AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಏಕದಿನ ವಿಶ್ವಕಪ್ ಪ್ರೊಮೊ ಶೂಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಮಿಂಚಿಂಗ್

Team India: ಟೀಮ್ ಇಂಡಿಯಾ ತನ್ನ 2ನೇ ಅಭ್ಯಾಸ ಪಂದ್ಯವನ್ನು ಮಂಗಳವಾರ ಆಡಲಿದೆ. ತಿರುವನಂತಪುರದ ಗ್ರೀನ್​ಫೀಲ್ಡ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತದ ಎದುರಾಳಿ ನೆದರ್​ಲೆಂಡ್ಸ್​. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಚೆನ್ನೈಗೆ ಆಗಮಿಸಲಿದ್ದು, ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ.

VIDEO: ಏಕದಿನ ವಿಶ್ವಕಪ್ ಪ್ರೊಮೊ ಶೂಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಮಿಂಚಿಂಗ್
Team India
TV9 Web
| Edited By: |

Updated on: Oct 02, 2023 | 10:29 PM

Share

ಏಕದಿನ ವಿಶ್ವಕಪ್​ನ ಪ್ರೊಮೊ ಶೂಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಹುತೇಕ ತಂಡಗಳ ಫೋಟೋ ಶೂಟ್ ಮುಗಿದಿದ್ದು, ಇದೀಗ ಟೂರ್ನಿಯ ಪ್ರೊಮೊ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ರವಿ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಕಾಣಿಸಿಕೊಂಡಿದ್ದಾರೆ.

ಈ ಚಿತ್ರೀಕರಣದ ವಿಡಿಯೋವನ್ನು ಭಾರತ ಕ್ರಿಕೆಟ್ ತಂಡದ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ಆಟಗಾರರು ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

View this post on Instagram

A post shared by ICC (@icc)

ಕಿಂಗ್ ಕೊಹ್ಲಿ ಇಲ್ಲ:

ಈ ಫೋಟೋ ಶೂಟ್​ನಲ್ಲಾಗಲಿ, ಪ್ರೊಮೊ ವಿಡಿಯೋ ಶೂಟ್​ನಲ್ಲಾಗಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ಅಂದರೆ ವೈಯುಕ್ತಿಕ ಕಾರಣಗಳಿಗಾಗಿ ಕಿಂಗ್ ಕೊಹ್ಲಿ ತಿರುವನಂತಪುರದಿಂದ ಮುಂಬೈಗೆ ಮರಳಿದ್ದಾರೆ. ಹೀಗಾಗಿ ಅವರು ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ.

ಭಾರತದ​​ ಅಭ್ಯಾಸ ಪಂದ್ಯ:

ಟೀಮ್ ಇಂಡಿಯಾ ತನ್ನ 2ನೇ ಅಭ್ಯಾಸ ಪಂದ್ಯವನ್ನು ಮಂಗಳವಾರ ಆಡಲಿದೆ. ತಿರುವನಂತಪುರದ ಗ್ರೀನ್​ಫೀಲ್ಡ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತದ ಎದುರಾಳಿ ನೆದರ್​ಲೆಂಡ್ಸ್​. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಚೆನ್ನೈಗೆ ಆಗಮಿಸಲಿದ್ದು, ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: ICC World Cup 2023: ಏಕದಿನ ವಿಶ್ವಕಪ್​ನಿಂದ 8 ಆಟಗಾರರು ಔಟ್

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಆರ್​. ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ