ವಿಶ್ವಕಪ್​ನಲ್ಲಿ ತಿಂದುಂಡು ಆಡದೇ ಹೋದ ಪಾಕ್ ನಾಯಕನಿಗೆ ಕೊಕ್

|

Updated on: Oct 19, 2019 | 2:47 PM

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಸರ್ಫರಾಜ್ ಅಹ್ಮದ್​ನನ್ನ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ನಾಯಕತ್ವದಿಂದ ಕಿತ್ತೆಸೆದಿದೆ. ಪಾಕ್​ನ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದ ಸರ್ಫರಾಜ್ ಅಹ್ಮದ್​ ಇಂದು ನಾಯಕತ್ವವನ್ನೇ ಕಳೆದುಕೊಂಡಿದ್ದಾನೆ. ಸರ್ಫರಾಜ್ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್​ನಲ್ಲಷ್ಟೇ ಅಲ್ಲದೆ ಎಲ್ಲಾ ಮ್ಯಾಚ್​ಗಳಲ್ಲೂ ಸರಣಿ ಸೋಲು ಅನುಭವಿಸಿದೆ. ಇತ್ತೀಚೆಗಷ್ಟೇ ತವರಿನಲ್ಲೇ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಪಾಕ್ ಕ್ಲೀನ್ ಸ್ವೀಪ್ ಆಗಿತ್ತು. ಹೀಗಾಗಿ ಸರ್ಫರಾಜ್ ವಿರುದ್ಧ ಅಭಿಮಾನಿಗಳು ಹೋದಲ್ಲೆಲ್ಲಾ ಕೆಂಡ ಕಾರೋಕೆ ಶುರು ಮಾಡಿದರು. ಸರ್ಫರಾಜ್ ಕಟೌಟ್ ಕಂಡಲ್ಲಿ […]

ವಿಶ್ವಕಪ್​ನಲ್ಲಿ ತಿಂದುಂಡು ಆಡದೇ ಹೋದ ಪಾಕ್ ನಾಯಕನಿಗೆ ಕೊಕ್
Follow us on

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಸರ್ಫರಾಜ್ ಅಹ್ಮದ್​ನನ್ನ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ನಾಯಕತ್ವದಿಂದ ಕಿತ್ತೆಸೆದಿದೆ.

ಪಾಕ್​ನ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದ ಸರ್ಫರಾಜ್ ಅಹ್ಮದ್​ ಇಂದು ನಾಯಕತ್ವವನ್ನೇ ಕಳೆದುಕೊಂಡಿದ್ದಾನೆ. ಸರ್ಫರಾಜ್ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್​ನಲ್ಲಷ್ಟೇ ಅಲ್ಲದೆ ಎಲ್ಲಾ ಮ್ಯಾಚ್​ಗಳಲ್ಲೂ ಸರಣಿ ಸೋಲು ಅನುಭವಿಸಿದೆ. ಇತ್ತೀಚೆಗಷ್ಟೇ ತವರಿನಲ್ಲೇ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಪಾಕ್ ಕ್ಲೀನ್ ಸ್ವೀಪ್ ಆಗಿತ್ತು. ಹೀಗಾಗಿ ಸರ್ಫರಾಜ್ ವಿರುದ್ಧ ಅಭಿಮಾನಿಗಳು ಹೋದಲ್ಲೆಲ್ಲಾ ಕೆಂಡ ಕಾರೋಕೆ ಶುರು ಮಾಡಿದರು. ಸರ್ಫರಾಜ್ ಕಟೌಟ್ ಕಂಡಲ್ಲಿ ಕಾಲಿಂದ ತುಳಿದು ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದರು.

ಪಾಕಿಸ್ತಾನದಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪಾಕ್ ಕ್ರಿಕೆಟ್ ತಂಡಕ್ಕೆ ಪಿಸಿಬಿ ಮೇಜರ್ ಸರ್ಜರಿ ಮಾಡಿದೆ. ಅದೇನಂದರೆ ಪಾಕ್ ತಂಡಕ್ಕೆ ಬಹುನಾಯಕತ್ವನ್ನು ಜಾರಿಗೆ ತಂದಿದೆ. ಪಾಕ್​ನ ಟೆಸ್ಟ್ ತಂಡಕ್ಕೆ ಸರ್ಫರಾಜ್ ಅಹ್ಮದ್​ನನ್ನು ಕಿತ್ತೆಸೆದಿರೋ ಪಾಕ್ ಕ್ರಿಕೆಟ್ ಮಂಡಳಿ ಅಝರ್ ಅಲಿಯನ್ನು ನಾಯಕನನ್ನಾಗಿ ನೇಮಿಸಿದೆ. ಏಕದಿನ ಕ್ರಿಕೆಟ್ ತಂಡಕ್ಕೆ ಸರ್ಫರಾಜ್ ಅಹ್ಮದ್​ನನ್ನೇ ನಾಯಕನನ್ನಾಗಿರಿಸಿದೆ. ಟಿ20ಗೆ ಬಾಬರ್ ಅಝಮ್​ಗೆ ನಾಯಕತ್ವ ನೀಡಿದೆ.

2007ರ ಚಾಂಪಿಯನ್ ಟ್ರೋಪಿಯಲ್ಲಿ ಟೀಂ ಇಂಡಿಯಾವನ್ನು ಮಣಿಸಿದ್ದ ಅನ್ನೋ ಕಾರಣಕ್ಕೆ ಸರ್ಫರಾಜ್​ನನ್ನು ಏಕದಿನ ನಾಯಕತ್ವದಿಂದ ಕಿತ್ತು ಹಾಕಿರಲಿಲ್ಲ. ಅಲ್ಲದೆ, ಪಾಕ್​ನ ಹೊಸ ಕೋಚ್ ಮಿಸ್ವಾ ಮಾತಿಗೆ ಆಟಗಾರರು ಮನ್ನಣೆ ಕೊಡ್ತಿರಲಿಲ್ಲ. ಇದರಿಂದ ಮಿಸ್ವಾ ಕೂಡಾ ಪಾಕ್ ಕ್ರಿಕೆಟಿಗರ ದುರ್ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸರ್ಫರಾಜ್ ನಾಯಕತ್ವದ ತಂಡ ಇತ್ತೀಚೆಗೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಆದ್ರೀಗ ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲಿ ಸೋತು ಸೋತು ಸುಣ್ಣವಾಗಿರೋ ಪಾಕಿಸ್ತಾನ ತಂಡಕ್ಕೆ ಹೊಸ ರೂಪ ನೀಡೋದಕ್ಕೆ ಮುಂದಾಗಿದೆ. ಹೀಗಾಗಿ ನಾಯಕ ಸರ್ಫರಾಜ್​ನನ್ನೇ ಕಿತ್ತೆಸೆದಿರೋ ಪಾಕ್ ಕ್ರಿಕೆಟ್ ಮಂಡಳಿ ಬಹು ನಾಯಕತ್ವವನ್ನ ಜಾರಿಗೆ ತಂದಿದೆ.

Published On - 1:28 pm, Sat, 19 October 19