ರಾಂಚಿ: ತವರೂರಿನ ಜೆಎಸ್ ಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ನೋಡಲು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬರುತ್ತಾರೆ ಎಂದು ಕ್ರೀಡಾಭಿಮಾನಿಗಳು ಕಾಯುತ್ತಿದ್ದರು. ಆದರೆ ಧೋನಿ ಭಾರತೀಯ ಸೇನೆ ಬಳಸುವ ನಿಸ್ಸಾನ್ ಜೊಂಗಾವನ್ನು ಬೀದಿಗಳಲ್ಲಿ ಸವಾರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು.
ಹೊಸ ಜೀಪ್ ಖರೀದಿಸಿದ ನಂತರ ಜೀಪ್ ನಲ್ಲಿ ರೈಡ್ ಮಾಡಿತ್ತಿದ್ದ ಧೋನಿ ಸ್ಥಳೀಯ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಈ ವೇಳೆ ಧೋನಿ ಅಭಿಮಾನಿಗಳು ಅವರ ಆಟೋಗ್ರಾಫ್ ಗೆ ಮುಗಿಬಿದ್ದಿದ್ದಾರೆ. ಅಭಿಮಾನಿಗಳಿಗೆ ನಿರಾಶೆಯಾಗಬಾರದೆಂದು ಧೋನಿ ಪ್ರತಿಯೊಬ್ಬರಿಗೂ ಆಟೋಗ್ರಾಫ್ ನೀಡಿ ಸೆಲ್ಫಿ ತೆಗೆಸಿಕೊಂಡಿದ್ದಾರೆ.
ವಿಶ್ವ ಕಪ್ ಬಳಿಕ ಧೋನಿಯ ನಿವೃತ್ತಿಯ ಕುರಿತು ಭಾರೀ ಚರ್ಚೆಗಳು ಆಗಿದ್ದವು. ಇದರ ನಡುವೆ ಬಿಸಿಸಿಐ ಬಾಂಗ್ಲಾದೇಶದ ಟೂರ್ನಿಗೂ ಧೋನಿಯನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಧೋನಿ ಇಂಡಿಯಾ ಪರ ಆಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿತ್ತು. ನಂತರ ಸೇನೆ ಸೇರಿ ಗಡಿ ಭಾಗ ಕಾಶ್ಮೀರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಬಂದಿದ್ದಾರೆ.
Published On - 3:23 pm, Tue, 22 October 19