AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ವಿಶ್ವಕಪ್​​ಗೆ ಭಾರತದ ಸಂಭಾವ್ಯ ತಂಡ ಹೀಗಿದೆ!

2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಇನ್ನು ಒಂದು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇದ್ದರೂ, ಟೀಮ್ ಇಂಡಿಯಾದ ಅಂತಿಮ 15ರ ಬಳಗ ಯಾರೆಂಬ ಕುತೂಹಲ ಈಗಿನಿಂದಲೇ ಕಾವೇರಿದೆ. ಸದ್ಯ ದೇಶಿ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಸರಣಿಗಳಲ್ಲಿ ಯುವ ಆಟಗಾರರು ನೀಡುತ್ತಿರುವ ಅದ್ಭುತ ಪ್ರದರ್ಶನವು ಹಿರಿಯ ಆಟಗಾರರ ಸ್ಥಾನಕ್ಕೇ ಸವಾಲೊಡ್ಡುವಂತಿದೆ. 

ಏಕದಿನ ವಿಶ್ವಕಪ್​​ಗೆ ಭಾರತದ ಸಂಭಾವ್ಯ ತಂಡ ಹೀಗಿದೆ!
Team India Image Credit source: GettyImages
ಝಾಹಿರ್ ಯೂಸುಫ್
|

Updated on: Nov 10, 2026 | 8:59 AM

Share

2027ರ ಏಕದಿನ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಸಂಭಾವ್ಯ ಆಟಗಾರರ ಪಟ್ಟಿ ಸಿದ್ಧವಾಗಿದೆ. ಸದ್ಯ ಒಟ್ಟು 20 ಆಟಗಾರರ ಬಲಿಷ್ಠ ಕೋರ್ ಗ್ರೂಪ್ ಗುರುತಿಸಲಾಗಿದ್ದು, ಇವರ ಪೈಕಿ ಶ್ರೇಷ್ಠ 15 ಆಟಗಾರರು ವಿಶ್ವಕಪ್‌ನ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಪಟ್ಟಿಯಲ್ಲಿರುವ ಆಟಗಾರರ ವಿವರ ಹೀಗಿದೆ…

  • ಭಾರತದ ಪರ ಏಕದಿನ ವಿಶ್ವಕಪ್​ನಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್​​ಮನ್ ಗಿಲ್ ಕಾಣಿಸಿಕೊಳ್ಳುವುದು ಖಚಿತ. ಇವರೊಂದಿಗೆ ಹೆಚ್ಚುವರಿ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಹೆಸರಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಖಾಯಂ ಎನ್ನಬಹುದು.
  • ನಾಲ್ಕನೇ ಕ್ರಮಾಂಕಕ್ಕಾಗಿ ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಹೆಸರು ಕಾಣಿಸಿಕೊಂಡಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್​ಗಳಾಗಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಖಚಿತ.
  • ಹಾಗೆಯೇ ಆಲ್​​ರೌಂಡರ್​​​ಗಳಾಗಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ.
  • ಇನ್ನು ಬೌಲರ್​​​ಗಳಾಗಿ ಜಸ್​ಪ್ರತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅನ್ಶುಲ್ ಕಂಬೋಜ್, ಕುಲ್ದೀಪ್ ಯಾದವ್ ಹೆಸರುಗಳಿವೆ.

ಬಿಸಿಸಿಐ ಆಯ್ಕೆ ಸಮಿತಿಯು ಈ 20 ಆಟಗಾರರ ಕೋರ್ ಗ್ರೂಪ್‌ನಿಂದಲೇ ಅಂತಿಮ 15 ಸದಸ್ಯರ ಬಲಿಷ್ಠ ವಿಶ್ವಕಪ್ ತಂಡವನ್ನು ಆರಿಸಲಿದೆ. ಇದರರ್ಥ, ಪ್ರಸ್ತುತ ರೇಸ್‌ನಲ್ಲಿರುವ ಐದು ಆಟಗಾರರು ಕೊನೆಕ್ಷಣದಲ್ಲಿ ವಿಶ್ವಕಪ್ ಆಡುವ ಸುವರ್ಣ ಅವಕಾಶದಿಂದ ವಂಚಿತರಾಗುವುದು ಗ್ಯಾರಂಟಿ. ಹಾಗಾದರೆ, ತೀವ್ರ ಪೈಪೋಟಿಯ ನಡುವೆಯೂ ಅಂತಿಮ 15ರ ಬಳಗದಿಂದ ಹೊರಬೀಳುವ ಭೀತಿಯಲ್ಲಿರುವ ಆ ಐದು ದುರದೃಷ್ಟಕರ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ…

ಯಶಸ್ವಿ ಜೈಸ್ವಾಲ್: ಶುಭ್​ಮನ್ ಗಿಲ್, ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿರುವುದರಿಂದ ಯಶಸ್ವಿ ಜೈಸ್ವಾಲ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ ಬ್ಯಾಕಪ್ ಓಪನರ್ ಆಗಿ ಇಶಾನ್ ಕಿಶನ್ ಇದ್ದಾರೆ.

ರುತುರಾಜ್ ಗಾಯಕ್ವಾಡ್: ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಉಪನಾಯಕನಾಗಿರುವುದರಿಂದ ರುತುರಾಜ್ ಗಾಯಕ್ವಾಡ್​ಗೆ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿಲ್ಲ.

ನಿತೀಶ್ ಕುಮಾರ್ ರೆಡ್ಡಿ: ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ನಮನ್ ಧೀರ್ ಕಾರಣದಿಂದಾಗಿ ನಿತೀಶ್ ಕುಮಾರ್ ರೆಡ್ಡಿ ಕೂಡ ಅವಕಾಶವಂಚಿರಾಗಲಿದ್ದಾರೆ.

ವಾಷಿಂಗ್ಟನ್ ಸುಂದರ್: ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ಸತತವಾಗಿ ಕಣಕ್ಕಿಳಿಯುತ್ತಿರುವುದನ್ನು ಗಣನೆಗೆ ತೆಗೆದುಕೊಂಡರೆ, ಸ್ಪಿನ್ ಆಲ್​ರೌಂಡರ್ ಆಗಿ ವಾಷಿಂಗ್ಟನ್ ಸುಂದರ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ.

 ಅನ್ಶುಲ್ ಕಂಬೋಜ್: ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಗುರ್ನೂರ್ ಬ್ರಾರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಹೀಗಾಗಿ ಅನ್ಶುಲ್ ಕಂಬೋಜ್ ಹೊರಗುಳಿಯಬೇಕಾಗಿ ಬರಬಹುದು.

ಏಕದಿನ ವಿಶ್ವಕಪ್​ಗೆ ಭಾರತದ ಸಂಭಾವ್ಯ ತಂಡ:

  1. ಶುಭ್​ಮನ್ ಗಿಲ್
  2. ರೋಹಿತ್ ಶರ್ಮಾ
  3. ವಿರಾಟ್ ಕೊಹ್ಲಿ
  4. ಶ್ರೇಯಸ್ ಅಯ್ಯರ್
  5. ಕೆಎಲ್ ರಾಹುಲ್ (ವಿಕೆಟ್ ಕೀಪರ್)
  6. ಹಾರ್ದಿಕ್ ಪಾಂಡ್ಯ
  7. ಅಕ್ಷರ್ ಪಟೇಲ್
  8. ಕುಲ್ದೀಪ್ ಯಾದವ್
  9. ಜಸ್​ಪ್ರೀತ್ ಬುಮ್ರಾ
  10. ಮೊಹಮ್ಮದ್ ಸಿರಾಜ್
  11. ಗುರ್ನೂರ್ ಬ್ರಾರ್
  12. ಇಶಾನ್ ಕಿಶನ್
  13. ನಮನ್ ಧೀರ್
  14. ಅರ್ಷದೀಪ್ ಸಿಂಗ್
  15. ಹರ್ಷಿತ್ ರಾಣಾ
  16. ವಾಷಿಂಗ್ಟನ್ ಸುಂದರ್
  17. ಅನ್ಶುಲ್ ಕಂಬೋಜ್
  18. ನಿತೀಶ್ ಕುಮಾರ್ ರೆಡ್ಡಿ
  19. ಯಶಸ್ವಿ ಜೈಸ್ವಾಲ್
  20. ರುತುರಾಜ್ ಗಾಯಕ್ವಾಡ್

ಇದನ್ನೂ ಓದಿ: 149 ವರ್ಷಗಳ ಟೆಸ್ಟ್​ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಝಿಂಬಾಬ್ವೆ

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವಕಪ್‌ನಂತಹ ಮಹಾ ಸಮರಕ್ಕೆ ಅಂತಿಮ 15ರ ಬಳಗವನ್ನು ಆರಿಸುವುದು ಬಿಸಿಸಿಐ ಆಯ್ಕೆ ಸಮಿತಿಗೆ ಯಾವಾಗಲೂ ಕತ್ತಿಯ ಮೇಲಿನ ನಡಿಗೆಯೇ ಸರಿ. ಆಟಗಾರರ ಪ್ರಸ್ತುತ ಫಾರ್ಮ್ ಮತ್ತು ದಕ್ಷಿಣ ಆಫ್ರಿಕಾದ ಪಿಚ್‌ಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಆಟಗಾರರ ಪ್ರದರ್ಶನದಲ್ಲಿ ಏರುಪೇರಾದರೆ ಕೊನೆಕ್ಷಣದಲ್ಲಿ ಸಂಭಾವ್ಯ ತಂಡದಲ್ಲಿ ಮಹತ್ವದ ಬದಲಾವಣೆಗಳಾದರೂ ಅಚ್ಚರಿಪಡಬೇಕಿಲ್ಲ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More