IND vs NEP, Asian Games: ಏಷ್ಯಾನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಜೈಸ್ವಾಲ್: ನೇಪಾಳಕ್ಕೆ 203 ರನ್ಸ್ ಟಾರ್ಗೆಟ್

|

Updated on: Oct 03, 2023 | 8:21 AM

Yashasvi Jaiswal, India vs Nepal Asian Games: ಏಷ್ಯನ್ ಗೇಮ್ಸ್​ನಲ್ಲಿ ಭಾರತ ತಂಡ ನೇಪಾಳ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 202 ರನ್ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 49 ಎಸೆತಗಳಲ್ಲಿ 8 ಫೋರ್, 7 ಅಮೋಘ ಸಿಕ್ಸರ್​ನೊಂದಿಗೆ 100 ರನ್ ಚಚ್ಚಿದರು.

IND vs NEP, Asian Games: ಏಷ್ಯಾನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಜೈಸ್ವಾಲ್: ನೇಪಾಳಕ್ಕೆ 203 ರನ್ಸ್ ಟಾರ್ಗೆಟ್
YASHASVI JAISWAL
Follow us on

ಚೀನಾದ ಹ್ಯಾಂಗ್‌ಝೌನ ಪಿಂಗ್​ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ (Asian Games 2023) ಪುರುಷರ ಟಿ20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಶತಕ ಹಾಗೂ ರಿಂಕು ಸಿಂಗ್- ಶಿವಂ ದುಬೆ ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್​ಗಳಲ್ಲಿ 202 ರನ್ ಸಿಡಿಸಿದೆ.

ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಬೊಂಬಾಟ್ ಆರಂಭ ಒದಗಿಸಿದರು. ಜೈಸ್ವಾಲ್ ಸಿಕ್ಸರ್​ಗಳ ಮಳೆ ಸುರಿಸಿದರೆ ಗಾಯಕ್ವಾಡ್ ಇವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಕೇವಲ 9.5 ಓವರ್​ಗಳಲ್ಲಿ ತಂಡದ ಮೊತ್ತವನ್ನು 100 ಗಡಿ ದಾಟಿಸಿತು. ರುತುರಾಜ್ 23 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ (2) ಹಾಗೂ ಜಿತೇಶ್ ಶರ್ಮಾ (5) ಮೋಡಿ ಮಾಡುವಲ್ಲಿ ವಿಫಲರಾದರು.

ಇದನ್ನೂ ಓದಿ
ಇಂದು ಭಾರತಕ್ಕೆ ಕೊನೆಯ ಅಭ್ಯಾಸ ಪಂದ್ಯ: ಆದರೆ, ಇದು ಕೂಡ ನಡೆಯುವುದು ಅನುಮಾನ
ಟಾಸ್ ಗೆದ್ದ ನೇಪಾಳ: ಭಾರತ ಬ್ಯಾಟಿಂಗ್, ರುತುರಾಜ್-ಜೈಸ್ವಾಲ್ ಸ್ಫೋಟಕ ಆರಂಭ
ಭಾರತದ ವಿರುದ್ಧ ಆಡುವಾಗ ಪಾಕಿಸ್ತಾನ್ ಆಟಗಾರರು ಗಡ ಗಡ ನಡುಗುತ್ತಾರೆ..!
ಏಕದಿನ ವಿಶ್ವಕಪ್ ಪ್ರೊಮೊ ಶೂಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಮಿಂಚಿಂಗ್

ICC World Cup 2023: ಏಕದಿನ ವಿಶ್ವಕಪ್​ನಿಂದ 8 ಆಟಗಾರರು ಔಟ್

ಆದರೆ, ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಜೈಸ್ವಾಲ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಇದು ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಚೊಚ್ಚಕ ಶತಕವಾಗಿದೆ. ಕೇವಲ 49 ಎಸೆತಗಳಲ್ಲಿ 8 ಫೋರ್, 7 ಅಮೋಘ ಸಿಕ್ಸರ್​ನೊಂದಿಗೆ 100 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ಹಾಗೂ ರಿಂಕು ಮನಬಂದಂತೆ ಬ್ಯಾಟ್ ಬೀಸಿದರು. ರಿಂಕು 15 ಎಸೆಗಳಲ್ಲಿ 37 ಹಾಗೂ ದುಬೆ 25 ರನ್ ಸಿಡಿಸಿ ಅಜೇಯತಾಗಿ ಉಳಿದರು. ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು. ನೇಪಾಳ ಪರ ದಿಪೇಂದರ್ ಸಿಂಗ್ 2 ವಿಕೆಟ್ ಪಡೆದರು.

ಜೈಸ್ವಾಲ್ ಸ್ಫೋಟಕ ಆಟದ ವಿಡಿಯೋ ಇಲ್ಲಿದೆ ನೋಡಿ:

 

ಭಾರತ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್ (ನಾಯಕ) , ಯಶಸ್ವಿ ಜೈಸ್ವಾಲ್ , ತಿಲಕ್ ವರ್ಮಾ , ಜಿತೇಶ್ ಶರ್ಮಾ ( ವಿಕೆಟ್ ಕೀಪರ್ ) , ರಿಂಕು ಸಿಂಗ್ , ಶಿವಂ ದುಬೆ , ವಾಷಿಂಗ್ಟನ್ ಸುಂದರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ರವಿ ಬಿಷ್ಣೋಯ್ , ಅವೇಶ್ ಖಾನ್ , ಅರ್ಷ್​ದೀಪ್ ಸಿಂಗ್.

ನೇಪಾಳ ಪ್ಲೇಯಿಂಗ್ ಇಲೆವೆನ್: ಕುಶಾಲ್ ಭರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸೋಂಪಾಲ್ ಕಮಿ, ಕರಣ್ ಕೆಸಿ, ಅಬಿನಾಶ್ ಬೋಹರಾ, ಸಂದೀಪ್ ಲಾಮಿಚಾನೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 am, Tue, 3 October 23