Viral Video: ನಾಯಕ ಹೀಗಾ ನಡೆಸಿಕೊಳ್ಳೋದು? ರೋಹಿತ್ ಶರ್ಮಾ ವಿರುದ್ಧ ಆಕ್ರೋಶ

Rohit Sharma: ಯುವ ಬೌಲರ್​ರೊಬ್ಬರು 7 ರನ್​ಗಳನ್ನು ನಿಯಂತ್ರಿಸಬೇಕಿದ್ದರೆ, ಆತನ ಪ್ಲ್ಯಾನಿಂಗ್ ಕೂಡ ಮುಖ್ಯವಾಗುತ್ತದೆ. ಇದಾಗ್ಯೂ ರೋಹಿತ್ ಶರ್ಮಾ ಅರ್ಷದೀಪ್ ಸಿಂಗ್ ಅವರ ಯೋಜನೆಗಳಿಗೆ ಮಣೆ ಹಾಕದಿರುವುದು ಅಚ್ಚರಿಗೆ ಕಾರಣವಾಗಿದೆ.

Viral Video: ನಾಯಕ ಹೀಗಾ ನಡೆಸಿಕೊಳ್ಳೋದು? ರೋಹಿತ್ ಶರ್ಮಾ ವಿರುದ್ಧ ಆಕ್ರೋಶ
Rohit Sharma
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 07, 2022 | 1:55 PM

Asia Cup 2022: ಏಷ್ಯಾಕಪ್​ನ ಸೂಪರ್​-4 ಹಂತದಲ್ಲಿನ 2ನೇ ಪಂದ್ಯದಲ್ಲೂ ಟೀಮ್ ಇಂಡಿಯಾ (Team India) ಸೋಲನುಭವಿಸಿದೆ. ಶ್ರೀಲಂಕಾ ವಿರುದ್ದ ದುಬೈ ಇಂಟರ್​ನ್ಯಾಷನಲ್​ ಮೈದಾನದಲ್ಲಿ ನಡೆದ ಈ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಅಂತಿಮ ಓವರ್​ವರೆಗೂ ಸಾಕಿದ್ದ ಈ ಪಂದ್ಯದಲ್ಲಿ ಯುವ ಬೌಲರ್ ಅರ್ಷದೀಪ್ ಸಿಂಗ್ ಗೆಲುವಿನ ಆಸೆ ಚಿಗುರಿಸಿದ್ದರು. ಕೊನೆಯ ಓವರ್​ನಲ್ಲಿ ಕೇವಲ 7 ರನ್​ಗಳ ಟಾರ್ಗೆಟ್ ಪಡೆದ ಶ್ರೀಲಂಕಾ ತಂಡವನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ಅರ್ಷದೀಪ್ ಯಶಸ್ವಿಯಾಗಿದ್ದರು.

ರೋಚಕಘಟ್ಟದತ್ತ ಸಾಗುತ್ತಿದ್ದ ಅಂತಿಮ ಎಸೆತಗಳ ವೇಳೆ ಅರ್ಷದೀಪ್ ಸಿಂಗ್ ಫೀಲ್ಡಿಂಗ್ ಬದಲಾವಣೆ ಬಯಸಿದ್ದರು. ಇದನ್ನು ನಾಯಕ ರೋಹಿತ್ ಶರ್ಮಾ ಮುಂದಿಟ್ಟಾಗ, ಅದನ್ನು ಕೇಳಿಯೂ ಕೇಳದಂತೆ ಬೆನ್ನು ತೋರಿಸಿ ಅಲ್ಲಿಂದ ತೆರಳಿದರು. ರೋಹಿತ್ ಶರ್ಮಾ ಅವರ ಈ ನಡೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾರೀ ಆಕ್ರೋಶಗಳು ಕೂಡ ಕೇಳಿ ಬರುತ್ತಿದೆ.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಕೆಂದರೆ ಯುವ ಬೌಲರ್​ರೊಬ್ಬರು 7 ರನ್​ಗಳನ್ನು ನಿಯಂತ್ರಿಸಬೇಕಿದ್ದರೆ, ಆತನ ಪ್ಲ್ಯಾನಿಂಗ್ ಕೂಡ ಮುಖ್ಯವಾಗುತ್ತದೆ. ಇದಾಗ್ಯೂ ರೋಹಿತ್ ಶರ್ಮಾ ಅರ್ಷದೀಪ್ ಸಿಂಗ್ ಅವರ ಯೋಜನೆಗಳಿಗೆ ಮಣೆ ಹಾಕದಿರುವುದು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಸಹ ಆಟಗಾರನೊಬ್ಬ ನಾಯಕನ ಮುಂದೆ ತನ್ನ ಪ್ಲ್ಯಾನ್​ಗಳನ್ನು ಮುಂದಿಟ್ಟಾಗ, ಕನಿಷ್ಠ ಪಕ್ಷ ಅದನ್ನು ಕೇಳುವ ಮನಸ್ಸಾದರೂ ಮಾಡಬೇಕೆಂದು ಅನೇಕರು ರೋಹಿತ್ ಶರ್ಮಾಗೆ ಕಿವಿಮಾತು ಹೇಳಿದ್ದಾರೆ.

ಇನ್ನು ಕೆಲವರು ರೋಹಿತ್ ಶರ್ಮಾ ಅವರ ವರ್ತನೆಯ ಬಗ್ಗೆ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದು, ಮೈದಾನದಲ್ಲಿ ಯುವ ಆಟಗಾರರ ಮಾತು ಕೇಳಲು ಆಗದಿದ್ದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ತಬ್ಬಿಕೊಂಡು ಪ್ರಯೋಜನವಿಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 72 ರನ್​ ಬಾರಿಸಿದರು. ಈ ಭರ್ಜರಿ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್​ ಕಲೆಹಾಕಿತು.

174 ರನ್​ಗಳ ಟಾರ್ಗೆಟ್ ಪಡೆದ ಶ್ರೀಲಂಕಾ ಪರ ಪಾತುಂ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಭರ್ಜರಿ ಆರಂಭ ಒದಗಿಸಿದ್ದರು. ಇಬ್ಬರು ಆರಂಭಿಕರು ಮೊದಲ ವಿಕೆಟ್​ಗೆ 97 ರನ್​ಗಳ ಜೊತೆಯಾಟವಾಡಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರು. ಅದರಂತೆ ಅಂತಿಮ ಓವರ್​ನಲ್ಲಿ ಶ್ರೀಲಂಕಾಗೆ ಗೆಲ್ಲಲು 7 ರನ್​ಗಳ ಅವಶ್ಯಕತೆಯಿತ್ತು.

ಕೊನೆಯ ಓವರ್​ನಲ್ಲಿ ಅತ್ಯುತ್ತಮವಾಗಿ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಶ್ರೀಲಂಕಾ ಬ್ಯಾಟ್ಸ್​ಮನ್​ಗಳಾದ ಭಾನುಕಾ ರಾಜಪಕ್ಸೆ ಹಾಗೂ ದುಸನ್ ಶಾನಕರನ್ನು ಇಕ್ಕಟಿಗೆ ಸಿಲುಕಿಸಿದರು. ಆದರೆ 5ನೇ ಎಸೆತದಲ್ಲಿ ರನೌಟ್ ಮಾಡುವ ಅವಕಾಶವನ್ನು ರಿಷಭ್ ಪಂತ್ ಹಾಗೂ ಅರ್ಷದೀಪ್ ಸಿಂಗ್ ತಪ್ಪಿಸಿಕೊಂಡರು. ಅತ್ತ ಓವರ್ ಥ್ರೋನಲ್ಲಿ ಒಂದು ರನ್ ಓಡುವ ಮೂಲಕ ಶ್ರೀಲಂಕಾ ತಂಡವು 19.5 ಓವರ್​ನಲ್ಲಿ 174 ರನ್​ ಗಳಿಸಿ 6 ವಿಕೆಟ್​ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಏಷ್ಯಾಕಪ್​ ಫೈನಲ್​ ಆಡುವುದನ್ನು ಖಚಿತಪಡಿಸಿಕೊಂಡಿದೆ.

ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ