ಭಾರತೀಯರನ್ನು ನಿಂಧಿಸಿದ ಟ್ವೀಟ್ ಸಖತ್ ವೈರಲ್: ಮಾರ್ಗನ್, ಬಟ್ಲರ್​ಗೆ ಶುರುವಾಯ್ತು ನಿಷೇಧದ ನಡುಕ!

|

Updated on: Jun 10, 2021 | 3:01 PM

ಜನಾಂಗೀಯ ನಿಂದನೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಶೂನ್ಯ ಸಹಿಷ್ಣುತೆ ನೀತಿಯನ್ನ ಅನುಸರಿಸುತ್ತಿದೆ. ಇದೇ ಈಗ, ಇಂಗ್ಲೆಂಡ್ ಆಟಗಾರರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.

ಭಾರತೀಯರನ್ನು ನಿಂಧಿಸಿದ ಟ್ವೀಟ್ ಸಖತ್ ವೈರಲ್: ಮಾರ್ಗನ್, ಬಟ್ಲರ್​ಗೆ ಶುರುವಾಯ್ತು ನಿಷೇಧದ ನಡುಕ!
ಮಾರ್ಗನ್, ಬಟ್ಲರ್
Follow us on

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಈಗ ನಡುಕ ಶುರುವಾಗಿದೆ. ಯಾಕಂದ್ರೆ, ಐಪಿಎಲ್ನಲ್ಲಿ ಕೋಟಿ ಕೋಟಿ ಹಣ ಪಡೆಯೋ ಇಬ್ಬರು ಆಟಗಾರರು, ಭಾರತೀಯರನ್ನೇ ನಿಂಧನೆ ಮಾಡಿ ನಿಷೇಧದ ಭೀತಿ ಶುರುವಾಗಿದೆ. ಒಲಿ ರಾಬಿನ್ಸನ್.. ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 7ವಿಕೆಟ್ ಪಡೆದು ಮಿಂಚಿದ್ದ ಬೌಲರ್.. ಆದ್ರೆ, 7 ವರ್ಷದ ಹಿಂದೆ ಮಾಡಿದ್ದ ಜನಾಂಗೀಯ ನಿಂದನೆ ಟ್ವೀಟ್, ರಾಬಿನ್ಸನ್ ಕ್ರಿಕೆಟ್ ಬದುಕಿಗೆ ಮುಳುವಾಗಿ ಪರಿಣಮಿಸ್ತು. ಒಂದೇ ಒಂದು ಪಂದ್ಯದಲ್ಲಿ ಭರವಸೆ ಬೌಲರ್ ಎಂದು ಗುರುತಿಸಿಕೊಂಡಿದ್ದ ರಾಬಿನ್ಸನ್ಗೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅವಮಾನತು ಶಿಕ್ಷೆ ನೀಡಿ ಹೊರಕ್ಕಟ್ಟಿದೆ.

ಜನಾಂಗೀಯ ನಿಂದನೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಶೂನ್ಯ ಸಹಿಷ್ಣುತೆ ನೀತಿಯನ್ನ ಅನುಸರಿಸುತ್ತಿದೆ. ಇದೇ ಈಗ, ಇಂಗ್ಲೆಂಡ್ ಆಟಗಾರರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಓಲಿ ರಾಬಿನ್ಸನ್ ಬೆನ್ನಲ್ಲೇ ಮಾರ್ಗನ್, ಬಟ್ಲರ್ ಮಾಡಿದ ಜನಾಂಗೀಯ ನಿಂಧನೆಯೂ ಬೆಳಕಿಗೆ ಬಂದಿದೆ.

ನಾಯಕ ಮಾರ್ಗನ್, ಬಟ್ಲರ್​ಗೆ ಶುರುವಾಯ್ತು ನಡುಕ!
ಜನಾಂಗೀಯ ನಿಂದನೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಶೂನ್ಯ ಸಹಿಷ್ಣುತೆ ನೀತಿಯನ್ನ ಅನುಸರಿಸುತ್ತಿದೆ. ಇದೇ ಈಗ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ಜೋಸ್ ಬಟ್ಲರ್ಗೆ ನಡುಕ ಶುರುವಾಗುವಂತೆ ಮಾಡಿರೋದು. ಯಾಕಂದ್ರೆ ಇವರಿಬ್ರು 2018ರ ಮೇ ತಿಂಗಳಲ್ಲಿ, ಭಾರತೀಯರನ್ನ ನಿಂಧಿಸಿದ್ದ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತೀಯರನ್ನ ‘ಸರ್’ ಎಂದು ಸಂಭೋದಿಸಿದ್ದ ಕ್ರಿಕೆಟಿಗರು!
ಒಲಿ ರಾಬಿನ್ಸನ್ 2012 ಹಾಗೂ 2013ರಲ್ಲಿ ಏಷ್ಯಾದ ಜನರನ್ನ ನಿಂದಿಸಿ, ಮಹಿಳೆಯರ ಬಗ್ಗೆ ಕೀಳು ಅಭಿಪ್ರಾಯವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ರು. ಇದಕ್ಕೆ ರಾಬಿನ್ಸನ್ ನಿಷೇಧದ ಶಿಕ್ಷೆಗೆ ಗುರಿಯಾಗಿದೆ. ಹಾಗೇ, ಇಯಾನ್ ಹಾಗೂ ಬಟ್ಲರ್, ಭಾರತೀಯರನ್ನ ‘ಸರ್’ ಎಂದು ಸಂಭೋದಿಸಿ, ಗೇಲಿ ಮಾಡಿ ಟ್ವೀಟ್ ಮಾಡಿದ್ರು. ಇವರಿಬ್ಬರ ನಿಂಧನೆಗೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಕೂಡ ಕೈ ಜೋಡಿಸಿದ್ರು.

ಅಂದು ಮಾರ್ಗನ್ ಬಟ್ಲರ್ ಟ್ವಿಟರ್ನಲ್ಲಿ ಮಾಡಿದ ನಿಂಧನೆಯನ್ನ ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಬಟ್ಲರ್ ಮತ್ತು ಮಾರ್ಗನ್ ವಿರುದ್ಧ ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿ ತನಿಖೆಗೆ ಆದೇಶ ನೀಡಿದೆ. ಒಂದು ವೇಳೆ ಇವರ ಆರೋಪ ಸಾಬೀತಾದ್ರೆ, ಕಠಿಣ ಕ್ರಮಗಳನ್ನ ಕೈಗೊಳ್ಳುವ ಭರವಸೆ ನೀಡಿದೆ.

ಐಪಿಎಲ್ ಆಡಿ ಕೋಟಿ ಕೋಟಿ ಸಂಭಾವನೆ ಪಡೆಯೋ ಜೋಸ್ ಬಟ್ಲರ್, ಇಯಾನ್ ಮಾರ್ಗನ್, ಭಾರತೀಯರನ್ನೇ ಅಪಹಸ್ಯ ಮಾಡಿದ್ದಾರೆ. ಈ ಇಬ್ಬರು ಆಟಗಾರರು ರಾಬಿನ್ಸನ್ನಂತೆ ಅವಮಾತು ಶಿಕ್ಷೆಗೆ ಗುರಿಯಾಗ್ತಾರೆ ಎನ್ನಲಾಗ್ತಿದೆ. ಇನ್ನು ಐಪಿಎಲ್ನಲ್ಲಿ ಪಾಲ್ಗೊಳ್ಳುವ ಈ ಇಬ್ಬರು ಆಟಗಾರರ ವಿಚಾರದಲ್ಲಿ ಬಿಸಿಸಿಐ ಕೂಡ ಕಠಿಣ ಕ್ರಮಕೈಗೊಳ್ಳುತ್ತಾ ಅನ್ನೋದನ್ನ ಕಾದು ನೋಡ್ಬೇಕು.