India vs England: ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

TV9kannada Web Team

TV9kannada Web Team | Edited By: pruthvi Shankar

Updated on: Sep 07, 2022 | 2:36 PM

India vs England: ಮೂರು ಪಂದ್ಯಗಳ ಸರಣಿಯು ಸೆಪ್ಟೆಂಬರ್ 10 ರಂದು ಆರಂಭವಾಗಲಿದ್ದು, ಈ ಸರಣಿಗೂ ಇಂಗ್ಲೆಂಡ್‌ ತಂಡದ ನಾಯಕಿ ಹೀದರ್ ನೈಟ್ ಗೈರಾಗಲಿದ್ದಾರೆ.

India vs England: ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ
India vs England

ಭಾರತ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ (India vs England) ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. ಮೂರು ಪಂದ್ಯಗಳ ಸರಣಿಯು ಸೆಪ್ಟೆಂಬರ್ 10 ರಂದು ಆರಂಭವಾಗಲಿದ್ದು, ಈ ಸರಣಿಗೂ ಇಂಗ್ಲೆಂಡ್‌ ತಂಡದ ನಾಯಕಿ ಹೀದರ್ ನೈಟ್ ಗೈರಾಗಲಿದ್ದಾರೆ. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ಹೀದರ್ ಗಾಯಗೊಂಡಿದ್ದರು. ಅವರ ಅನುಪಸ್ಥಿತಿಯಲ್ಲಿ ನಟಾಲಿ ಸೀಬರ್ ಭಾರತ ವಿರುದ್ಧ ಮುನ್ನಡೆ ಸಾಧಿಸಲಿದ್ದಾರೆ. ಹೀದರ್ ನೈಟ್‌ನಂತೆ ಇಂಗ್ಲೆಂಡ್‌ನ ಪೇಸ್ ಬೌಲಿಂಗ್ ಆಲ್‌ರೌಂಡರ್ ಕ್ಯಾಥರೀನ್ ಬ್ರಂಟ್ ಕೂಡ ಈ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗುವುದು.

ಅವರ ಬದಲಿಗೆ ವೇಗಿ ಲಾರೆನ್ ಬೆಲ್ ಅವರನ್ನು ಮೊದಲ ಬಾರಿಗೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ದಿ ಹಂಡ್ರೆಡ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೇಲ್, 8 ಪಂದ್ಯಗಳಲ್ಲಿ 11 ವಿಕೆಟ್‌ಗಳೊಂದಿಗೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಅವುಗಳಲ್ಲಿ 10 ರನ್‌ಗಳಿಗೆ 4 ವಿಕೆಟ್‌ ಪಡೆದಿದ್ದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಲಿಸಾ ಕೀಟ್ಲಿ ಅವರ ಕೊನೆಯ ಸರಣಿ ಇದಾಗಿದ್ದು, ಸರಣಿಗೂ ಮುನ್ನ ಮಾತನಾಡಿದ ಅವರು, ‘ಭಾರತ ವಿರುದ್ಧದ ಸರಣಿಯೊಂದಿಗೆ ನಾನು ನನ್ನ ಕರ್ತವ್ಯವನ್ನು ಮುಗಿಸುತ್ತಿದ್ದೇನೆ. ಈ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಭಾರತ ಅತ್ಯಂತ ಬಲಿಷ್ಠ ತಂಡ. ಅವರನ್ನು ಸೋಲಿಸಬೇಕಾದರೆ ಅತ್ಯುತ್ತಮ ಕ್ರಿಕೆಟ್ ಆಡಬೇಕು’ ಎಂದರು. ಅಂತಹ ಮಹತ್ವದ ಸರಣಿಯಲ್ಲಿ ಕ್ಯಾಥರೀನ್ ಬ್ರಾಂಟ್‌ಗೆ ವಿಶ್ರಾಂತಿ ನೀಡುವ ಬಗ್ಗೆ ಕೀಟ್ಲಿ, ‘ಕ್ಯಾಥರೀನ್ ಅವರೊಂದಿಗೆ ಚರ್ಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸರಣಿಯಲ್ಲಿ ವಿಶ್ರಾಂತಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಅವರು T20 ಮತ್ತು ಏಕದಿನ ಸರಣಿಗೂ ವಿಶ್ರಾಂತಿ ಪಡೆದಿದ್ದಾರೆ. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಾಗಿ ತಂಡಕ್ಕೆ ಮರಳಲಿದ್ದಾರೆ ಎಂದು ಕೀಟ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಅವರ ಅನುಪಸ್ಥಿತಿಯಲ್ಲಿ ಲಾರೆನ್ ಬೆಲ್​ರಂತಹ ಬೌಲರ್​ಗೆ ಇದು ಉತ್ತಮ ಅವಕಾಶವಾಗಿದೆ. ದಿ ಹಂಡ್ರೆಡ್​ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು. ಅವರ ಜೊತೆಗೆ ಆಲಿಸ್ ಕ್ಯಾಪ್ಸೆ, ಫ್ರೇಯಾ ಕೆಂಪ್, ಇಸಿ ವಾಂಗ್ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ನೀವು ಯುವ ಬೌಲಿಂಗ್ ಲೈನ್-ಅಪ್ ಅನ್ನು ನೋಡಬಹುದು ಎಂದರು.

T20 ಸರಣಿಯ ನಂತರ ಮೂರು ಪಂದ್ಯಗಳ ODI ಸರಣಿ ಕೂಡ ನಡೆಯಲಿದ್ದು, ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಇನ್ನೂ ಏಕದಿನ ತಂಡವನ್ನು ಪ್ರಕಟಿಸಿಲ್ಲ. ಆದರೆ ಭಾರತ ಕ್ರಿಕೆಟ್ ತಂಡ ಮಾತ್ರ ಎರಡು ಸರಣಿಗಳಿಗೆ ಸಿದ್ಧವಾಗಿದೆ.

ಇಂಗ್ಲೆಂಡ್ ಟಿ20 ತಂಡ: ನಟಾಲಿ ಸೈಬರ್ (ನಾಯಕಿ), ಲಾರೆನ್ ಬೆಲ್, ಮಾಯಾ ಬೋಶಿಯರ್, ಆಲಿಸ್ ಕ್ಯಾಪ್ಸೆ, ಕ್ಯಾಥರೀನ್ ಕ್ರಾಸ್, ಫ್ರೇಯಾ ಡೇವಿಸ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಸಾರಾ ಗ್ಲೆನ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಬ್ರಿಯೊನಿ ಸ್ಮಿತ್, ಇಸ್ಸಿ ವಾಂಗ್, ಡ್ಯಾನಿ ವಾಂಗ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada