ಹೈದರಾಬಾದ್ ವಿರುದ್ಧ ಗೆದ್ದು ಬೀಗಿರೋ ಚೆನ್ನೈ ಸೂಪರ್ ಕಿಂಗ್ಸ್, ಕಡೆಗೂ ಗೆಲುವಿನ ಟ್ರ್ಯಾಕ್ಗೆ ವಾಪಸ್ ಆಗಿದ್ದಾರೆ. ಆದ್ರೆ ಈ ಗೆಲುವು ಧೋನಿಗೆ ನೆಮ್ಮದಿಯ ನಿಟ್ಟುಸಿರು ಬಿಡೋದಕ್ಕಿಂತ, ಧೋನಿಯನ್ನ ವಿಲನ್ ಆಗುವಂತೆ ಮಾಡಿದೆ.
ನಿಜ.. ಚೆನ್ನೈ ವಿರುದ್ಧದ ಗೆಲುವಿನ ಬಳಿಕ ನಾಯಕ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೈಡ್ ವಿಚಾರವಾಗಿ ಮಹೇಂದ್ರ ಸಿಂಗ್ ಧೋನಿ ತೋರಿಸಿದ ನಡತೆಯನ್ನ ಬಲವಾಗಿ ಖಂಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಚೆನ್ನೈ ಫ್ರಾಂಚೈಸಿಯನ್ನ ರದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಏನಿದು ಧೋನಿ, ಅಂಪೈರ್ ವಿವಾದ.. ಅಭಿಮಾನಿಗಳ ಆಕ್ರೋಶ?
ಅಂದ್ರೆ ಇದೇನು ವೈಡಾ ಅನ್ನೋ ಧೋನಿ ಬೆದರಿಕೆಯ ನೋಟ, ಅಂಪೈರ್ ರೀಫೆಲ್ಗೆ ಭಯ ಬೀಳೋ ಹಾಗೇ ಮಾಡಿತ್ತು. ಹೀಗಾಗಿ ರೀಫೆಲ್ ಅರ್ಧಕ್ಕೆ ಎತ್ತಿದ ಕೈಯನ್ನ, ಧೋನಿ ಕೋಪ ನೋಡಿ ಕೆಳಗಿಳಿಸಿಬಿಡ್ತಾರೆ.
ಒಂದಡೆ ಅಂಪೈರ್ ರೀಫೆಲ್ ಧೋನಿ ಬೆದರಿಕೆಗೆ ಹೆದರಿ ಸುಮ್ಮನಾದ್ರೆ, ಮತ್ತೊಂದೆಡೆ ಗ್ಯಾಲರಿಯಲ್ಲಿದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅಂಪೈರ್ ನಿರ್ಧಾರ ನೋಡಿ ಗಲಿಬಿಲಿಗೊಂಡ್ರು. ಕಡೆಗೆ ಚೆನ್ನೈ 20 ರನ್ಗಳ ಅಂತರದಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡಿತು.
ಎಂಎಸ್ ಧೋನಿ ಈ ಗೆಲುವಿನೊಂದಿಗೆ ಖುಷಿಯಾಗಿರಬಹುದು. ಆದ್ರೆ ಅಭಿಮಾನಿಗಳು ಧೋನಿ ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಅಭಿಮಾನಿಗಳು ಎಂಎಸ್ ಧೋನಿ, ಅಂಪೈರ್ ಅವರನ್ನ ಬೆದರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಸಿಎಸ್‌ಕೆ ಫ್ರಾಂಚೈಸಿಯನ್ನು ಬ್ಯಾನ್ ಮಾಡಿ ಎಂದೆಲ್ಲ ಕಿಡಿ ಕಾರುತ್ತಿದ್ದಾರೆ.
ಶೋಭೆ ತರುವಂತಹದ್ದಲ್ಲ.
‘‘ಒಬ್ಬ ದಿಗ್ಗಜನ ಕೋಪಕ್ಕೆ ಹೆದರಿ ಅಂಪೈರ್ ತಮ್ಮ ನಿರ್ಧಾರವನ್ನ ಬದಲಿಸಿದ್ದಾರೆ. ಜಂಟಲ್ಮೆನ್ ಗೇಮ್ನಲ್ಲಿ ಈ ರೀತಿಯ ನಡವಳಿಕೆ ಶೋಭೆ ತರುವಂತಹದ್ದಲ್ಲ.’’
-ಇಂದ್ರಜಿತ್ ಸೇನ್, ಕ್ರಿಕೆಟ್ ಅಭಿಮಾನಿ
ಕ್ರಿಕೆಟ್ಗೆ ಅವಮಾನ
‘‘ಮೈದಾನದಲ್ಲಿದ್ದ ಆಟಗಾರ ಅಂಪೈರ್ ಈ ಬಾಲ್ ವೈಡ್ ಅಲ್ಲಾ ಅಂತಾ ಆಕ್ರೋಶಗೊಳ್ತಾನೆ. ಅಂಪೈರ್ ತಮ್ಮ ನಿರ್ಧಾರವನ್ನ ಬದಲಿಸ್ತಾರೆ. ಇದು ಕ್ರಿಕೆಟ್ಗೆ ಮಾಡಿದ ಅವಮಾನ.’’
-ವಿರಾಟ್, ಕ್ರಿಕೆಟ್ ಅಭಿಮಾನಿ
ಚೆನ್ನೈ ತಂಡವನ್ನ ಬ್ಯಾನ್ ಮಾಡಿ
‘‘ ಕ್ರಿಕೆಟ್ ಜಗತ್ತು ಕಂಡ ದಿಗ್ಗಜನೊಬ್ಬ ಅಂಪೈರ್ಗೆ ಯಾವಾಗಲೂ ಬೆದರಿಕೆ ಹಾಕ್ತಾನೆ. ಹೀಗಾಗಿ ಈ ಫ್ರಾಂಚೈಸಿಯನ್ನ ಬ್ಯಾನ್ ಮಾಡಿ. ಇವರು ಆಡೋದಕ್ಕೆ ಅರ್ಹರಲ್ಲ.’’
-ವರ್ಧನ್, ಕ್ರಿಕೆಟ್ ಅಭಿಮಾನಿ
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಫ್ಯಾನ್ಸ್ ಧೋನಿ ನಡೆದುಕೊಂಡ ರೀತಿಯ ಬಗ್ಗೆ ಕೆಂಡ ಕಾರುತ್ತಿದ್ದಾರೆ. ಅದೇನೋ ಅಂತಾರಲ್ಲ.. ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯ್ತು ಅನ್ನೋ ಹಾಗೇ, ಸತತ ಸೋಲಿನ ನೋವು, ಧೋನಿಗೆ ತನ್ನ ತಾಳ್ಮೆಯನ್ನ ಕಳೆದುಕೊಳ್ಳೋ ಹಾಗೇ ಮಾಡ್ತಿದೆ. ಇದೇ ಕಾರಣಕ್ಕೆ ಧೋನಿ ತಾವೊಬ್ಬ ದಿಗ್ಗಜ ಅನ್ನೋದನ್ನ ಮರೆತು, ಸಿಲ್ಲಿ ವಿಚಾರಕ್ಕೂ ಕೋಪ ಮಾಡಿಕೊಳ್ಳೋದಕ್ಕೆ ಶುರುಮಾಡಿದ್ದಾರೆ.
JUST IN : CSK has been banned for 2 years for forcing the umpire to change the decision. #IPL2020 #CSK pic.twitter.com/zVYMPuv30R
— BCCl ➐ (@not_BCCI) October 13, 2020
Umpire all set to give wide but Dhoni shouted & umpire stopped ?♂?♂
Fixing Karo ?#IPL2020 pic.twitter.com/oEccPr6hn2
— Vɪʀᴀᴛ Kᴏʜʟɪ Fᴀɴ™ ? (@Viratismylife) October 13, 2020