ಕಠಿಣ ಹಾದಿಯಲ್ಲೇ ಟೀಮ್ ಇಂಡಿಯಾದ ಫೈನಲ್ ಲೆಕ್ಕಾಚಾರ!

WTC Final 2027: ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ರೇಸ್‌ನಲ್ಲಿದೆ. ಭಾರತ ತಂಡವು ಯಾವುದೇ ಆತಂಕವಿಲ್ಲದೆ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಬೇಕಿದ್ದರೆ, ಮುಂಬರುವ ಪಂದ್ಯಗಳ ಪೈಕಿ ಕನಿಷ್ಠ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅತ್ಯಂತ ಅನಿವಾರ್ಯವಾಗಿದೆ. ಅದು ಸಹ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿಯೇ ಆಗಬೇಕಿದೆ.

ಕಠಿಣ ಹಾದಿಯಲ್ಲೇ ಟೀಮ್ ಇಂಡಿಯಾದ ಫೈನಲ್ ಲೆಕ್ಕಾಚಾರ!
Team India
Image Credit source: BCCI

Updated on: Nov 10, 2026 | 9:55 AM

ಬಾಂಗ್ಲಾದೇಶ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ, ಈ ಫಲಿತಾಂಶದಿಂದ ಜಾಗತಿಕ ಕ್ರಿಕೆಟ್ ಅಭಿಮಾನಿಗಳು ಎದುರುನೋಡುತ್ತಿದ್ದ ಮಹತ್ವದ ಬದಲಾವಣೆಯೊಂದು ಮರೀಚಿಕೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶ್ ಡ್ರಾ ಮಾಡಿಕೊಂಡಿರುವುದರಿಂದ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಭಾರತ ತಂಡಕ್ಕೆ ಯಾವುದೇ ನೇರ ಲಾಭ ಸಿಕ್ಕಿಲ್ಲ. ಶುಭ್​ಮನ್ ಗಿಲ್ ಪಡೆ ಸದ್ಯ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದ್ದು, ಫೈನಲ್ ಪ್ರವೇಶದ ಲೆಕ್ಕಾಚಾರಗಳು ಈಗ ಮತ್ತಷ್ಟು ರೋಚಕ ಹಂತಕ್ಕೆ ತಲುಪಿವೆ.

ಭಾರತದ ಸ್ಥಾನ ಯಥಾಸ್ಥಿತಿ:

ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದ್ದ ಬಾಂಗ್ಲಾದೇಶಕ್ಕೆ ಈ ಡ್ರಾ ಫಲಿತಾಂಶ ಮತ್ತೊಂದು ಹಿನ್ನಡೆಯನ್ನು ತಂದಿದೆ. ಅವರ ಪಾಯಿಂಟ್ಸ್ ಪರ್ಸೆಂಟೇಜ್ (PCT) ಶೇ. 47.62ರಿಂದ ಶೇ. 45.83ಕ್ಕೆ ಕುಸಿದಿದೆ. ಆದಾಗ್ಯೂ, ಅವರು ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಪಂದ್ಯ ಗೆದ್ದಾಗ ಭಾರತಕ್ಕೆ 4ನೇ ಸ್ಥಾನಕ್ಕೇರಲು ಪರೋಕ್ಷವಾಗಿ ನೆರವಾಗಿತ್ತು, ಆದರೆ ಈ ಎರಡನೇ ಪಂದ್ಯದ ಡ್ರಾ ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ತಂದಿಲ್ಲ.

Loading...

ಸದ್ಯದ WTC ಅಂಕಪಟ್ಟಿ:

ಸ್ಥಾನ ತಂಡ ಪಾಯಿಂಟ್ಸ್ ಸರಾಸರಿ (PCT)
1 ನ್ಯೂಝಿಲೆಂಡ್ 72.22%
2 ಸೌತ್ ಆಫ್ರಿಕಾ 71.43%
3 ಆಸ್ಟ್ರೇಲಿಯಾ 69.23%
4 ಭಾರತ 51.52%
5 ಬಾಂಗ್ಲಾದೇಶ 45.83%

ಕಠಿಣ ಹಾದಿಯಲ್ಲೇ ಟೀಮ್ ಇಂಡಿಯಾ:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೆ ತಲುಪಲು ಅಗ್ರ 2 ಸ್ಥಾನಗಳಲ್ಲಿ ಇರಬೇಕಾಗುತ್ತದೆ. ಆದರೆ ಭಾರತ ಸದ್ಯ ಶೇ. 51.52ರಷ್ಟು ಗೆಲುವಿನ ಸರಾಸರಿಯೊಂದಿಗೆ (PCT) ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನಗಳಲ್ಲಿರುವ ನ್ಯೂಝಿಲೆಂಡ್ (72.22%), ಸೌತ್ ಆಫ್ರಿಕಾ (71.43%) ಮತ್ತು ಆಸ್ಟ್ರೇಲಿಯಾ (69.23%) ತಂಡಗಳು ಭಾರತಕ್ಕಿಂತ ಬಹುದೂರ ಮುಂದಿವೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಭಾರತಕ್ಕೆ ಇನ್ನು ಉಳಿದಿರುವುದು ಕೇವಲ 7 ಪಂದ್ಯಗಳು ಮಾತ್ರ.

  • ನ್ಯೂಝಿಲೆಂಡ್- 2 ಟೆಸ್ಟ್ ಪಂದ್ಯಗಳು
  • ಆಸ್ಟ್ರೇಲಿಯಾ- 5 ಟೆಸ್ಟ್ ಪಂದ್ಯಗಳು

ಇದನ್ನೂ ಓದಿ: ಏಕದಿನ ವಿಶ್ವಕಪ್​​ಗೆ ಭಾರತದ ಸಂಭಾವ್ಯ ತಂಡ ಹೀಗಿದೆ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತ ತಂಡಕ್ಕೆ ಇನ್ನುಳಿದ 7 ಪಂದ್ಯಗಳ ಪೈಕಿ ಕನಿಷ್ಠ 5 ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದರೂ ರೇಸ್‌ನಿಂದ ಹೊರಬೀಳುವ ಭಾರಿ ಅಪಾಯ ಇರುವುದರಿಂದ ಟೀಮ್‌ ಇಂಡಿಯಾಗೆ ಸಣ್ಣ ತಪ್ಪುಗಳಿಗೂ ಅವಕಾಶವಿಲ್ಲ. ಸದ್ಯ ಅಗ್ರಸ್ಥಾನಗಳಲ್ಲಿ ಮುನ್ನುಗ್ಗುತ್ತಿರುವ ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದು, ಭಾರತ ತಂಡ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಸಂಪೂರ್ಣ ಭದ್ರಪಡಿಸಿಕೊಳ್ಳಬೇಕಾದರೆ ಮುಂಬರುವ ಸರಣಿಗಳಲ್ಲಿ ಗರಿಷ್ಠ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us