ಶಾರ್ಜಾದಲ್ಲಿಂದು RCBಗೆ ಪಂಜಾಬ್ ಕನ್ನಡಿಗರ ಸವಾಲ್! ಸೇಡಿನ ಸಮರಕ್ಕೆ ಕೊಹ್ಲಿ ಪಡೆ ಸಜ್ಜು

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಆರ್ಭಟ ಪಂದ್ಯದಿಂದ ಪಂದ್ಯಕ್ಕೆ ಜೋರಾಗ್ತಿದೆ. ಆರ್​ಸಿಬಿ ಅಭಿಮಾನಿಗಳಂತೂ  ಈ ಸಲ್ ಕಪ್ ನಮ್ದೇ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅನ್ನೋ ವಿಶ್ವಾಸದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನ ಹೀನಾಯವಾಗಿ ಬಗ್ಗು ಬಡಿದಿರುವ ಕೊಹ್ಲಿ ಬಾಯ್ಸ್, ಇಂದು ಶಾರ್ಜಾದಲ್ಲಿ ಪಂಜಾಬ್ ವಿರುದ್ಧದ ಸೇಡಿನ ಸಮರಕ್ಕೆ ಸಜ್ಜಾಗಿದ್ದಾರೆ. ಯಾಕಂದ್ರೆ ಆರ್​ಸಿಬಿ ತನ್ನ ಎರಡನೇ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಮುಗ್ಗರಿಸಿತ್ತು. ಬ್ಯಾಟಿಂಗ್ ಕೋಟೆಯಲ್ಲಿ ಕೊಹ್ಲಿ ಗ್ಯಾಂಗ್ ಹರಿಸಲಿದೆ ರನ್ ಮಳೆ! ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಶಾರ್ಜಾದಲ್ಲಿ ಈಗಾಗಲೇ ಆರ್​ಸಿಬಿ […]

ಶಾರ್ಜಾದಲ್ಲಿಂದು RCBಗೆ ಪಂಜಾಬ್ ಕನ್ನಡಿಗರ ಸವಾಲ್! ಸೇಡಿನ ಸಮರಕ್ಕೆ ಕೊಹ್ಲಿ ಪಡೆ ಸಜ್ಜು
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Oct 15, 2020 | 12:15 PM

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಆರ್ಭಟ ಪಂದ್ಯದಿಂದ ಪಂದ್ಯಕ್ಕೆ ಜೋರಾಗ್ತಿದೆ. ಆರ್​ಸಿಬಿ ಅಭಿಮಾನಿಗಳಂತೂ  ಈ ಸಲ್ ಕಪ್ ನಮ್ದೇ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅನ್ನೋ ವಿಶ್ವಾಸದಲ್ಲಿದ್ದಾರೆ.

ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನ ಹೀನಾಯವಾಗಿ ಬಗ್ಗು ಬಡಿದಿರುವ ಕೊಹ್ಲಿ ಬಾಯ್ಸ್, ಇಂದು ಶಾರ್ಜಾದಲ್ಲಿ ಪಂಜಾಬ್ ವಿರುದ್ಧದ ಸೇಡಿನ ಸಮರಕ್ಕೆ ಸಜ್ಜಾಗಿದ್ದಾರೆ. ಯಾಕಂದ್ರೆ ಆರ್​ಸಿಬಿ ತನ್ನ ಎರಡನೇ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಮುಗ್ಗರಿಸಿತ್ತು.

ಬ್ಯಾಟಿಂಗ್ ಕೋಟೆಯಲ್ಲಿ ಕೊಹ್ಲಿ ಗ್ಯಾಂಗ್ ಹರಿಸಲಿದೆ ರನ್ ಮಳೆ! ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಶಾರ್ಜಾದಲ್ಲಿ ಈಗಾಗಲೇ ಆರ್​ಸಿಬಿ ತಂಡ ಕೊಲ್ಕತ್ತಾ ವಿರುದ್ಧ, 82 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇವತ್ತು ಅದೇ ಶಾರ್ಜಾ ಮೈದಾನದಲ್ಲಿ ಕಣಕ್ಕಿಳಿಯುತ್ತಿರೋ ಕೊಹ್ಲಿ ಗ್ಯಾಂಗ್, ಪಂಜಾಬ್ ಮಣಿಸೋಕೆ 200ಕ್ಕೂ ಅಧಿಕ ರನ್ ಟಾರ್ಗೆಟ್ ನೀಡೋ ಗುರಿ ಇಟ್ಕೊಂಡಿದೆ.

ಶಾರ್ಜಾದಲ್ಲಿ ಪಂಜಾಬ್​ಗೆ ಸೋಲು.. ಆರ್​ಸಿಬಿಗೆ ಗೆಲುವು! ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಶಾರ್ಜಾ ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಂದ್ರೆ, ಕಳೆದ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 82 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಅದೇ ಪಂಜಾಬ್ ರಾಜಸ್ಥಾನ್ ವಿರುದ್ಧ ಶಾರ್ಜಾದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಶಾರ್ಜಾ ಪಿಚ್ ಅನ್ನ ಆರ್​ಸಿಬಿ ಹುಡುಗರು ಸದ್ಬಳಕೆ ಮಾಡಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. [yop_poll id=”13″]

ಆರ್​ಸಿಬಿ ಬಲ ಹೆಚ್ಚಿಸಿದ ಫಿಂಚ್, ಸುಂದರ್, ಮಾರಿಸ್! ಸದ್ಯ ಟೂರ್ನಿಯಲ್ಲಿ ಆರ್​ಸಿಬಿ ರೆಡ್ ಹಾಟ್ ಫಾರ್ಮ್​ನಲ್ಲಿದೆ. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಌರೋನ್ ಫಿಂಚ್ ಸಿಡಿದಿದ್ರೆ, ಬ್ಯಾಟಿಂಗ್ ಫ್ರೆಂಡ್ಲಿ ಪಿಚ್​ನಲ್ಲಿ ವಾಷಿಂಗ್ಟನ್ ಸುಂದರ್ ಕೈ ಚಳಕ ಆರ್​ಸಿಬಿ ಯಶಸ್ಸಿಗೆ ಕಾರಣವಾಗ್ತಿದೆ. ಇನ್ನು ಡೆತ್ ಓವರ್​ನಲ್ಲಿ ಸಾಲಿಡ್ ಸ್ಪೆಲ್ ಮಾಡ್ತೀರೋ ಕ್ರಿಸ್ ಮಾರಿಸ್, ಕೊಹ್ಲಿ ತಂಡದ ಬಲ ಹೆಚ್ಚಿಸಿದ್ದಾರೆ.

ಪಂಜಾಬ್ ಪರ ಕಣಕ್ಕಿಳಿಯಲಿದ್ದಾನೆ ಕೆರಿಬಿಯನ್ ಕಿಂಗ್! ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆದ್ದಿರೋ ಪಂಜಾಬ್, ಪ್ಲೇ ಆಫ್​ಗೆ ಎಂಟ್ರಿ ಕೊಡ್ಬೇಕು ಅಂದ್ರೆ ಉಳಿದ ಎಲ್ಲಾ ಪಂದ್ಯಗಳನ್ನ ಗೆಲ್ಲಲೇಬೇಕು. ಹೀಗಾಗಿ ಬಲಿಷ್ಟ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್, ಕಳಪೆ ಫಾರ್ಮ್​ನಲ್ಲಿರೋ ಗ್ಲೇನ್ ಮ್ಯಾಕ್ಸ್​ವೆಲ್ ಬದಲು ಕ್ರಿಸ್ ಗೇಲ್​ರನ್ನ ಕಣಕ್ಕಿಳಿಸೋದಕ್ಕೆ ಮುಂದಾಗಿದೆ. ಹೀಗಾಗಿ ನಾಯಕ ರಾಹುಲ್ ಜತೆಗೆ ಕ್ರಿಸ್ ಗೇಲ್ ಆರಂಭಿಕನಾಗಿ ಇನಿಂಗ್ಸ್ ಆರಂಭಿಸೋ ಸಾಧ್ಯತೆಯಿದೆ.

ಟೂರ್ನಿಯಲ್ಲಿ ಪಂಜಾಬ್ ಕನ್ನಡಿಗರು ಆರ್​ಸಿಬಿ ತಂಡವನ್ನ ಮಣಿಸಿದ್ದಾರೆ ನಿಜ. ಆದ್ರೆ ಆರ್​ಸಿಬಿ ಸ್ಟ್ರೆಂತ್ ಈಗ ಚೇಂಜ್ ಆಗಿದೆ. ಪ್ಲೇ ಆಫ್ ರೇಸ್​ನಲ್ಲಿ ಪಂಜಾಬ್​ಗಿಂತ ಮುಂಚೂಣಿಯಲ್ಲಿರೋ ಕೊಹ್ಲಿ ಗ್ಯಾಂಗ್, ಸೇಡಿನ ಸಮರದಲ್ಲಿ ಪಂಜಾಬ್ ತಂಡವನ್ನ ಶಾರ್ಜಾದಲ್ಲಿ ಪಂಚರ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

Published On - 12:09 pm, Thu, 15 October 20

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ