ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಉಗ್ರರ ಭೀತಿ: ಜೇಟ್ಲಿ ಮೈದಾನಕ್ಕೆ ಟೈಟ್ ಸೆಕ್ಯೂರಿಟಿ!

| Updated By: Team Veegam

Updated on: Oct 30, 2019 | 4:04 PM

ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಇನ್ನು ನಾಲ್ಕೇ ದಿನ ಬಾಕಿಯಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನ ಅಂತಾ ಮರುನಾಮಕರಣ ಮಾಡಿಕೊಂಡಿರುವ ಫಿರೊಝ್ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಕೋಟ್ಲಾ ವಾಯು ಮಾಲಿನ್ಯದಿಂದ ಹದಗೆಟ್ಟಿದೆ. ಆದ್ರೀಗ ವಾಯುಮಾಲಿನ್ಯ ಹಾಳಾಗಲಿ, ಕೋಟ್ಲಾ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟಿಗರೇ ಬೆಚ್ಚಿ ಬಿದ್ದಿದ್ದಾರೆ. ಕಿಂಗ್ ಕೊಹ್ಲಿ ಮೇಲೆ ಉಗ್ರರ ಕಣ್ಣು! ಉಗ್ರರು ಟಾರ್ಗೆಟ್ ಮಾಡಿರೋದೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ. ಕೇರಳದ ಕೋಝಿಕೋಡ್​ನಿಂದ […]

ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಉಗ್ರರ ಭೀತಿ: ಜೇಟ್ಲಿ ಮೈದಾನಕ್ಕೆ ಟೈಟ್ ಸೆಕ್ಯೂರಿಟಿ!
Follow us on

ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಇನ್ನು ನಾಲ್ಕೇ ದಿನ ಬಾಕಿಯಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನ ಅಂತಾ ಮರುನಾಮಕರಣ ಮಾಡಿಕೊಂಡಿರುವ ಫಿರೊಝ್ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಕೋಟ್ಲಾ ವಾಯು ಮಾಲಿನ್ಯದಿಂದ ಹದಗೆಟ್ಟಿದೆ. ಆದ್ರೀಗ ವಾಯುಮಾಲಿನ್ಯ ಹಾಳಾಗಲಿ, ಕೋಟ್ಲಾ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟಿಗರೇ ಬೆಚ್ಚಿ ಬಿದ್ದಿದ್ದಾರೆ.

ಕಿಂಗ್ ಕೊಹ್ಲಿ ಮೇಲೆ ಉಗ್ರರ ಕಣ್ಣು!
ಉಗ್ರರು ಟಾರ್ಗೆಟ್ ಮಾಡಿರೋದೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ. ಕೇರಳದ ಕೋಝಿಕೋಡ್​ನಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎಗೆ ಈ ಮೇಲ್ ಮಾಡಿರೋ ಲಷ್ಕರ್ ಎ ತೋಯ್ಬಾ ಸಂಘಟನೆ ಉಗ್ರಗಾಮಿಗಳು, ದೇಶದ ಪ್ರಮುಖ ರಾಜಕಾರಣಿಗಳ ಜೊತೆ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನೂ ಟಾರ್ಗೆಟ್ ಮಾಡಿದ್ದಾರೆ.

ಕೋಟ್ಲಾ ಪಂದ್ಯಕ್ಕೆ ಟೈಟ್ ಸೆಕ್ಯೂರಿಟಿ!
ಲಷ್ಕರ್​ಎ-ತೋಯ್ಬಾ ಸಂಘಟನೆ ಮಾಡಿರೋ ಈ ಮೇಲ್ ಅನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ಬಿಸಿಸಿಐಗೆ ಕಳುಹಿಸಿಕೊಟ್ಟಿದೆ. ಬಿಸಿಸಿಐ ಉಗ್ರಗಾಮಿಗಳು ಕಳುಹಿಸಿರೋ ಈ ಮೇಲ್ ನೋಡಿ ಬೆಚ್ಚಿ ಬಿದ್ದಿದೆ. ಹೀಗಾಗಿ ಕೋಟ್ಲಾ ಮೈದಾನದಲ್ಲಿ ಹೆಚ್ಚಿನ ಬಿಗಿಬದ್ರತೆ ಒದಗಿಸುವಂತೆ ದೆಹಲಿ ಪೋಲಿಸರಿಗೆ ತಿಳಿಸಿದ್ದಾರೆ. ಆದ್ರೆ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದು ಕೊಂಡಿರೋದ್ರಿಂದ ಹೆಚ್ಚಿನ ತಲೆನೋವಿಲ್ಲ ನಿಜ.

ವಿಂಡೀಸ್ ಪ್ರವಾಸದಲ್ಲೂ ಬಂದಿತ್ತು ಜೀವ ಬೆದರಿಕೆ!
ಇನ್ನು ಇದೇ ವರ್ಷ ಅಗಸ್ಟ್​ನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಆಂಟಿಗುವಾದಲ್ಲಿ ನಡೆಯೋ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಜೀವ ಬೆದರಿಕೆ ಬಂದಿತ್ತು. ಇಡೀ ಟೀಮ್ ಇಂಡಿಯಾವನ್ನ ವಿಂಡೀಸ್ ನೆಲದಲ್ಲಿ ಮುಗಿಸ್ತೀವಿ ಅನ್ನೋ ಇ ಮೇಲ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಂದಿತ್ತು ಆ ಇ ಮೇಲ್ ಅನ್ನ ಪಿಸಿಬಿ ಬಿಸಿಸಿಐಗೆ ಕಳುಹಿಸಿಕೊಟ್ಟಿತ್ತು. ಹೀಗಾಗಿ ಆಂಟಿಗುವಾದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಈ ಹಿಂದೆ ಸಾಕಷ್ಟು ಬಾರಿ ಉಗ್ರಗಾಮಿಗಳು ಭಾರತದ ರಾಜಕಾರಣಿಗಳನ್ನ ಟಾರ್ಗೆಟ್ ಮಾಡಿ ಬೆದರಿಸಿದ್ರು. ಆದ್ರೆ ಇದೆ ಮೊದಲ ಬಾರಿಗೆ ಉಗ್ರಗಾಮಿಗಳು ಕ್ರಿಕೆಟಿಗನೊಬ್ಬನನ್ನ ಟಾರ್ಗೆಟ್ ಮಾಡಿದ್ದಾರೆ. ಅದು ಕೂಡ ಕಿಂಗ್ ಕೊಹ್ಲಿಯನ್ನ. ಈ ಗೊಡ್ಡು ಬೆದರಿಕೆಗೆ ಭಾರತ ಹಿಂಜರಿಯೋದಿಲ್ಲ. ಭಾರತೀಯ ಕ್ರಿಕೆಟಿಗರ ಒಂದು ರೋಮ ಸೋಕಿದ್ರೂ ಉಗ್ರರು ಅದಕ್ಕೆ ಸರಿಯಾದ ದಂಡ ತೆರಬೇಕಾಗುತ್ತೆ ಅನ್ನೋದನನ್ ಮರೆಯೋ ಹಾಗಿಲ್ಲ.

Published On - 9:44 am, Wed, 30 October 19