AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ರಾಜಸ್ಥಾನ ಮತ್ತು ಡೆಲ್ಲಿ ನಡುವಿನ ಚುಟುಕು ಸಮರದ ಫೋಟೊಗಳಿವು..

ರಾಜಸ್ಥಾನ ರಾಯಲ್ಸ್ ವಿರುದ್ಧ 13 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್, ಅಗ್ರಸ್ಥಾನಕ್ಕೇರಿದೆ. ಒಟ್ಟು 8 ಪಂದ್ಯಗಳಲ್ಲಿ 6 ಪಂದ್ಯಗಳನ್ನ ಗೆದ್ದಿರೋ ಡೆಲ್ಲಿ 12 ಅಂಕಗಳೊಂದಿಗೆ ನಂಬರ್ 1 ಸ್ಥಾನವನ್ನ ಅಲಂಕರಿಸಿದೆ. ಇನ್ನು ರಾಯಲ್ಸ್ 7ನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ತುಷಾರ್ ದೇಶಪಾಂಡೆ ಐಪಿಎಲ್​ಗೆ ಪದಾರ್ಪಣೆ ಮಾಡಿದ್ರು. ಹರ್ಷಲ್ ಪಟೇಲ್ ಸ್ಥಾನಕ್ಕೆ ರಿಪ್ಲೇಸ್ ಆಗಿದ್ದ ದೇಶಪಾಂಡೆ, 4 ಓವರ್​ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದ್ರು. ಬೆನ್ ಸ್ಟೋಕ್ಸ್ […]

IPL 2020: ರಾಜಸ್ಥಾನ ಮತ್ತು ಡೆಲ್ಲಿ ನಡುವಿನ ಚುಟುಕು ಸಮರದ ಫೋಟೊಗಳಿವು..
ಸಾಧು ಶ್ರೀನಾಥ್​
|

Updated on: Oct 15, 2020 | 4:35 PM

Share

ರಾಜಸ್ಥಾನ ರಾಯಲ್ಸ್ ವಿರುದ್ಧ 13 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್, ಅಗ್ರಸ್ಥಾನಕ್ಕೇರಿದೆ. ಒಟ್ಟು 8 ಪಂದ್ಯಗಳಲ್ಲಿ 6 ಪಂದ್ಯಗಳನ್ನ ಗೆದ್ದಿರೋ ಡೆಲ್ಲಿ 12 ಅಂಕಗಳೊಂದಿಗೆ ನಂಬರ್ 1 ಸ್ಥಾನವನ್ನ ಅಲಂಕರಿಸಿದೆ. ಇನ್ನು ರಾಯಲ್ಸ್ 7ನೇ ಸ್ಥಾನದಲ್ಲಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ತುಷಾರ್ ದೇಶಪಾಂಡೆ ಐಪಿಎಲ್​ಗೆ ಪದಾರ್ಪಣೆ ಮಾಡಿದ್ರು. ಹರ್ಷಲ್ ಪಟೇಲ್ ಸ್ಥಾನಕ್ಕೆ ರಿಪ್ಲೇಸ್ ಆಗಿದ್ದ ದೇಶಪಾಂಡೆ, 4 ಓವರ್​ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದ್ರು.

ಬೆನ್ ಸ್ಟೋಕ್ಸ್ ಹೊಡೆದ ಚೆಂಡನ್ನ ತಡೆಯಲು ಮುಂದಾದ ಶ್ರೇಯಸ್ ಐಯ್ಯರ್, ಭುಜಕ್ಕೆ ಗಾಯ ಮಾಡಿಕೊಂಡರು. ತೀವ್ರ ನೋವಿನಿಂದ ಬಳಲಿದ ಐಯ್ಯರ್, ಮೈದಾನದಿಂದ ಹೊರನಡೆದ್ರು. ಇದ್ರಿಂದ ಶಿಖರ್ ಧವನ್ ತಂಡವನ್ನ ಮುನ್ನಡೆಸಿದ್ರು.

ಡೆಲ್ಲಿ ಕ್ಯಾಪಿಟಲ್ಸ್​ನ ಅಜಿಂಕ್ಯಾ ರಹಾನೆ, ರಾಜಸ್ಥಾನ ವಿರುದ್ಧವೂ ವೈಫಲ್ಯ ಅನುಭವಿಸಿದ್ರು. ಮುಂಬೈ ವಿರುದ್ಧ 15 ರನ್​ಗಳಿಸಿದ್ದ ರಹಾನೆ, ರಾಜಸ್ಥಾನ ವಿರುದ್ಧ 9 ಎಸೆತಗಳನ್ನ ಎದುರಿಸಿ ಕೇವಲ 2 ರನ್ ಗಳಿಸಿ ಜೋಫ್ರಾ ಅರ್ಚರ್​ಗೆ ವಿಕೆಟ್ ಒಪ್ಪಿಸಿದ್ರು.

ಕಗಿಸೋ ರಬಾಡ ಪರ್ಪಲ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ರಾಯಲ್ಸ್ ವಿರುದ್ಧ ಒಂದು ವಿಕೆಟ್ ಪಡೆದ ರಬಾಡ, ಒಟ್ಟು 17 ವಿಕೆಟ್ ಕಬಳಿಸೋದ್ರೊಂದಿಗೆ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.

156.2 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಎಸೆತವನ್ನ ಎಸೆದ ಎನ್ರಿಕ್ ನೊರ್ಟಿಯೆ, ಬಟ್ಲರ್​ರನ್ನ ಬಲಿಪಡೆದ್ರು.

ಶಿಖರ್ ಧವನ್ ಹಾಗೂ ನಾಯಕ ಶ್ರೇಯಾಸ್ ಐಯ್ಯರ್, ರಾಯಲ್ಸ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ್ರು. ದುಬೈ ಅಂಗಳದಲ್ಲಿ ದರ್ಬಾರ್ ನಡೆಸಿದ ಈ ಜೋಡಿ, 85 ರನ್​ಗಳ ಜೊತೆಯಾಟವಾಡ್ತು.