AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರುವ 4 ತಂಡಗಳನ್ನು ಹೆಸರಿಸಿದ ಫಿಂಚ್!

ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಟೂರ್ನಿ ಐಸಿಸಿ ಏಕದಿನ ವಿಶ್ವಕಪ್ 2027 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಈ ಮಹಾಸಮರದಲ್ಲಿ ಯಾವ ತಂಡ ಟ್ರೋಫಿ ಗೆಲ್ಲಬಹುದು, ಯಾವ ತಂಡಗಳು ನಾಕೌಟ್ ಹಂತ ತಲುಪಬಹುದು ಎಂಬ ಚರ್ಚೆಗಳು ಜಾಗತಿಕ ಕ್ರಿಕೆಟ್ ವಲಯದಲ್ಲಿ ಈಗಿನಿಂದಲೇ ತೀವ್ರಗೊಂಡಿವೆ. 

ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರುವ 4 ತಂಡಗಳನ್ನು ಹೆಸರಿಸಿದ ಫಿಂಚ್!
Aaron FinchImage Credit source: GettyImages
ಝಾಹಿರ್ ಯೂಸುಫ್
|

Updated on: Oct 11, 2026 | 8:58 AM

Share

ಐಸಿಸಿ ಏಕದಿನ ವಿಶ್ವಕಪ್ 2027 ಆರಂಭಕ್ಕೆ ಇನ್ನು ಒಂದು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇರುವಾಗಲೇ, ಕ್ರಿಕೆಟ್ ವಲಯದಲ್ಲಿ ಸೆಮಿಫೈನಲ್ ತಲುಪುವ ತಂಡಗಳ ಕುರಿತು ಚರ್ಚೆಗಳು ಈಗಿನಿಂದಲೇ ಕಾವು ಪಡೆದುಕೊಂಡಿವೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಅವರು ಇತ್ತೀಚೆಗೆ ತಮ್ಮ ಆರಂಭಿಕ ಮುನ್ಸೂಚನೆಯನ್ನು ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆರೋನ್ ಫಿಂಚ್, ತಮ್ಮ ನೆಚ್ಚಿನ ನಾಲ್ಕು ಬಲಿಷ್ಠ ತಂಡಗಳನ್ನು ಆರಿಸಿದ್ದಾರೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಯಾವಾಗಲೂ ಬಲಿಷ್ಠ ಪ್ರದರ್ಶನ ನೀಡುವ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ಫಿಂಚ್ ಹೆಸರಿಸಿದ 4 ತಂಡಗಳಾವುವು?

ಆರೋನ್ ಫಿಂಚ್ ಅವರ ಪ್ರಕಾರ, 2027ರ ವಿಶ್ವಕಪ್‌ನಲ್ಲಿ ಈ ಕೆಳಗಿನ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ…

  1. ಭಾರತ
  2. ಆಸ್ಟ್ರೇಲಿಯಾ
  3. ಇಂಗ್ಲೆಂಡ್
  4. ಸೌತ್ ಆಫ್ರಿಕಾ

ನ್ಯೂಝಿಲೆಂಡ್, ಪಾಕಿಸ್ತಾನಕ್ಕೆ ಕೋಕ್!

ಸಾಮಾನ್ಯವಾಗಿ ಐಸಿಸಿ ಟೂರ್ನಿಗಳ ನಾಕೌಟ್ ಹಂತಕ್ಕೆ ಸುಲಭವಾಗಿ ಲಗ್ಗೆ ಇಡುವ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ತಂಡಗಳನ್ನು ಫಿಂಚ್ ತಮ್ಮ ಪಟ್ಟಿಯಿಂದ ಹೊರಗಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಫ್ರಿಕನ್ ಪಿಚ್‌ಗಳ ಪರಿಸ್ಥಿತಿ ಮತ್ತು ಸದ್ಯ ತಂಡಗಳು ಹೊಂದಿರುವ ಸಮತೋಲನವನ್ನು ಆಧರಿಸಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಆಫ್ರಿಕಾ ಮಣ್ಣಿನಲ್ಲಿ ಮಹಾಸಮರ:

2027ರ ಅಕ್ಟೋಬರ್ 2 ರಿಂದ ನವೆಂಬರ್ 21 ರವರೆಗೆ ನಡೆಯಲಿರುವ ಈ ಮೆಗಾ ಟೂರ್ನಿಗೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಒಟ್ಟು 14 ತಂಡಗಳು ಪಾಲ್ಗೊಳ್ಳಲಿರುವ ಈ ಜಿದ್ದಾಜಿದ್ದಿನ ಟೂರ್ನಿಯಲ್ಲಿ ಆಫ್ರಿಕಾದ ವಿಭಿನ್ನ ಮತ್ತು ಸವಾಲಿನ ಪಿಚ್‌ಗಳಿಗೆ ಬೇಗನೆ ಹೊಂದಿಕೊಳ್ಳುವ, ಆಳವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್-ಅಪ್ ಹೊಂದಿರುವ ತಂಡಗಳೇ ಅಂತಿಮ ನಾಲ್ಕರ ಘಟ್ಟ ತಲುಪಲಿವೆ ಎಂಬುದು ಫಿಂಚ್ ಅವರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಕೆನಡಾ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಒಟ್ಟಾರೆಯಾಗಿ, ಆರೋನ್ ಫಿಂಚ್ ಅವರ ಈ ಮುಂಚಿತ ಭವಿಷ್ಯವು ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. 2027ರ ಅಕ್ಟೋಬರ್‌ನಲ್ಲಿ ಆಫ್ರಿಕಾ ಮಣ್ಣಿನಲ್ಲಿ ಆರಂಭವಾಗಲಿರುವ ಈ ಮಹಾಸಮರದಲ್ಲಿ, ಫಿಂಚ್ ಲೆಕ್ಕಾಚಾರದಂತೆಯೇ ದೈತ್ಯ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆಯೇ ಅಥವಾ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಭರ್ಜರಿ ಕಮ್‌ಬ್ಯಾಕ್ ಮಾಡಿ ಫಿಂಚ್ ಭವಿಷ್ಯವನ್ನು ಸುಳ್ಳಾಗಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್