ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್ ಬಳಿಕ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ಯಾರೇನ್ ಸ್ಯಾಮಿ ಕೂಡ ವರ್ಣಭೇದ ಧೊರಣೆಗೆ ಒಳಗಾಗಿದ್ದೆ ಅಂತಾ ಬಾಂಬ್ ಸಿಡಿಸಿದ್ರು. ಅದು ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಪ್ರತಿನಿಧಿಸೋವಾಗ ಕಾಲು ಅಂತಾ ಕರೆಯುತ್ತಿದ್ರು ಅನ್ನೋ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ರು.
ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸ್ಯಾಮಿ, ‘ಕಾಲು’ ಎಂದರೆ ಏನು ಎಂದು ಈಗಷ್ಟೇ ನನಗೆ ಗೊತ್ತಾಯಿತು. ಅವರು ನನ್ನನ್ನು ಮತ್ತು ಶ್ರೀಲಂಕಾ ಕ್ರಿಕೆಟಿಗ ಪೆರೆರಾ ಅವರನ್ನು ಈ ರೀತಿಯಲ್ಲಿ ಕರೆಯುತ್ತಿದ್ದರು. ನಾನು ಅದನ್ನು ಬಲಶಾಲಿ ವ್ಯಕ್ತಿ ಎಂಬ ಅರ್ಥ ಎಂದುಕೊಂಡಿದ್ದೆ ಎಂದು ಆಕ್ರೋಶದಿಂದ ಬರೆದುಕೊಂಡಿದ್ರು.
ಡ್ಯಾರೆನ್ ಸ್ಯಾಮಿ ಹೈದರಾಬಾದ್ ತಂಡವನ್ನ ಪ್ರತಿನಿಧಿಸುತ್ತಿದ್ದಾಗ, ತಂಡದಲ್ಲಿದ್ದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್, ಆಲ್ ರೌಂಡರ್ ಇರ್ಫಾನ್ ಪಠಾಣ್ ಮತ್ತು ಬ್ಯಾಟ್ಸಮನ್ ಆಗಿದ್ದ ವೇಣುಗೋಪಾಲ್, ಇದನ್ನ ಅಲ್ಲಗೆಳದಿದ್ದಾರೆ. ಇಂತಹ ಘಟನೆಗಳಾಗಿರುವ ಬಗ್ಗೆ ನೆನಪಿಲ್ಲ. ಸ್ಯಾಮಿ ವಿರುದ್ಧ ಅಂತಹ ಟೀಕೆಗಳನ್ನು ನಾವು ಯಾವತ್ತೂ ಕೇಳಿಲ್ಲ ಎಂದಿದ್ದಾರೆ.
ಹಾಗೇ 2014ರಲ್ಲೇ ಡ್ಯಾರೇನ್ ಸ್ಯಾಮಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿದ್ದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷಣ್ಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರಿದ್ರು. ಈ ವೇಳೆ ಸ್ಯಾಮಿ, ಲಕ್ಷ್ಮಣ್ಗೆ ನೆನಪಿಸಿಕೊಳ್ಳಿ ಕಪ್ಪು ಕಾಲು ಅಂತಾ ಬರೆದುಕೊಂಡಿದ್ದಾರೆ.
ಇದೆಲ್ಲವನ್ನ ನೋಡಿದ್ರೆ, ಸ್ಯಾಮಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಲು ಅಂತಾ ಕರೀತಾ ಇರೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಈ ಕಾಲು ಅನ್ನೋ ಪದದ ನಿಜವಾದ ಅರ್ಥ ಏನು ಅಂತಾ, ಈಗಲಾದ್ರೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ವಿವರಿಸಬೇಕಿದೆ.
Published On - 2:09 pm, Wed, 10 June 20