IND vs ENG: ಪವರ್ ಪ್ಲೇಯಲ್ಲಿ 500 ಡಾಟ್ ಬಾಲ್! ಟಿ20 ಕ್ರಿಕೆಟ್​ನ ದಾಖಲೆಗಳ ಸರದಾರ ಭುವನೇಶ್ವರ್ ಕುಮಾರ್

IND vs ENG: T20 ಕ್ರಿಕೆಟ್​ನ ಪವರ್ ಪ್ಲೇಗಳಲ್ಲಿ 500 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆಯೊಂದಿಗೆ ಭುವಿ ನ್ಯೂಜಿಲೆಂಡ್‌ನ ಟಿಮ್ ಸೌಥಿ ಮತ್ತು ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ ಅವರನ್ನು ಹಿಂದಿಕ್ಕಿದ್ದಾರೆ.

IND vs ENG: ಪವರ್ ಪ್ಲೇಯಲ್ಲಿ 500 ಡಾಟ್ ಬಾಲ್! ಟಿ20 ಕ್ರಿಕೆಟ್​ನ ದಾಖಲೆಗಳ ಸರದಾರ ಭುವನೇಶ್ವರ್ ಕುಮಾರ್
ಇನ್ನು ಬೌಲಿಂಗ್ ವಿಭಾಗದಲ್ಲಿ ಹೇಳಬೇಕೆಂದರೆ ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್​ ಅಂತಿಮ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಭುವಿ ಪಾಕಿಸ್ತಾನ ಹಾಗೂ ಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತೀರ ದುಬಾರಿಯಾಗಿದ್ದರು.
Follow us
| Updated By: ಪೃಥ್ವಿಶಂಕರ

Updated on:Jul 10, 2022 | 3:56 PM

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ (Team India) ವಶಪಡಿಸಿಕೊಂಡಿದೆ. ಸಹಜವಾಗಿ, ಇನ್ನೂ ಒಂದು ಪಂದ್ಯವನ್ನು ಆಡಬೇಕಾಗಿದೆ ಆದರೆ ಅದಕ್ಕೂ ಮೊದಲು ಭಾರತ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ತಮ್ಮ ಪ್ರಾಬಲ್ಯ ಮೆರೆದಿದೆ. ಸರಣಿಯಲ್ಲಿ ಭಾರತದ ಅಜೇಯ ಮುನ್ನಡೆಯಲ್ಲಿ ದೊಡ್ಡ ಪಾತ್ರವನ್ನು ಭುವನೇಶ್ವರ್ ಕುಮಾರ್ ( Bhuvneshwar Kumar) ವಹಿಸಿದ್ದಾರೆ. ಭುವಿ ಮೊದಲ ಎರಡು ಪಂದ್ಯಗಳಲ್ಲಿ ತಮ್ಮ ಬೌಲಿಂಗ್‌ನಿಂದ ಅದ್ಭುತ ಜಾದೂ ಪ್ರದರ್ಶಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಸೌತಾಂಪ್ಟನ್ ಮತ್ತು ಎಡ್ಜ್‌ಬಾಸ್ಟನ್ ಗೆದ್ದ ನಂತರ, ಭುವಿ ಈಗ ನಾಟಿಂಗ್‌ಹ್ಯಾಮ್‌ನಲ್ಲಿ ಅದೇ ಫಾರ್ಮ್​ ಮುಂದುವರೆಸುವತ್ತಾ ಗಮನಹರಿಸಿದ್ದಾರೆ.ಇದರೊಂದಿಗೆ ಭುವಿ ಇನ್ನೊಂದು ಅದ್ಭುತ ದಾಖಲೆಯನ್ನು ಸಹ ಬರೆದಿದ್ದಾರೆ.

500 ಡಾಟ್ ಬಾಲ್

ಇದನ್ನೂ ಓದಿ
Image
India vs England 3rd T20 Match Live Streaming: ಇಂದೇ ಅಂತಿಮ ಟಿ20 ಕದನ; ಪಂದ್ಯದ ಆರಂಭ ಯಾವಾಗ?
Image
Wimbledon 2022: ಚೊಚ್ಚಲ ವಿಂಬಲ್ಡನ್ ಗೆದ್ದು ಇತಿಹಾಸ ನಿರ್ಮಿಸಿದ ಕಜಕಿಸ್ತಾನದ ಎಲೆನಾ ರೈಬಾಕಿನಾ..!
Image
India vs England 2nd T20 Playing 11: ಭಾರತ ಮೊದಲು ಬ್ಯಾಟಿಂಗ್; 4 ಬದಲಾವಣೆ, ಯಾರಿಗೆಲ್ಲ ಛಾನ್ಸ್?

ಭುವನೇಶ್ವರ್ ಕುಮಾರ್ ಈಗ ವಿಶಿಷ್ಟ ವಿಶ್ವ ದಾಖಲೆಯೊಂದನ್ನು ಮಾಡಿದ್ದಾರೆ. ತನ್ನ ಅದ್ಭುತ ಪ್ರದರ್ಶನದೊಂದಿಗೆ, ಭಾರತದ ಪ್ರಸಿದ್ಧ ಬೌಲರ್ ಇಂಗ್ಲೆಂಡ್‌ನ ಬ್ಯಾಟಿಂಗ್ ಕ್ರಮಾಂಕವನ್ನು ನಾಶಪಡಿಸಿದಲ್ಲದೆ T20 ಕ್ರಿಕೆಟ್​ನ ಪವರ್ ಪ್ಲೇಗಳಲ್ಲಿ 500 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆಯೊಂದಿಗೆ ಭುವಿ ನ್ಯೂಜಿಲೆಂಡ್‌ನ ಟಿಮ್ ಸೌಥಿ ಮತ್ತು ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ ಅವರನ್ನು ಹಿಂದಿಕ್ಕಿದ್ದಾರೆ. ಈ ಇಬ್ಬರೂ 383 ಡಾಟ್ ಬಾಲ್​ಗಳನ್ನು ಎಸೆದು ಭುವಿ ನಂತರದ ಸ್ಥಾನವನ್ನು ಪಡೆದಿದ್ದಾರೆ.

ಶೂನ್ಯಕ್ಕೆ ವಿಕೆಟ್

ಇಂಗ್ಲೆಂಡ್‌ನಲ್ಲಿ ಭುವಿ ಮಾಡಿದ ಮ್ಯಾಜಿಕ್ ಅವರ ಮೊದಲ ಓವರ್‌ನ ಮೊದಲ ಎಸೆತಕ್ಕೆ ಸಂಬಂಧಿಸಿದೆ. ವಾಸ್ತವವಾಗಿ, ಮೊದಲ ಎರಡು ಟಿ20ಗಳಲ್ಲಿ ಅವರು ಈ ಮೂಲಕ ಇಂಗ್ಲೆಂಡ್​ಗೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಟಿ20ಯಲ್ಲಿ ಜೋಸ್ ಬಟ್ಲರ್‌ರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಕೆಲಸವನ್ನು ಸುಲಭಗೊಳಿಸಿದರು. ಅದೇ ರೀತಿ ಎರಡನೇ ಟಿ20ಯಲ್ಲಿ ಮೊದಲ ಎಸೆತದಲ್ಲಿ ಜೇಸನ್ ರಾಯ್ ಅವರನ್ನು ಬಲಿ ಪಡೆದರು. ಇದರಿಂದ ಒತ್ತಡಕ್ಕೆ ಸಿಲುಕಿದ ಆಂಗ್ಲರು ಪಂದ್ಯದಲ್ಲಿ ಗೆಲುವಿನ ಲಯಕ್ಕೆ ವಾಪಸ್ ಬರಲಾಗಲೇ ಇಲ್ಲ.

ಸ್ವಿಂಗ್‌ನೊಂದಿಗೆ ಮ್ಯಾಜಿಕ್

ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಬೌಲಿಂಗ್‌ಗೆ ಬಟ್ಲರ್ ಅಥವಾ ಜೇಸನ್ ರಾಯ್ ಬಳಿ ಉತ್ತರ ಇರಲಿಲ್ಲ. ಮೊದಲ ಟಿ20ಯಲ್ಲಿ ಭುವಿಗೆ ಬಟ್ಲರ್ ವಿಕೆಟ್ ಮಾತ್ರ ಕಬಳಿಸಲು ಸಾಧ್ಯವಾಯಿತು. ಆದರೆ ಎರಡನೇ ಟಿ20ಯಲ್ಲಿ ಜೇಸನ್ ರಾಯ್ ಹೊರತಾಗಿ ಜೋಸ್ ಬಟ್ಲರ್ ಮತ್ತು ಗ್ಲೀಸನ್ ಅವರನ್ನೂ ಬೇಟೆಯಾಡಿದರು. ಭುವಿ ಪವರ್‌ಪ್ಲೇನಲ್ಲಿಯೇ ರಾಯ್ ಮತ್ತು ಬಟ್ಲರ್ ಅವರ ವಿಕೆಟ್‌ಗಳನ್ನು ಕಿತ್ತುಹಾಕಿದರು. ಈ ಸ್ಥಿರ ಪ್ರದರ್ಶನವು ಭುವಿ ಯಾವ ರೀತಿಯ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ಭಾರತೀಯ ಕ್ರಿಕೆಟ್‌ನ ದೃಷ್ಟಿಕೋನದಿಂದ ಒಳ್ಳೆಯ ಸುದ್ದಿಯೂ ಕೂಡ ಆಗಿದೆ.

Published On - 3:56 pm, Sun, 10 July 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ