ದುಬೈ: ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಪ್ರಸಕ್ತ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯರು 10-ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ನಂತರ ಈ ಟೆಸ್ಟ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅರಂಭ ಆಟಗಾರ ರೋಹಿತ್ ಶರ್ಮ ರವಿವಾರದಂದು ಐಸಿಸಿ ಟೆಸ್ಟ್ ಱಂಕಿಂಗ್ಗಳಲ್ಲಿ 6 ಸ್ಥಾನಗಳಷ್ಟು ಜಿಗಿತ ಕಂಡು 8ನೇ ಸ್ಥಾನಕ್ಕೆ ಬಂದಿದ್ದಾರೆ. ಇದು ಅವರ ವೃತ್ತಿಬದುಕಿನ ಅತ್ಯುತ್ತಮ ಱಂಕಿಂಗ್ ಅಗಿದೆ. ಭಾರತದ ಸ್ಪಿನರ್ಗಳು ವಿಜೃಂಭಿಸಿದ ಸದರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್, ಮೊದಲ ಇನ್ನಿಂಗ್ಸ್ನಲ್ಲಿ 66ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 25 ರನ್ ಬಾರಿಸಿದರು. ಅವರು ಬ್ಯಾಟ್ಸ್ಮನ್ಗಳ ಟೆಸ್ಟ್ ರ್ಯಾಂಕಿಂಗ್ನಲ್ಲಿ ತಮ್ಮ ದೇಶದವರೇ ಅಗಿರುವ ಚೇತೇಶ್ವರ್ ಪೂಜಾರಾ ಮತ್ತಿತರನ್ನು ಹಿಂದಿಕ್ಕಿದ್ದಾರೆ.
ರೋಹಿತ್ ಅವರು 742 ರೇಟಿಂಗ್ಸ್ ಪಾಯಿಂಟ್ಗಳನ್ನು ಶೇಖರಿಸಿದ್ದಾರೆ. ಇದು ಅವರು ತಮ್ಮ ಟೆಸ್ಟ್ ಕರೀಯರ್ನಲ್ಲಿ 2019 ಅಕ್ಟೋಬರ್ನಲ್ಲಿ ಶೇಖರಿಸಿದ್ದ 722 ಪಾಯಿಂಟ್ಗಳಿಗಿಂತ 20 ಪಾಯಿಂಟ್ ಜಾಸ್ತಿಯಿದೆ.
ಸ್ಪಿನ್ನರ್ಗಳಿಗೆ ಭಾರೀ ನೆರವು ನೀಡಿದ ಮೊಟೆರಾ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಪಂದ್ಯದ ವ್ಯಕ್ತಿ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಮಾರಕ ಬೌಲಿಂಗ್ ಪ್ರದರ್ಶನಗಳನ್ನು ನೀಡಿ ಕ್ರಮವಾಗಿ 11 ಮತ್ತು 7 ವಿಕೆಟ್ ಪಡೆದು ತಮ್ಮ ರ್ಯಾಂಕಿಂಗ್ಗಳನ್ನೂ ಉತ್ತಮಪಡಿಸಿಕೊಂಡಿದ್ದಾರೆ.
ಪಟೇಲ್ ಅವರ ಸಾಧನೆ 30 ಸ್ಥಾನಗಳ ಜಿಗಿತ ಕಾಣಲು ನೆರವಾಗಿದ್ದು ಅವರೀಗ ಬೌಲರ್ಗಳ ರ್ಯಾಂಕಿಂಗ್ನಲ್ಲಿ 38ನೇ ಸ್ಥಾನವನ್ನು ಅಕ್ರಮಿಸಿಕೊಂಡಿದ್ದಾರೆ. ಅಶ್ವಿನ್ ನಾಲ್ಕು ಸ್ಥಾನ ಜಿಗಿದು ಮೂರನೇ ಸ್ಥಾನಕ್ಕೇರಿದ್ದಾರೆ.
ಕೇವಲ ಭಾರತದ ಆಟಗಾರರ ರ‍್ಯಾಂಕಿಂಗ್ ಮಾತ್ರ ಉತ್ತಮಗೊಂಡಿಲ್ಲ, ಕೆಲ ಇಂಗ್ಲೆಂಡ್ ಆಟಗಾರರು ಸಹ ಉತ್ತಮ ಪ್ರದರ್ಶನಗನ್ನು ನೀಡಿ ಱಂಕಿಂಗ್ಗಳಲ್ಲಿ ಮೇಲಕ್ಕೇರಿದ್ದಾರೆ. ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಮೊದಲ ಬಾರಿಗೆ ಟಾಪ್-30 ಬೌಲರ್ಗಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅವರ ಱಂಕಿಂಗ್ 18 ಅಗಿದೆ. ಮೊಟೆರಾ ಸ್ಟೇಡಿಯಂನಲ್ಲಿ ಅಪರೂಪದ ಬೌಲಿಂಗ್ ಪ್ರದರ್ಶನ ನೀಡಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆಯುವ ಸಾಧನೆ ಮಾಡಿದ ಇಂಗ್ಲೆಂಟ್ ಟೀಮಿನ ನಾಯಕ ಜೋ ರೂಟ್ ಬೌಲರ್ಗಳ ಱಂಕಿಂಗ್ನಲ್ಲಿ 16 ಸ್ಥಾನ ಮೇಲೆ ಜಿಗಿದು 72ನೇ ಸ್ಥಾನಕ್ಕೆ ಬಂದಿದ್ದಾರೆ. ಅಲ್-ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಅವರು 13 ನೇ ಸ್ಥಾನದಲ್ಲಿದ್ದಾರೆ.
ಇದೇ ಪಂದ್ಯದಲ್ಲಿ ಪ್ರವಾಸಿ ತಂಡದ ಪರ ಅರ್ಧ ಶತಕ ಬಾರಿಸಿದ ಓಪನರ್ ಜಕ್ ಕ್ರಾಲೀ 15 ಸ್ಥಾನ ಜಿಗಿದು 46ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಕೇವಲ ಕ್ರಾಲೀ ಮಾತ್ರ ಗಮನಾರ್ಹ ಜಿಗಿತ ಕಂಡಿದ್ದಾರೆ.
? Ashwin breaks into top three
? Anderson slips to No.6
? Broad, Bumrah move down one spotThe latest @MRFWorldwide ICC Test Player Rankings for bowling: https://t.co/AIR0KNm9PD pic.twitter.com/FssvpYiLcx
— ICC (@ICC) February 28, 2021
ಇದನ್ನೂ ಓದಿ: ICC T20 Ranking: 2ನೇ ಸ್ಥಾನಕ್ಕೇರಿದ ಕನ್ನಡಿಗ ಕೆ.ಎಲ್. ರಾಹುಲ್.. ಕಿಂಗ್ ಕೊಹ್ಲಿಗೆ 7ನೇ ಸ್ಥಾನ..!
Published On - 9:48 pm, Mon, 1 March 21