ರಾಜ್ಯಮಟ್ಟದ ಎಂ ಎಸ್ ರಾಮಯ್ಯ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ದೇಶ್ನಾಗೆ ಡಬಲ್ ಪ್ರಶಸ್ತಿ

| Updated By: ಪೃಥ್ವಿಶಂಕರ

Updated on: Sep 07, 2022 | 5:05 PM

ರಾಜ್ಯ ಮಟ್ಟದ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಹಾಗೂ 17 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದೇಶ್ನಾ ಎಂ ವೆಂಕಟೇಶ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ರಾಜ್ಯಮಟ್ಟದ ಎಂ ಎಸ್ ರಾಮಯ್ಯ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ದೇಶ್ನಾಗೆ ಡಬಲ್ ಪ್ರಶಸ್ತಿ
ಸ್ಪರ್ಧಿಗಳೊಂದಿಗೆ ರಕ್ಷಾ ರಾಮಯ್ಯ
Follow us on

ಶಿಕ್ಷಣ ತಜ್ಞ ಎಂ.ಎಸ್. ರಾಮಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಬೆಂಗಳೂರು ಗ್ರಾಮೀಣ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್​ನಿಂದ (Table Tennis Association) ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಟೇಬಲ್ ಟೆನಿಸ್ (Table Tennis ) ಟೂರ್ನಿಯ ಮಹಿಳೆಯರ ಸಿಂಗಲ್ಸ್ ಹಾಗೂ 17 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದೇಶ್ನಾ ಎಂ ವೆಂಕಟೇಶ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಬಾಲಕರ 17 ವಯೋಮಿತಿಯೊಳಗಿನ ವಿಭಾಗದಲ್ಲಿ ರೋಹಿತ್ ಶಂಕರ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಬಾಲಕಿಯರ 19 ವಯೋಮಿತಿಯೊಳಗಿನ ವಲಯದಲ್ಲಿ ಅನರ್ಘ್ಯ ಮಂಜುನಾಥ್, 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಕಾಶ್ ಕೆ.ಜೆ, ಪ್ರಶಸ್ತಿ ಗೆದ್ದರು. ಹಾಗೆಯೇ ಪುರುಷರ ಸಿಂಗಲ್ಸ್​ನಲ್ಲಿ ರಕ್ಷಿತ್ ಆರ್. ಬಾರಿಗಿಬಾದ್, ಎನ್.ಎಂ.ಎಸ್. ವಿಭಾಗದಲ್ಲಿ ಪಿ. ಯಶವಂತ್ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಪ್ರಶಸ್ತಿ ಗೆದ್ದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರ ಪ್ರದೇಶ ಉಸ್ತುವಾರಿ ಎಂ.ಎಸ್. ರಕ್ಷಾ ರಾಮಯ್ಯ ಮಾತನಾ, ಟೇಬಲ್ ಟೆನಿನ್ ಅತ್ಯಂತ ಚುರುಕಿನ ಆಟ. ಮೈ, ಮನಸ್ಸಿಗೆ ಕಸರತ್ತು ನೀಡುವ, ಸದಾ ನಮ್ಮನ್ನು ಜಾಗೃತವಾಗಿಡುವಂತೆ ಮಾಡುವ ಕ್ರೀಡೆ. ಟೇಬಲ್ ಟೆನಿಸ್ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲಾ ವಯೋಮಾನದವರ ಕ್ರೀಡೆ ಇದಾಗಿದ್ದು, ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಇಲ್ಲಿ ಪ್ರಶಸ್ತಿ ಗೆದ್ದವರು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.

Published On - 5:05 pm, Wed, 7 September 22