IND vs ENG: ಸೂರ್ಯ ಮುಳುಗದ ನಾಡಿನಲ್ಲಿ ದಾಖಲೆಗಳ ಮಳೆ ಸುರಿಸಿದ ಸೂರ್ಯ..!
Suryakumar Yadav: ಟೀಂ ಇಂಡಿಯಾದ ಈ ಸ್ಟಾರ್ ಬ್ಯಾಟ್ಸ್‌ಮನ್ ಕೇವಲ 55 ಎಸೆತಗಳಲ್ಲಿ 117 ರನ್‌ಗಳ ಸ್ಮರಣೀಯ ಮತ್ತು ಅದ್ಭುತ ಇನ್ನಿಂಗ್ಸ್ ಆಡಿದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಮೊದಲ ಶತಕವಾಗಿದೆ.
ಟಿ20 ವಿಶ್ವಕಪ್ (T20 World Cup)ಗೆ 100 ದಿನಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಭಾರತ ತಂಡ ಕೂಡ ಇದಕ್ಕೆ ಭಿನ್ನವಾಗಿಲ್ಲ. ವಿಶ್ವಕಪ್‌ಗೂ ಮುನ್ನ ಭಾರತ ತಂಡ ಇಂಗ್ಲೆಂಡ್ ತಂಡವನ್ನು ದೊಡ್ಡ ಸವಾಲಾಗಿ ಎದುರಿಸಬೇಕಾಗಿತ್ತು. ಮತ್ತು ಇದರಲ್ಲಿ ಟೀಂ ಇಂಡಿಯಾ (Team India) ಯಾವುದೇ ತೊಂದರೆಯಿಲ್ಲದೆ ಯಶಸ್ಸು ಸಾಧಿಸಿದೆ. ಮೂರು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಈಗಾಗಲೇ ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತ್ತು. ಜುಲೈ 10ರ ಭಾನುವಾರದಂದು ನಡೆದ ಕೊನೆಯ ಪಂದ್ಯದಲ್ಲಿ ಸೋತಿದ್ದರು. ಇದರ ಹೊರತಾಗಿಯೂ ಭಾರತ ತಂಡ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಈ ದಾಖಲೆಗಳಲ್ಲಿ ಹಲವು, ಅದ್ಭುತ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ (Suryakumar Yadav) ಹೆಸರಿನಲ್ಲಿ ಮಾತ್ರ ದಾಖಲೆಯಾಗಿವೆ.
- ಸೂರ್ಯಕುಮಾರ್ ಅವರಿಂದಲೇ ಆರಂಭಿಸೋಣ. ಟೀಂ ಇಂಡಿಯಾದ ಈ ಸ್ಟಾರ್ ಬ್ಯಾಟ್ಸ್‌ಮನ್ ಕೇವಲ 55 ಎಸೆತಗಳಲ್ಲಿ 117 ರನ್‌ಗಳ ಸ್ಮರಣೀಯ ಮತ್ತು ಅದ್ಭುತ ಇನ್ನಿಂಗ್ಸ್ ಆಡಿದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಮೊದಲ ಶತಕವಾಗಿದೆ. ಈ ಮೈಲಿಗಲ್ಲನ್ನು ತಲುಪಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.
- ಇದು ಅಂತಾರಾಷ್ಟ್ರೀಯ ಮಾತ್ರವಲ್ಲದೆ, ದೇಶೀಯ ಮಟ್ಟದಿಂದ ಐಪಿಎಲ್‌ವರೆಗೆ ಸೂರ್ಯಕುಮಾರ್ ಯಾದವ್ ಅವರ ಮೊದಲ ಟಿ20 ಶತಕವಾಗಿದೆ. ಇದಕ್ಕೂ ಮೊದಲು, ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಂದ ಅಜೇಯ 94 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು.
- ಇಷ್ಟೇ ಅಲ್ಲ, ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಹಿಂದೆ ದೀಪಕ್ ಹೂಡಾ ಈ ಅದ್ಭುತ ಸಾಧನೆ ಮಾಡಿದ್ದರು. ವಿಶೇಷವೆಂದರೆ ಹೂಡಾ ಕೂಡ 10-12 ದಿನಗಳ ಹಿಂದೆ ಐರ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು.
- ಸೂರ್ಯಕುಮಾರ್ ಅವರ ಇನ್ನಿಂಗ್ಸ್ 117 ರನ್‌ಗಳ ಹೊರತಾಗಿಯೂ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ (ಔಟಾಗದೆ 110) ಶತಕದ ಹೊರತಾಗಿಯೂ ಭಾರತ ಸೋಲನುಭವಿಸಿತ್ತು.
- ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಸೂರ್ಯ ಅವರ ಈ ಶತಕ ಬಂದಿತು. ಇದು ಯಾವುದೇ ಬ್ಯಾಟ್ಸ್‌ಮನ್ (ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರ) T20 ಇಂಟರ್‌ನ್ಯಾಶನಲ್‌ನಲ್ಲಿ ನಾಲ್ಕನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಈ ಮೂಲಕ ಸೂರ್ಯ, ಭಾರತದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ (ಔಟಾಗದೆ 113) ಗಳಿಸಿದ ಸ್ಕೋರ್ ಅನ್ನು ಮುರಿದರು.
- ವೈಯಕ್ತಿಕವಾಗಿ ಮಾತ್ರವಲ್ಲದೆ ಸೂರ್ಯಕುಮಾರ್ ಯಾದವ್ ಶ್ರೇಯಸ್ ಅಯ್ಯರ್ ಜೊತೆಗೂಡಿ ದಾಖಲೆ ನಿರ್ಮಿಸಿದ್ದಾರೆ. ಇವರಿಬ್ಬರ ನಡುವೆ ನಾಲ್ಕನೇ ವಿಕೆಟ್‌ಗೆ 119 ರನ್‌ಗಳ ಜೊತೆಯಾಟವಿದ್ದು, ಈ ವಿಕೆಟ್‌ಗೆ ಭಾರತದ ಗರಿಷ್ಠ ಜೊತೆಯಾಟದ ದಾಖಲೆಯಾಗಿದೆ.
- ಸೂರ್ಯಕುಮಾರ್ ಬಿಟ್ಟು ಹೇಳುವುದಾದರೆ, ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ 19 ಪಂದ್ಯಗಳ (ಎಲ್ಲಾ ಸ್ವರೂಪಗಳು) ಭಾರತದ ಗೆಲುವಿನ ಸರಣಿಯು ಸ್ಥಗಿತಗೊಂಡಿತು. ಈ ಮೂಲಕ ರಿಕಿ ಪಾಂಟಿಂಗ್ (ಸತತ 20 ಪಂದ್ಯಗಳ ಗೆಲುವು) ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಅವರು ಕಳೆದುಕೊಂಡರು. ಇಷ್ಟೇ ಅಲ್ಲ, ಸತತ 16 ಗೆಲುವಿನ ನಂತರ ಪೂರ್ಣ ನಾಯಕನಾದ ನಂತರ ಅವರ ಮೊದಲ ಸೋಲು ಇದಾಗಿದೆ.
ಇದನ್ನೂ ಓದಿ
Published On - 2:31 pm, Mon, 11 July 22