AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್​​ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್​ಮನ್

ಕೊನೇ ಓವರ್. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ RCB ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ RCB ಗೆ ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಌರೋನ್ ಫಿಂಚ್, ಉತ್ತಮ ಆರಂಭ ನೀಡುವಲ್ಲಿ ವಿಫಲವಾದ್ರು. 12ಬಾಲ್​ಗಳಲ್ಲಿ 18ರನ್ ಗಳಿಸಿದ್ದ ಪಡಿಕ್ಕಲ್, ಆರ್ಷ್​ದೀಪ್ ಸಿಂಗ್ ಎಸೆತದಲ್ಲಿ ನಿಕೋಲಸ್ ಪೂರನ್​ಗೆ ಕ್ಯಾಚ್ ನೀಡಿದ್ರು. ಇನ್ನೂ ಌರೋನ್ ಆಟ 20ರನ್​ಗೆ ಅಂತ್ಯವಾಯ್ತು. ಪಂಜಾಬ್ ಸ್ಪಿನ್ನರ್​ಗಳ ಮೋಡಿಗೆ ಮಂಕಾದ RCB […]

ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್​​ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್​ಮನ್
KUSHAL V
|

Updated on: Oct 16, 2020 | 8:23 AM

Share

ಕೊನೇ ಓವರ್. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ RCB ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ RCB ಗೆ ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಌರೋನ್ ಫಿಂಚ್, ಉತ್ತಮ ಆರಂಭ ನೀಡುವಲ್ಲಿ ವಿಫಲವಾದ್ರು. 12ಬಾಲ್​ಗಳಲ್ಲಿ 18ರನ್ ಗಳಿಸಿದ್ದ ಪಡಿಕ್ಕಲ್, ಆರ್ಷ್​ದೀಪ್ ಸಿಂಗ್ ಎಸೆತದಲ್ಲಿ ನಿಕೋಲಸ್ ಪೂರನ್​ಗೆ ಕ್ಯಾಚ್ ನೀಡಿದ್ರು. ಇನ್ನೂ ಌರೋನ್ ಆಟ 20ರನ್​ಗೆ ಅಂತ್ಯವಾಯ್ತು.

ಪಂಜಾಬ್ ಸ್ಪಿನ್ನರ್​ಗಳ ಮೋಡಿಗೆ ಮಂಕಾದ RCB ಬ್ಯಾಟ್ಸ್​ಮನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ, ಎಚ್ಚರಿದಿಂದ ಆಟವಾಡಿದ್ರು. ಎಬಿ ಡಿವಿಲಿಯರ್ಸ್ ಬದಲು ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ವಾಷಿಂಗ್ಟನ್ ಸುಂದರ್ ರನ್ ಗಳಿಸೋದಕ್ಕೆ ಪರದಾಡಿದ್ರು. ಪಂಜಾಬ್ ಸ್ಪಿನ್ನರ್​ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್​ಮನ್​ಗಳು ಬೌಂಡರಿ, ಸಿಕ್ಸರ್​ಗಳನ್ನ ಮರೆತಂತೆ ಆಟವಾಡಿದ್ರು. RCB ಬ್ಯಾಟ್ಸ್​ಮನ್​ಗಳ ಮೈಂಡ್​ಸೆಟ್​ನ್ನ ಅರ್ಥಮಾಡಿಕೊಂಡ ಕ್ಯಾಪ್ಟನ್ ರಾಹುಲ್, ಮೂರು ಸ್ಪಿನ್ನರ್​ಗಳನ್ನ ಕಣಕ್ಕಿಳಿಸಿ ಬೆಂಗಳೂರು ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದ್ರು.

ಸುಂದರ್ 13ರನ್ ಗಳಿಸಿದ್ರೆ, ಶಿವಂ ದುಬೈ 23ರನ್ ಗಳಿಸಿ ಔಟಾದ್ರು. ಅಲ್ಲಿಗೆ, RCB 16ಓವರ್​ಗಳಲ್ಲಿ 4ವಿಕೆಟ್ ಕಳೆದುಕೊಂಡು 127ರನ್ ಗಳಿಸಿತ್ತು. 6ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಎಬಿ ಡಿವಿಲಿಯರ್ಸ್, ಶಾರ್ಜಾದ ಚಿಕ್ಕ ಗ್ರೌಂಡ್​ನಲ್ಲಿ ಬಿಗ್ ಸ್ಕೋರ್ ಕಲೆಹಾಕ್ತಾರೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ 2ರನ್ ಗಳಿಸಿದ್ದ ಎಬಿಡಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ರು.

ಇದೇ ಓವರ್​ನಲ್ಲೇ 3ಬೌಂಡರಿ ಸಹಿತ 48ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ರು. ಆದ್ರೆ, ಕೊನೇ ಓವರ್​ನಲ್ಲಿ ಇಸುರು ಉದನ ಹಾಗೂ ಕ್ರಿಸ್ ಮೊರಿಸ್ 25ರನ್ ಕಲೆಹಾಕಿದ್ರು. ಇದ್ರೊಂದಿಗೆ ಆರ್​ಸಿಬಿ 171ರನ್ ಗಳಿಸ್ತು.

ಶಾರ್ಜಾದಲ್ಲಿ ರನ್ ಸುನಾಮಿ ಎಬ್ಬಿಸಿದ ಕೆ.ಎಲ್. ರಾಹುಲ್ 172ರನ್​ಗಳ ಸವಾಲಿನ ಗುರಿ ಬೆನ್ನತ್ತಿದ್ದ ಪಂಜಾಬ್​ಗೆ, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ 78ರನ್​ಗಳ ಜೊತೆಯಾಟವಾಡಿದ್ರು. RCB ಬೌಲರ್​ಗಳ ಮೇಲೆ ಸವಾರಿ ಮಾಡಿದ ಮಯಾಂಕ್, 25ಬಾಲ್​ಗಳಲ್ಲಿ 45ರನ್ ಗಳಿಸಿ ಚಹಲ್ ಎಸೆತದಲ್ಲಿ ಔಟ್​​ ಆದ್ರು. ಶಾರ್ಜಾದಲ್ಲಿ ರನ್ ಸುನಾಮಿ ಎಬ್ಬಿಸಿದ ಕೆ.ಎಲ್. ರಾಹುಲ್ ಕೊಹ್ಲಿಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ್ರು. 49ಎಸೆತಗಳಲ್ಲಿ 5ಭರ್ಜರಿ ಸಿಕ್ಸರ್​ಗಳ ನೆರವಿನಿಂದ ರಾಹುಲ್ ಅಜೇಯ 61ರನ್ ಗಳಿಸಿದ್ರು.

ಇನ್ನೂ ಈ ಸೀಸನ್​ನಲ್ಲಿ ಮೊದಲ ಪಂದ್ಯವಾಡಿದ ಕ್ರಿಸ್ ಗೇಲ್, ಬಿಗ್ ಇನ್ನಿಂಗ್ಸ್ ಕಟ್ಟಿದ್ರು. RCB ಬೌಲರ್​ಗಳ ಎಸೆತಕ್ಕೆ ಮನಬಂದಂತೆ ಚೆಚ್ಚಿದ ಗೇಲ್, 5ಸಿಕ್ಸರ್ ಸಹಿತ 53ರನ್ ಗಳಿಸಿದ್ರು. ಈ ಮೂಲಕ ಟಿ-ಟ್ವೆಂಟಿ ಕ್ರಿಕೆಟ್​ಗೇ ನಾನೆ ಬಾಸ್ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ರು. ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡ ಪಂದ್ಯದಲ್ಲಿ ನಿಕೋಲಸ್ ಪೂರನ್, ಭರ್ಜರಿ ಸಿಕ್ಸರ್ ಬಾರಿಸೋದ್ರೊಂದಿಗೆ ಪಂಜಾಬ್​ಗೆ ಗೆಲುವು ತಂದುಕೊಟ್ರು.

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!