ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದು ಇನ್ನು ಹಸಿಯಾಗೇ ಇದೆ. ಕೆಲವರು ಬಾಲಿವುಡ್ನಲ್ಲಿ ಸುಶಾಂತ್ಗಾದ ತಾರತಮ್ಯದ ವಿರುದ್ಧ ಧ್ವನಿಯೆತ್ತಿದ್ರೆ, ಇನ್ನು ಕೆಲವರು ತಾವೂ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಮುಂದಾಗಿದ್ವಿ ಅನ್ನೋ ಸಂಗತಿಯನ್ನ ಬಿಚ್ಚಿಡುತ್ತಿದ್ದಾರೆ. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಾನು ಕೂಡ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೇ ಅನ್ನೋ ಸಂಗತಿಯನ್ನ ಬಾಯ್ಬಿಟ್ಟಿದ್ದಾರೆ.
ಆದ್ರೆ ಆ ಸಮಯದಲ್ಲಿ ನನ್ನ ಮನೆಯವರು ಧೈರ್ಯ, ಪ್ರೋತ್ಸಾಹ ನೀಡಿದ್ದರಿಂದ, ನಾನು ಅಂತಹ ಯೋಚನೆಗಳಿಂದ ಹೊರಬಂದೆ. ಜೊತೆಗೆ ಟೀಮ್ ಇಂಡಿಯಾ ಆಟಗಾರರು ಕೂಡ ನನ್ನ ಬೆಂಬಲವಾಗಿ ನಿಂತರು ಎಂದು ಶಮಿ, ತಾವು ಖಿನ್ನತೆಯಿಂದ ಹೊರಬಂದದ್ದು ಹೇಗೆ ಅನ್ನೋದನ್ನ ವಿವರಿಸಿದ್ದಾರೆ.
ಟೀಮ್ ಇಂಡಿಯಾದ ಪ್ರಮಖ ವೇಗಿಯಾಗಿರೋ ಶಮಿ ವಿರುದ್ಧ ಕಳೆದ ವರ್ಷ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದಿದ್ದವು. ಶಮಿ ಮಾಜಿ ಪತ್ನಿ ಹಸಿನ್ ಜುಹನ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಇದಕ್ಕೂ ಮೊದಲು ಶಮಿ ವಿರುದ್ಧ ಮಾನಸಿನ ದೌರ್ಜನ್ಯ ಆರೋಪ ಹೊರಿಸಿದ್ದರು.
Published On - 4:59 pm, Sun, 21 June 20