Euro Cup 2024: ಯುರೋ ಕಪ್ ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ

|

Updated on: Jul 03, 2024 | 9:06 AM

Euro Cup 2024 Quarterfinal: ಜರ್ಮನಿಯಲ್ಲಿ ನಡೆಯುತ್ತಿರುವ ಯುರೋ ಕಪ್​ ಟೂರ್ನಿಯ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ಹಾಗೂ ಕಿಲಿಯನ್ ಎಂಬಾಪ್ಪೆ ಮುಂದಾಳತ್ವದ ಫ್ರಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಯುರೋ ಕಪ್​ನ ಸೆಮಿ ಫೈನಲ್​ಗೆ ಪ್ರವೇಶಿಸಲಿದೆ.

Euro Cup 2024: ಯುರೋ ಕಪ್ ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ
Euro Cup 2024
Follow us on

ಪ್ರತಿಷ್ಠಿತ ಯುರೋ ಕಪ್ (Euro Cup 2024) ಫುಟ್​ಬಾಲ್ ಟೂರ್ನಿಯು ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದೆ. 24 ತಂಡಗಳೊಂದಿಗೆ ಶುರುವಾದ ಟೂರ್ನಿಯು ಇದೀಗ 8 ತಂಡಗಳ ಕದನವಾಗಿ ಮಾರ್ಪಟ್ಟಿದೆ. ಅದರಂತೆ ಜುಲೈ 5 ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಶುರುವಾಗಲಿದ್ದು, ನಾಕೌಟ್​ ಸುತ್ತಿನಲ್ಲಿ ಎಂಟು ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಾವುವು ಎಂದರೆ…

  • ಸ್ಪೇನ್
  • ಜರ್ಮನಿ
  • ಪೋರ್ಚುಗಲ್
  • ಫ್ರಾನ್ಸ್
  • ಇಂಗ್ಲೆಂಡ್
  • ಸ್ವಿಟ್ಜರ್ಲೆಂಡ್
  • ನೆದರ್ಲೆಂಡ್ಸ್
  • ಟರ್ಕಿ

ಬಲಿಷ್ಠರ ಮುಖಾಮುಖಿ:

ವಿಶೇಷ ಎಂದರೆ ಈ ಬಾರಿಯ ಕ್ವಾರ್ಟರ್​ ಫೈನಲ್​ನಲ್ಲಿ ಯುರೋಪ್​ನ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿದೆ. ಅದರಂತೆ ಮೊದಲ ಪಂದ್ಯದಲ್ಲಿ ಸ್ಪೇನ್ ಮತ್ತು ಜರ್ಮನಿ ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಪೋರ್ಚುಗಲ್ ಮತ್ತು ಫ್ರಾನ್ಸ್ ತಂಡಗಳು ಸೆಣಸಲಿದೆ. ಇನ್ನು ಇಂಗ್ಲೆಂಡ್ ತಂಡದ ಎದುರಾಳಿ ಸ್ವಿಟ್ಜರ್ಲೆಂಡ್. ಹೀಗಾಗಿ ಕ್ವಾರ್ಟರ್ ಫೈನಲ್​ ಪಂದ್ಯಗಳು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ.

 ಯುರೋ ಕಪ್ 2024 ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ
ಪಂದ್ಯಗಳು ತಂಡಗಳು ದಿನಾಂಕ ಸಮಯ ಸ್ಥಳ
1ನೇ ಕ್ವಾರ್ಟರ್ ಫೈನಲ್ ಸ್ಪೇನ್ vs ಜರ್ಮನಿ ಶುಕ್ರವಾರ, ಜುಲೈ 5 9:30 PM IST ಸ್ಟಟ್‌ಗಾರ್ಟ್ ಅರೆನಾ
2ನೇ ಕ್ವಾರ್ಟರ್ ಫೈನಲ್ ಪೋರ್ಚುಗಲ್ vs ಫ್ರಾನ್ಸ್ ಶನಿವಾರ, ಜುಲೈ 6 12:30 AM IST ವೋಕ್ಸ್‌ಪಾರ್ಕ್‌ ಸ್ಟೇಡಿಯಂ
3ನೇ ಕ್ವಾರ್ಟರ್ ಫೈನಲ್ ಇಂಗ್ಲೆಂಡ್ vs ಸ್ವಿಟ್ಜರ್ಲೆಂಡ್ ಶನಿವಾರ, ಜುಲೈ 6 9:30 PM IST ಡ್ಯುಸೆಲ್ಡಾರ್ಫ್ ಅರೆನಾ
4ನೇ ಕ್ವಾರ್ಟರ್ ಫೈನಲ್ ನೆದರ್ಲೆಂಡ್ಸ್​ vs ಟರ್ಕಿ ಭಾನುವಾರ, ಜುಲೈ 7 12:30 AM IST ಒಲಂಪಿಯಾ ಸ್ಟೇಡಿಯಂ

ಯುರೋ ಕಪ್ 2024 ರ ಕ್ವಾರ್ಟರ್ ಫೈನಲ್ ಪಂದ್ಯಗಳು ಎಷ್ಟು ಗಂಟೆಗೆ ಶುರು?

ಯುರೋ ಕಪ್​ನ ನಾಕೌಟ್ ಪಂದ್ಯಗಳು ರಾತ್ರಿ ನಡೆಯಲಿದೆ. ಅದರಂತೆ ಮೊದಲ ಮತ್ತು ಮೂರನೇ ಕ್ವಾರ್ಟರ್ ಫೈನಲ್ ಪಂದ್ಯವನ್ನು ಭಾರತೀಯ ಕಾಲಮಾನ ರಾತ್ರಿ 9.30 ಕ್ಕೆ ವೀಕ್ಷಿಸಬಹುದು. ಹಾಗೆಯೇ 2ನೇ ಮತ್ತು 4ನೇ ಪಂದ್ಯಗಳು 12.30 AM ಗೆ  ಶುರುವಾಗಲಿದೆ.

ಯುರೋ ಕಪ್ 2024 ರ ಕ್ವಾರ್ಟರ್‌ಫೈನಲ್ ಪಂದ್ಯಗಳನ್ನು ಭಾರತದಲ್ಲಿ ಯಾವ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು?

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್​ನ ಸೋನಿ ಟೆನ್ 2 HD/SD ನಲ್ಲಿ ಇಂಗ್ಲಿಷ್ ಕಾಮೆಂಟರಿಯೊಂದಿಗೆ ಈ ಪಂದ್ಯಗಳ ನೇರ ಪ್ರಸಾರ ಇರಲಿದೆ.

ಇದನ್ನೂ ಓದಿ: EURO 2024: ಕ್ರಿಸ್ಟಿಯಾನೊ ರೊನಾಲ್ಡೊ ರೆಕಾರ್ಡ್​ ಬ್ರೇಕ್ ಮಾಡಿದ ಗುಲರ್

ಯುರೋ ಕಪ್ 2024 ರಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸುವುದು ಹೇಗೆ?

ಸೋನಿ LIV ಆ್ಯಪ್​ನಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಈ ಆ್ಯಪ್​ ಮೂಲಕ ಭಾರತದಲ್ಲೂ ಪಂದ್ಯದ ಪ್ರಸಾರ ಇರಲಿದೆ.