್ಯರನ್ನು ಒಳಗೊಂಡಿರುವ ಈ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸಲಿದ್ದಾರೆ.

ಇನ್ನು ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದ್ದು, ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ಸುರೇಶ್ ರೈನಾ, ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಅವರೊಂದಿಗೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ‘ಗಬ್ಬರ್’ ಖ್ಯಾತಿಯ ಶಿಖರ್ ಧವನ್, ರಾಬಿನ್ ಉತ್ತಪ್ಪ ಮತ್ತು ಅಂಬಾಟಿ ರಾಯುಡು ಕೂಡ ತಂಡದಲ್ಲಿದ್ದಾರೆ. ಅದರಂತೆ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿ ಕಾಣಿಸಿಕೊಂಡುರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಇಂಡಿಯಾ ಚಾಂಪಿಯನ್ಸ್ ಸಂಪೂರ್ಣ ತಂಡದ ವಿವರ ಇಲ್ಲಿದೆ:
ಆಟಗಾರನ ಹೆಸರು ಪ್ರಮುಖ ಪಾತ್ರ
ಯುವರಾಜ್ ಸಿಂಗ್ (ನಾಯಕ) ಆಲ್-ರೌಂಡರ್
ಶಿಖರ್ ಧವನ್ ಬ್ಯಾಟರ್
ಸುರೇಶ್ ರೈನಾ ಬ್ಯಾಟರ್
ಅಂಬಾಟಿ ರಾಯುಡು ಬ್ಯಾಟರ್
ರಾಬಿನ್ ಉತ್ತಪ್ಪ ವಿಕೆಟ್ ಕೀಪರ್ / ಬ್ಯಾಟರ್
ನಮನ್ ಓಜಾ ವಿಕೆಟ್ ಕೀಪರ್ / ಬ್ಯಾಟರ್
ಸೌರಭ್ ತಿವಾರಿ ಬ್ಯಾಟರ್
ಗುರುಕೀರತ್ ಸಿಂಗ್ ಬ್ಯಾಟರ್
ಇರ್ಫಾನ್ ಪಠಾಣ್ ಆಲ್-ರೌಂಡರ್
ಯೂಸುಫ್ ಪಠಾಣ್ ಆಲ್-ರೌಂಡರ್
ಸ್ಟುವರ್ಟ್ ಬಿನ್ನಿ ಆಲ್-ರೌಂಡರ್
ಹರ್ಭಜನ್ ಸಿಂಗ್ ಬೌಲರ್
ಪಿಯೂಷ್ ಚಾವ್ಲಾ ಬೌಲರ್
ಆರ್. ಪಿ. ಸಿಂಗ್ ಬೌಲರ್
ಧವಳ್ ಕುಲಕರ್ಣಿ ಬೌಲರ್
ವಿನಯ್ ಕುಮಾರ್ ಬೌಲರ್
ಸಿದ್ಧಾರ್ಥ್ ಕೌಲ್ ಬೌಲರ್
ವರುಣ್ ಆರೋನ್ ಬೌಲರ್
ಅಭಿಮನ್ಯು ಮಿಥುನ್ ಬೌಲರ್
ಅನುರೀತ್ ಸಿಂಗ್ ಬೌಲರ್
ಪವನ್ ನೇಗಿ ಬೌಲರ್
ರಾಹುಲ್ ಶರ್ಮಾ ಬೌಲರ್
ರಾಹುಲ್ ಶುಕ್ಲಾ ಬೌಲರ್

ಟೂರ್ನಿ ಯಾವಾಗ ಶುರು?

ವರ್ಲ್ಡ್ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಮೂರನೇ ಸೀಸನ್ ಅಕ್ಟೋಬರ್ 3 ರಿಂದ ಅಕ್ಟೋಬರ್ 18, 2026 ರವರೆಗೆ ನಡೆಯಲಿದೆ. ಈ ಬಾರಿ ಜಾಗತಿಕವಾಗಿ ಒಟ್ಟು 7 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಯುನೈಟೆಡ್ ಕಿಂಗ್‌ಡಮ್‌ನಿಂದ ಹೊರ ಬಂದು ಹೊಸ ಜಾಗದಲ್ಲಿ ಆಯೋಜನೆಯಾಗುತ್ತಿರುವುದು ಈ ಸೀಸನ್‌ನ ವಿಶೇಷತೆಯಾಗಿದೆ. ಅಂದರೆ ಕಳೆದ ಎರಡು ಸೀಸನ್​ ಇಂಗ್ಲೆಂಡ್​ನಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯ ಟೂರ್ನಿಗೆ ಯುಎಇ ಆತಿಥ್ಯವಹಿಸಲಿದೆ.

ಇದನ್ನೂ ಓದಿ: ಮೊಹಮ್ಮದ್ ಸಿರಾಜ್​ಗೆ ಒಲಿದ ನಾಯಕತ್ವ

ಇಂಡಿಯಾ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ನಮನ್ ಓಜಾ, ಸೌರಭ್ ತಿವಾರಿ, ಗುರುಕೀರತ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಪವನ್ ನೇಗಿ, ರಾಹುಲ್ ಶರ್ಮಾ, ಆರ್. ಪಿ. ಸಿಂಗ್, ಧವಳ್ ಕುಲಕರ್ಣಿ, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ವರುಣ್ ಆರೋನ್, ಅಭಿಮನ್ಯು ಮಿಥುನ್, ಅನುರೀತ್ ಸಿಂಗ್ ಮತ್ತು ರಾಹುಲ್ ಶುಕ್ಲಾ.

 

Published On - 12:20 pm, Sat, 12 September 26

Loading...
Unable to load recommendations.
Follow Us