- Kannada News Photo gallery Cricket photos IND vs ENGs Rohit Sharma is just a win away form equalling Ricky Pontings record for most con consecutive wins as captain
IND vs ENG: ಪಾಂಟಿಂಗ್ ದಾಖಲೆ ಮೇಲೆ ಕಣ್ಣಿಟ್ಟ ರೆಕಾರ್ಡ್ ಮೆಷಿನ್ ರೋಹಿತ್! ಲಂಕಾ ದಾಖಲೆಯೂ ಉಡೀಸ್
IND vs ENG: ರೋಹಿತ್ ನಾಯಕತ್ವದಲ್ಲಿ, ಭಾರತ ತಂಡವು ಇದುವರೆಗೆ ಎಲ್ಲಾ ಸ್ವರೂಪಗಳಲ್ಲಿ ಸತತವಾಗಿ 19 ಪಂದ್ಯಗಳನ್ನು ಗೆದ್ದಿದೆ.
Updated on:Jul 10, 2022 | 6:03 PM

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡದ ಪ್ರದರ್ಶನ ನಿರಂತರವಾಗಿ ಸುಧಾರಿಸುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ. ಕಳೆದ ವರ್ಷ ನವೆಂಬರ್‌ನಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ನಂತರ, ಅವರ ನಾಯಕತ್ವದಲ್ಲಿ ಆಡಿದ ಪಂದ್ಯಗಳಲ್ಲಿ ಭಾರತ ತಂಡ ಅಜೇಯವಾಗಿದೆ. ಇದೀಗ ರೋಹಿತ್ ಕಳೆದ 19 ವರ್ಷಗಳಿಂದ ವಿಶ್ವದ ಅದ್ಭುತ ನಾಯಕರಲ್ಲಿ ಒಬ್ಬರಾಗಿರುವ ರಿಕಿ ಪಾಂಟಿಂಗ್ ಹೆಸರಲ್ಲಿನಲ್ಲಿರುವ ಅಂತಹ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಜುಲೈ 10 ಭಾನುವಾರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ, ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಶ್ರೇಷ್ಠ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಅವರ ಸತತ ಗೆಲುವುಗಳ ದಾಖಲೆಯನ್ನು ಸರಿಗಟ್ಟುತ್ತಾರೆ.

ರೋಹಿತ್ ನಾಯಕತ್ವದಲ್ಲಿ, ಭಾರತ ತಂಡವು ಇದುವರೆಗೆ ಎಲ್ಲಾ ಸ್ವರೂಪಗಳಲ್ಲಿ ಸತತವಾಗಿ 19 ಪಂದ್ಯಗಳನ್ನು ಗೆದ್ದಿದೆ. 2003 ರಲ್ಲಿ, ಪಾಂಟಿಂಗ್ ನಾಯಕತ್ವದಲ್ಲಿ, ಆಸ್ಟ್ರೇಲಿಯನ್ ತಂಡವು ಸತತ 20 ಪಂದ್ಯಗಳನ್ನು ಗೆದ್ದಿತು, ಇದು ಇನ್ನೂ ದಾಖಲೆಯಾಗಿದೆ.

ಫುಲ್ ಕ್ಯಾಪ್ಟನ್ ಆಗುವ ಮೊದಲಿನಿಂದಲೂ ರೋಹಿತ್ ಅವರ ಈ ದಾಖಲೆ ಮುಂದುವರಿದಿದೆ. ನವೆಂಬರ್‌ನಲ್ಲಿ ODI-T20 ನಾಯಕನಾದ ನಂತರ ಮತ್ತು ಫೆಬ್ರವರಿಯಲ್ಲಿ ಟೆಸ್ಟ್ ನಾಯಕನಾದ ನಂತರ, ಭಾರತವು ಅವರ ನಾಯಕತ್ವದಲ್ಲಿ ಸತತ 16 ಪಂದ್ಯಗಳನ್ನು ಗೆದ್ದಿದೆ.

ಅಷ್ಟೇ ಅಲ್ಲ, ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸತತ ನಾಲ್ಕು ಟಿ20 ಸರಣಿಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸತತ ಮೂರು ಸರಣಿಗಳನ್ನು ಗೆದ್ದಿದ್ದ ಶ್ರೀಲಂಕಾದ ದಾಖಲೆಯನ್ನು ಭಾರತ ತಂಡ ಹಿಂದಿಕ್ಕಿದೆ.
Published On - 6:03 pm, Sun, 10 July 22




