AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ವಿಶ್ವಕಪ್​ನ ಸೂಪರ್ ಸೆವೆನ್​​ನ 7 ತಂಡಗಳ ಪಟ್ಟಿ ಪ್ರಕಟ

ವಿಶ್ವ ಕ್ರಿಕೆಟ್‌ನ ಅತ್ಯುನ್ನತ ಮತ್ತು ಪ್ರತಿಷ್ಠಿತ ಜಗತ್ತಿನ ಮಹಾ ಕದನಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ಈ ಬಾರಿ ಕೇವಲ ರನ್ ಹಾಗೂ ವಿಕೆಟ್‌ಗಳ ಆಟವಾಗಿ ಉಳಿದಿಲ್ಲ. ಬದಲಿಗೆ, ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ರೋಚಕ ಹಾಗೂ ಜಿದ್ದಾಜಿದ್ದಿನ ಹೊಸ ಸ್ವರೂಪಕ್ಕೆ ಸಾಕ್ಷಿಯಾಗಲಿದೆ.

ಏಕದಿನ ವಿಶ್ವಕಪ್​ನ ಸೂಪರ್ ಸೆವೆನ್​​ನ 7 ತಂಡಗಳ ಪಟ್ಟಿ ಪ್ರಕಟ
Odi World Cup 2027 Image Credit source: GettyImages
ಝಾಹಿರ್ ಯೂಸುಫ್
|

Updated on: Oct 05, 2026 | 9:54 AM

Share

ಜಾಗತಿಕ ಕ್ರಿಕೆಟ್ ಅಖಾಡದಲ್ಲಿ ಮತ್ತೊಂದು ಮಹಾ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು ಈ ಬಾರಿ ಸಂಪೂರ್ಣ ಹೊಸ ಸ್ವರೂಪದಲ್ಲಿ ಮೂಡಿಬರಲಿದೆ. ವಿಶ್ವದ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ಮತ್ತಷ್ಟು ರೋಚಕಗೊಳಿಸಲು ಐಸಿಸಿ ಈ ಬಾರಿ ‘ಸೂಪರ್-7’  ಎಂಬ ಹೊಸ ಹಂತವನ್ನು ಪರಿಚಯಿಸಿದೆ. ಈ ಹಂತಕ್ಕೆ ಲಗ್ಗೆ ಇಡಲಿರುವ ಆ 7 ಪ್ರಮುಖ ದೈತ್ಯ ತಂಡಗಳು ಯಾವುವು ಮತ್ತು ಇದರ ಹಿಂದಿರುವ ಅಸಲಿ ಲೆಕ್ಕಾಚಾರ ಏನು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಐಸಿಸಿ ಏಕದಿನ ವಿಶ್ವಕಪ್​ನ ಪಂದ್ಯಗಳ ವೇಳಾಪಟ್ಟಿಯನ್ನು ಸುಲಭವಾಗಿ ರೂಪಿಸಲು ವಿಶ್ವದ ಪ್ರಮುಖ 7 ಬಲಿಷ್ಠ ತಂಡಗಳಿಗೆ ‘ಪ್ರೀ-ಸೀಡಿಂಗ್’ ಮಾನ್ಯತೆ ನೀಡಿದೆ. ಒಂದು ವೇಳೆ ಈ ತಂಡಗಳು ಗ್ರೂಪ್ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿ ಅರ್ಹತೆ ಪಡೆದುಕೊಂಡರೆ, ಸೂಪರ್-7 ಹಂತದಲ್ಲಿ ಈ ಕೆಳಗಿನ ಸ್ಥಾನಗಳನ್ನು ಅಲಂಕರಿಸಲಿವೆ.

ಸೂಪರ್ ಸೆವೆನ್​ನ 7 ತಂಡಗಳು:

  1. ಭಾರತ (A1 ಸೀಡಿಂಗ್): ಟೀಮ್ ಇಂಡಿಯಾ ಸದ್ಯ ‘ಗ್ರೂಪ್ ಎ’ ನಲ್ಲಿದ್ದು, ಸೂಪರ್-7 ಹಂತಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತ.
  2. ಆಸ್ಟ್ರೇಲಿಯಾ (A2 ಸೀಡಿಂಗ್): ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಕೂಡ ‘ಗ್ರೂಪ್ ಎ’ ನಿಂದ ಸೂಪರ್-7 ಪ್ರವೇಶಿಸುವ ಬಲಿಷ್ಠ ಸ್ಪರ್ಧಿಯಾಗಿದೆ.
  3. ಪಾಕಿಸ್ತಾನ್ (A3 ಸೀಡಿಂಗ್): ಏಷ್ಯಾದ ಮತ್ತೊಂದು ದೈತ್ಯ ಪಾಕಿಸ್ತಾನ್ ತಂಡಕ್ಕೂ ‘ಗ್ರೂಪ್ ಎ’ ನಿಂದ ಮೊದಲೇ ಸೀಡಿಂಗ್ ಸ್ಥಾನ ನೀಡಲಾಗಿದೆ.
  4. ನ್ಯೂಝಿಲೆಂಡ್ (B1 ಸೀಡಿಂಗ್): ‘ಗ್ರೂಪ್ ಬಿ’ ನಿಂದ ಕಣಕ್ಕಿಳಿಯಲಿರುವ ಕಿವೀಸ್ ಪಡೆ ಸೂಪರ್-7 ನಲ್ಲಿ ಮೊದಲ ಸ್ಥಾನದ ಮೇಲೆ ಕಣ್ಣಿಟ್ಟಿದೆ.
  5. ಸೌತ್ ಆಫ್ರಿಕಾ (B2 ಸೀಡಿಂಗ್): ಜಂಟಿ ಆತಿಥ್ಯ ವಹಿಸಿರುವ ಪ್ರೋಟಿಯಾಸ್ ಪಡೆ ‘ಗ್ರೂಪ್ ಬಿ’ ಯಿಂದ ಸುಲಭವಾಗಿ ಅರ್ಹತೆ ಪಡೆಯುವ ನಿರೀಕ್ಷೆಯಿದೆ.
  6. ಶ್ರೀಲಂಕಾ (B3 ಸೀಡಿಂಗ್): ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಲಂಕಾ ಪಡೆಗೂ ‘ಗ್ರೂಪ್ ಬಿ’ ನಿಂದ ಸ್ಥಾನ ಮೀಸಲಿಡಲಾಗಿದೆ.
  7. ಇಂಗ್ಲೆಂಡ್ (AB4 ಸೀಡಿಂಗ್): ಮಾಜಿ ಚಾಂಪಿಯನ್ಸ್ ಇಂಗ್ಲೆಂಡ್‌ಗೆ ‘ವೈಲ್ಡ್‌ಕಾರ್ಡ್’ ಮಾದರಿಯಲ್ಲಿ ವಿಶೇಷ ಸೀಡಿಂಗ್ (AB4) ಸ್ಥಾನವನ್ನು ಕಲ್ಪಿಸಿಕೊಡಲಾಗಿದೆ.

ಪ್ರೀ-ಸೀಡಿಂಗ್ ಟ್ವಿಸ್ಟ್:

ಗಮನಿಸಬೇಕಾದ ಅಂಶವೆಂದರೆ, ಐಸಿಸಿ ಈಗ ಪ್ರಕಟಿಸಿರುವ ಈ 7 ತಂಡಗಳ ಪಟ್ಟಿ ಅಂತಿಮವೇನಲ್ಲ. ಕೇವಲ ಪಂದ್ಯಗಳ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳನ್ನು ಮುಂಚಿತವಾಗಿಯೇ ಸುಲಭವಾಗಿ ನಿಗದಿಪಡಿಸಲು ಐಸಿಸಿ ಈ ‘ಪೂರ್ವ-ಸೀಡಿಂಗ್’  ಸೂತ್ರವನ್ನು ಬಳಸಿಕೊಂಡಿದೆ.

ಒಂದು ವೇಳೆ ಸೀಡಿಂಗ್ ಪಡೆದಿರುವ ಈ 7 ಪ್ರಮುಖ ತಂಡಗಳಲ್ಲಿ ಯಾವುದಾದರೂ ತಂಡ ಗ್ರೂಪ್ ಹಂತದಲ್ಲೇ ಸೋತು ಹೊರಬಿದ್ದರೆ, ಆ ಸ್ಥಾನವನ್ನು ಆಯಾ ಗ್ರೂಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಬಾಂಗ್ಲಾದೇಶ್, ಝಿಂಬಾಬ್ವೆ ಅಥವಾ ಅಫ್ಘಾನಿಸ್ತಾನದಂತಹ ಇತರ ಅರ್ಹತೆ ಪಡೆದ ತಂಡಗಳು ಕಸಿದುಕೊಳ್ಳಲಿವೆ. ಅಂದರೆ, ಈ ತಂಡಗಳು ಸೂಪರ್-7 ಹಂತಕ್ಕೆ ಪ್ರವೇಶಿಸಲಿವೆ ಎಂಬ ಮುನ್ಸೂಚನೆಯ ಆಧಾರದ ಮೇಲಷ್ಟೇ ಐಸಿಸಿ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.

ಸೂಪರ್-7 ಹಂತದ ರೋಚಕ ಲೆಕ್ಕಾಚಾರ ಹೇಗೆ?

ಟೂರ್ನಿಯ ಆರಂಭಿಕ ಹಂತದಲ್ಲಿ ಒಟ್ಟು 12 ತಂಡಗಳು ತಲಾ 6 ರಂತೆ ಎರಡು ಗ್ರೂಪ್‌ಗಳಾಗಿ (ಗ್ರೂಪ್ ಎ ಮತ್ತು ಗ್ರೂಪ್ ಬಿ) ಸೆಣಸಾಡಲಿವೆ.

  • ನೇರ ಅರ್ಹತೆ: ಗ್ರೂಪ್ ಎ ಮತ್ತು ಗ್ರೂಪ್ ಬಿ ಯಿಂದ ತಲಾ ಟಾಪ್-3 ತಂಡಗಳು (ಒಟ್ಟು 6 ತಂಡಗಳು) ನೇರವಾಗಿ ಸೂಪರ್-7 ಹಂತಕ್ಕೆ ಲಗ್ಗೆ ಇಡಲಿವೆ.
  • ವೈಲ್ಡ್ ಕಾರ್ಡ್ ಎಂಟ್ರಿ: ಉಳಿದ ಕೊನೆಯ 7ನೇ ಸ್ಥಾನಕ್ಕಾಗಿ ಎರಡೂ ಗ್ರೂಪ್‌ಗಳಲ್ಲಿ 4ನೇ ಸ್ಥಾನ ಪಡೆಯುವ ತಂಡಗಳ ನಡುವೆ ನೆಟ್ ರನ್ ರೇಟ್ ಆಧಾರದ ಮೇಲೆ ತೀವ್ರ ಪೈಪೋಟಿ ನಡೆಯಲಿದ್ದು, ಅತ್ಯುತ್ತಮ ನೆಟ್​ ರನ್ ರೇಟ್ ಹೊಂದಿರುವ 4ನೇ ತಂಡಕ್ಕೆ ಸೂಪರ್-7 ಟಿಕೆಟ್ ಸಿಗಲಿದೆ.

ರೌಂಡ್ ರಾಬಿನ್ ಸ್ವರೂಪ:

ಸೂಪರ್-7 ಹಂತಕ್ಕೆ ಬಂದ ನಂತರ ಈ ಏಳೂ ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ತಲಾ ಒಂದೊಂದು ಪಂದ್ಯವನ್ನು ಆಡಲಿವೆ. ಇದರಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಇದನ್ನೂ ಓದಿ: 26 ದಿನಗಳಲ್ಲಿ 10 ಟಿ20 ಪಂದ್ಯಗಳನ್ನಾಡಲಿದೆ ಟೀಮ್ ಇಂಡಿಯಾ

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್ ಕೇವಲ ಬಲಪ್ರದರ್ಶನದ ವೇದಿಕೆಯಲ್ಲ, ಬದಲಿಗೆ ಪ್ರತಿ ಹಂತದಲ್ಲೂ ತಂತ್ರ-ಪ್ರತಿತಂತ್ರಗಳ ಮಹಾ ಸಂಗ್ರಾಮವಾಗಲಿದೆ. ಐಸಿಸಿಯ ಈ ಹೊಸ ‘ಸೂಪರ್-7’ ಫಾರ್ಮ್ಯಾಟ್ ಸಣ್ಣ ತಂಡಗಳಿಗೂ ದೊಡ್ಡ ತಂಡಗಳಿಗೆ ಶಾಕ್ ನೀಡುವ ಸುವರ್ಣ ಅವಕಾಶ ಕಲ್ಪಿಸಿದೆ. ಪೂರ್ವ-ಸೀಡಿಂಗ್ ಲೆಕ್ಕಾಚಾರಗಳು ಏನೇ ಇದ್ದರೂ, ಅಂತಿಮವಾಗಿ ಮೈದಾನದಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರೇ ಸುಲ್ತಾನರು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ