ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು (ICC T20 Rankings) ಬಿಡುಗಡೆ ಮಾಡಿದ್ದು, ಹೊಸ ಶ್ರೇಯಾಂಕದಲ್ಲಿ, ಬಾಬರ್ ಅಜಮ್ (Babar Azam) ಬದಲಿಗೆ ಸೂರ್ಯಕುಮಾರ್ ಯಾದವ್ (Suryakumar Yadav) ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇವರಿಬ್ಬರ ಕದನದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ಗೆ ದೊಡ್ಡ ಲಾಭವಾಗಿದೆ. ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಈಗ ಟಿ20ಯಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದ್ದಾರೆ. ಅವರು ತಮ್ಮದೇ ದೇಶಬಾಂಧವ ಮತ್ತು ಆರಂಭಿಕ ಪಾಲುದಾರ ಬಾಬರ್ ಅಜಮ್ ಅವರನ್ನು ಹಿಂದುಕ್ಕುವ ಮೂಲಕ ಈ ಸ್ಥಾನವನ್ನು ಸಾಧಿಸಿದ್ದಾರೆ. ಈ ಮೊದಲು ಬಾಬರ್ ಆಜಮ್ ನಂಬರ್ ಒನ್ ಸ್ಥಾನದಲ್ಲಿದ್ದರು. ಈ ಹಿಂದೆ ಟಿ20 ರ್ಯಾಂಕಿಂಗ್‌ನಲ್ಲಿ ಬರಪೂರ ಲಾಭ ಪಡೆದಿದ್ದ ಭಾರತದ ಸೂರ್ಯಕುಮಾರ್ ಯಾದವ್ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ.
ಬಾಬರ್- ಸೂರ್ಯಕುಮಾರ್ ಕದನದಲ್ಲಿ ರಿಜ್ವಾನ್ಗೆ ಲಾಭ!
ಏಷ್ಯಾಕಪ್ ಅಥವಾ ಮೊದಲು ಆಡಿದ ಟಿ20 ಸರಣಿಯಲ್ಲಿ ಹಾಂಕಾಂಗ್ ವಿರುದ್ಧ ಸೂರ್ಯಕುಮಾರ್ ಯಾದವ್ ತೋರಿದ ರೀತಿಯ ಪ್ರದರ್ಶನ, ಅವರು ಬಾಬರ್ ಅಜಮ್ ಅವರನ್ನು ಟಿ20 ನಂ.1 ರ್ಯಾಂಕಿಂಗ್ನಿಂದ ಕೆಳಕ್ಕಿಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಏಷ್ಯಾಕಪ್ನಲ್ಲಿ ಸೂರ್ಯಕುಮಾರ್ ಯಾದವ್ ಮಾತ್ರವಲ್ಲ ಬಾಬರ್ ಅಜಮ್ ಕೂಡ ವಿಫಲರಾಗಿದ್ದರು. ಆದರೆ ಅವರ ವೈಫಲ್ಯದ ಮಧ್ಯೆ, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ನಲ್ಲಿ ಕೆಲವು ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರಿಂದ ಇದು ICC ಯ ಹೊಸ T20 ರ‍್ಯಾಂಕಿಂಗ್ ಪಟ್ಟಿಯ ಮೇಲೆ ಪ್ರಭಾವ ಬೀರಿದೆ.
ತಲಾ ಒಂದು ಸ್ಥಾನ ಕಳೆದುಕೊಂಡ ಬಾಬರ್ ಮತ್ತು ಸೂರ್ಯ
ಹೊಸ ಟಿ20 ಶ್ರೇಯಾಂಕದಲ್ಲಿ ಬಾಬರ್ ಅಜಂ ಮತ್ತು ಸೂರ್ಯಕುಮಾರ್ ಯಾದವ್ ತಲಾ ಒಂದೊಂದು ಸ್ಥಾನ ಕಳೆದುಕೊಂಡಿದ್ದಾರೆ. ಬಾಬರ್ ಆಜಮ್ ನಂಬರ್ ಒನ್ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಅದೇ ಸಮಯದಲ್ಲಿ, ಸೂರ್ಯಕುಮಾರ್ ಯಾದವ್ ಹೊಸ ಶ್ರೇಯಾಂಕದಲ್ಲಿ ಅಗ್ರ 3ನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಏಡನ್ ಮಾರ್ಕ್ರಾಮ್ ಈಗ ಟಿ 20 ರ್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ 3 ನೇ ಸ್ಥಾನವನ್ನು ಗಳಿಸಿದ್ದಾರೆ.
A new No.1 ?
Pakistan skipper Babar Azam has been dethroned at the top of the @MRFWorldwide ICC Men’s T20I Player Rankings for batters?https://t.co/Uz4IN73bj8
— ICC (@ICC) September 7, 2022
ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ ನಂ.1
ಐಸಿಸಿಯ ನೂತನ ಟಿ20 ಶ್ರೇಯಾಂಕದ ಅಗ್ರ 5 ಪಟ್ಟಿಯಲ್ಲಿ ಪಾಕಿಸ್ತಾನ 2 ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೆ, ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ ಒಬ್ಬೊಬ್ಬ ಬ್ಯಾಟ್ಸ್‌ಮನ್‌ಗಳನ್ನು ಹೊಂದಿವೆ. ಬೌಲರ್‌ಗಳ ಟಿ20 ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಜೋಸ್ ಹೇಜಲ್‌ವುಡ್ ಮೊದಲ ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಭಾರತದ ಯಾವುದೇ ಬೌಲರ್ ಇಲ್ಲ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ಆಲ್ರೌಂಡರ್ ವಿಭಾಗದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ 5ನೇ ಸ್ಥಾನದಲ್ಲಿದ್ದಾರೆ.
Published On - 3:16 pm, Wed, 7 September 22