
FIFA World Cup 2026: ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವುಅಂತಾರಾಷ್ಟ್ರೀಯ ಮಟ್ಟದ ‘ಎಲ್ ಕ್ಲಾಸಿಕೊ’ ಕದನವಾಗಿ ಬಿಂಬಿತವಾಗಿದೆ. ಇದಕ್ಕೆ ಮುಖ್ಯ ಕಾರಣ ರಿಯಲ್ ಮ್ಯಾಡ್ರಿಡ್‌ನ ಕಿಲಿಯನ್ ಎಂಬಾಪೆ ಹಾಗೂ ಬಾರ್ಸಿಲೋನಾ ತಂಡದ ಲಾಮಿನ್ ಯಮಾಲ್ ಮುಖಾಮುಖಿಯಾಗುತ್ತಿರುವುದು.
ಲಾ ಲಿಗಾ ಅಂಗಳದ ಬದ್ದ ವೈರಿಗಳಾದ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ತಂಡಗಳು ವಿಭಿನ್ನ ಶೈಲಿಯ ಆಟಕ್ಕೆ ಹೆಸರುವಾಸಿ. ಈ ಆಟದ ಶೈಲಿಯಲ್ಲೇ ಇದೀಘ ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳು ಕಣಕ್ಕಿಳಿಯಲಿವೆ.
ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಯುಗದ ನಂತರ, ಫುಟ್‌ಬಾಲ್ ಜಗತ್ತು ಹೊಸ ಸೂಪರ್‌ಸ್ಟಾರ್‌ಗಳ ಪೈಪೋಟಿಗೆ ಕಾಯುತ್ತಿತ್ತು. ಅದು ಈಗ ಈ ಎರಡು ತಂಡಗಳ ಮೂಲಕ ಸಿಕ್ಕಿದೆ.
ಮೈದಾನದಲ್ಲಿ ಆಡುವ ಆಟಗಾರರ ಪಟ್ಟಿಯನ್ನು ನೋಡಿದರೆ, ಇದು ಫ್ರಾನ್ಸ್-ಸ್ಪೇನ್ ಪಂದ್ಯ ಎನ್ನುವುದಕ್ಕಿಂತ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಡುವಿನ ಪಂದ್ಯದಂತೆ ಕಾಣುತ್ತದೆ. ಇದಕ್ಕೆ ಕಾರಣ ಎರಡು ತಂಡಗಳಲ್ಲಿರುವ ಆಟಗಾರರು.
ಈ ಎರಡು ತಂಡಗಳ ಮೂಲಕ ಸಾಂಪ್ರದಾಯಿಕ ಎದುರಾಳಿಗಳು ಕಣಕ್ಕಿಳಿಯುತ್ತಿರುವುದರಿಂದ ರಿಯಲ್ ಮ್ಯಾಡ್ರಿಡ್ ಅಭಿಮಾನಿಗಳು ಫ್ರಾನ್ಸ್ ತಂಡವನ್ನು ಮತ್ತು ಬಾರ್ಸಿಲೋನಾ ಅಭಿಮಾನಿಗಳು ಸ್ಪೇನ್ ತಂಡವನ್ನು ಬೆಂಬಲಿಸುತ್ತಿದ್ದಾರೆ.
ಯೂರೋಪ್ ಮತ್ತು ಜಾಗತಿಕ ಫುಟ್‌ಬಾಲ್‌ನಲ್ಲಿ ಈ ಎರಡು ತಂಡಗಳ ಇತ್ತೀಚಿನ ಮುಖಾಮುಖಿಗಳು ಕ್ಲಾಸಿಕ್ ಪಂದ್ಯಗಳಾಗಿ ಇತಿಹಾಸ ಸೇರಿವೆ.
ಈ ಎರಡು ಸೋಲುಗಳಿಂದ ಕಂಗಾಲಾಗಿರುವ ಫ್ರಾನ್ಸ್, ಸ್ಪೇನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದರೆ, ಸ್ಪೇನ್ ತನ್ನ ಜಾಗತಿಕ ಆಧಿಪತ್ಯವನ್ನು ಕಾಯ್ದುಕೊಳ್ಳಲು ಪ್ಲ್ಯಾನ್ ರೂಪಿಸುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯವು ಕೇವಲ ಎರಡು ಬಲಿಷ್ಠ ದೇಶಗಳ ನಡುವಿನ ಸಾಂಪ್ರದಾಯಿಕ ಹೋರಾಟವಾಗಿ ಉಳಿದಿಲ್ಲ. ಇದು ಆಧುನಿಕ ಫುಟ್‌ಬಾಲ್‌ನ ಇಬ್ಬರು ಧ್ರುವತಾರೆಗಳಾದ ಕಿಲಿಯನ್ ಎಂಬಾಪೆ ಮತ್ತು ಲಾಮಿನ್ ಯಮಾಲ್ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಕದನವೂ ಹೌದು.
ಇದನ್ನೂ ಓದಿ: ನಾವು ಹೆದರಲ್ಲ… ಕೊಹ್ಲಿ, ರೋಹಿತ್ಗೆ ಡಕೆಟ್ ಸವಾಲು!
ಹಾಗೆಯೇ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಕ್ಲಬ್ ಅಭಿಮಾನಿಗಳ ನಡುವಿನ ದಶಕಗಳ ಹಳೆಯ ವೈಷಮ್ಯ ಮತ್ತು ಭಾವನಾತ್ಮಕ ಪೈಪೋಟಿಗೆ ಈ ಪಂದ್ಯವು ಹೊಸದೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹೀಗಾಗಿ ಫ್ರಾನ್ಸ್ ಮತ್ತು ಸ್ಪೇನ್ ನಡುವಣ ಸೆಮಿಫೈನಲ್ ಪಂದ್ಯವು ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಅಭಿಮಾನಿಗಳ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.
Published On - 10:13 am, Tue, 14 July 26