Kannada News Sports EURO 2020: ಯುರೋ ಕಪ್ನಲ್ಲಿ ಈ ಆಟಗಾರರು ಗೋಲಿನ ಮೇಲೆ ಗೋಲು ಗಳಿಸಿದರೂ ಕೂಡ ತಮ್ಮ ತಂಡವನ್ನು ಚಾಂಪಿಯನ್ ಮಾಡಲಾಗಲಿಲ್ಲ
EURO 2020: ಯುರೋ ಕಪ್ನಲ್ಲಿ ಈ ಆಟಗಾರರು ಗೋಲಿನ ಮೇಲೆ ಗೋಲು ಗಳಿಸಿದರೂ ಕೂಡ ತಮ್ಮ ತಂಡವನ್ನು ಚಾಂಪಿಯನ್ ಮಾಡಲಾಗಲಿಲ್ಲ
TV9 Web | Updated By: ಪೃಥ್ವಿಶಂಕರ
Updated on:
Jul 12, 2021 | 7:30 PM
EURO 2020: ರೊನಾಲ್ಡೊ ಪಂದ್ಯಾವಳಿಯಲ್ಲಿ 5 ಗೋಲು ಗಳಿಸಿದರು. ಅವರಿಗೆ ಗೋಲ್ಡನ್ ಬೂಟ್ ಪ್ರಶಸ್ತಿ ಕೂಡ ನೀಡಲಾಯಿತು. ಆದರೆ ರೊನಾಲ್ಡೊ ಅವರ ಪೋರ್ಚುಗಲ್ ನಾಕೌಟ್ ಹಂತದಲ್ಲಿ ಬೆಲ್ಜಿಯಂ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿತ್ತು.
1 / 6
ಯುರೋ ಕಪ್ 2020 ರಲ್ಲಿ ಇಟಲಿ ಅಂತಿಮವಾಗಿ ಇಂಗ್ಲೆಂಡ್ ಅನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಏತನ್ಮಧ್ಯೆ, ಪಂದ್ಯಾವಳಿಯುದ್ದಕ್ಕೂ, ಕೆಲವು ಆಟಗಾರರು ತಮ್ಮ ತಂಡಕ್ಕೆ ಗೆಲುವು ನೀಡಲು ಏಕಪಕ್ಷೀಯವಾಗಿ ಹೋರಾಡಿದರು. ಆದರೆ ಈ ಆಟಗಾರರು ತಂಡವನ್ನು ಫೈನಲ್ಗೆ ತಲುಪಿಸಲು ಸಹಾಯ ಮಾಡಲಿಲ್ಲ. ಇವರುಗಳಲ್ಲಿ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ. ರೊನಾಲ್ಡೊ ಪಂದ್ಯಾವಳಿಯಲ್ಲಿ 5 ಗೋಲು ಗಳಿಸಿದರು. ಅವರಿಗೆ ಗೋಲ್ಡನ್ ಬೂಟ್ ಪ್ರಶಸ್ತಿ ಕೂಡ ನೀಡಲಾಯಿತು. ಆದರೆ ರೊನಾಲ್ಡೊ ಅವರ ಪೋರ್ಚುಗಲ್ ನಾಕೌಟ್ ಹಂತದಲ್ಲಿ ಬೆಲ್ಜಿಯಂ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿತ್ತು.
2 / 6
ಜೆಕ್ ಗಣರಾಜ್ಯದ ಪ್ಯಾಟ್ರಿಕ್ ಶಿಕ್ ಕೂಡ 5 ಪಂದ್ಯಗಳಲ್ಲಿ 5 ಗೋಲು ಗಳಿಸಿದ್ದಾರೆ. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಅವರ ತಂಡ ಡೆನ್ಮಾರ್ಕ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರನಡೆಯಿತು.
3 / 6
ಅನುಭವಿ ಫ್ರೆಂಚ್ ಆಟಗಾರ ಕರೀಮ್ ಬೆನ್ ಜೇಮಾ ಯುರೋ ಕಪ್ 2020 ರಲ್ಲಿ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಪಂದ್ಯಾವಳಿಯಲ್ಲಿ 5 ವರ್ಷಗಳ ನಂತರ ಬೆನ್ ಜೇಮಾ ಫ್ರಾನ್ಸ್ ಪರ ಆಡಿದ್ದರು. ಅವರು 4 ಪಂದ್ಯಗಳಲ್ಲಿ 4 ಗೋಲು ಗಳಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅವರ ತಂಡ ಸ್ವಿಟ್ಜರ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತು.
4 / 6
ಸ್ವೀಡನ್ ಫಾರ್ವರ್ಡ್ ಎಮಿಲ್ ಫೋರ್ಸ್‌ಬರ್ಗ್ ಪಂದ್ಯಾವಳಿಯಲ್ಲಿ ನಾಲ್ಕನೇ ಅತಿ ಹೆಚ್ಚು ಸ್ಕೋರರ್ ಕೂಡ ಆಗಿದ್ದಾರೆ. ಅವರು 4 ಪಂದ್ಯಗಳಲ್ಲಿ 4 ಗೋಲುಗಳನ್ನು ಗಳಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್ ವಿರುದ್ಧ ಸೋತ ಎಮಿಲ್ ತಂಡವನ್ನು ಸ್ವೀಡನ್ ಟೂರ್ನಿಯಿಂದ ಹೊರಹಾಕಲಾಯಿತು.
5 / 6
ಬೆಲ್ಜಿಯಂ ಸ್ಟ್ರೈಕರ್ ರೊಮೆಲು ಲುಕಾಕು 4 ಗೋಲುಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಅವರು 5 ಪಂದ್ಯಗಳಲ್ಲಿ ಈ 4 ಗೋಲುಗಳನ್ನು ಬಾರಿಸಿದ್ದಾರೆ. ಈ ಬಾರಿ, ಗೆಲುವಿನ ಸ್ಪರ್ಧಿಯಾಗಿ ಪರಿಗಣಿಸಲ್ಪಟ್ಟ ಲುಕಾಕು ಅವರ ಬೆಲ್ಜಿಯಂ ತಂಡವು ಸೆಮಿಫೈನಲ್‌ನಲ್ಲಿ ಇಟಲಿಯ ವಿರುದ್ಧ ಸೋಲಬೇಕಾಯಿತು.
6 / 6
ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಕೂಡ ಅಗ್ರ ಗೋಲು ಗಳಿಸಿದವರ ಪಟ್ಟಿಯಲ್ಲಿದ್ದು, 55 ವರ್ಷಗಳ ನಂತರ ಇಂಗ್ಲೆಂಡ್ ಅನ್ನು ಗೆಲುವಿನ ಅಂಚಿಗೆ ತಂದಿದ್ದರು. ಪಂದ್ಯಾವಳಿಯಲ್ಲಿ ಅವರು 4 ಗೋಲು ಗಳಿಸಿದ್ದರು.