India vs England: ಅಂತಿಮ ಟೆಸ್ಟ್ನಿಂದ ಹೊರಗುಳಿದ ಬುಮ್ರಾ.. ಟಿ20, ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದು ಡೌಟ್
India vs England: ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡದ ಬುಮ್ರಾ ಏಕದಿನ ಮತ್ತು ಟಿ20 ಸರಣಿಯಲ್ಲೂ ಗೈರುಹಾಜರಾಗಬಹುದು ಎಂದು ವರದಿಯಾಗಿದೆ.
ಅಹಮದಾಬಾದ್: ಅಂತಿಮ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಅದೇನೆಂದರೆ, ತಮ್ಮ ನೆಚ್ಚಿನ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಇನ್ನೂ ಸ್ವಲ್ಪ ಸಮಯದವರೆಗೆ ಮೈದಾನದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂಬುದು. ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡದ ಬುಮ್ರಾ ಏಕದಿನ ಮತ್ತು ಟಿ20 ಸರಣಿಯಲ್ಲೂ ಗೈರುಹಾಜರಾಗಬಹುದು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಬುಮ್ರಾ ಈ ಎಲ್ಲಾ ಪಂದ್ಯಗಳಿಂದ ವಿಶ್ರಾಂತಿ ಪಡೆದು, ನೇರವಾಗಿ 2021ರ ಐಪಿಎಲ್‌ನಲ್ಲಿ ಕಣಕ್ಕಿಳಿಯಲ್ಲಿದ್ದಾರೆ ಎನ್ನಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಗುರುವಾರದಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದರ ನಂತರ, ಮಾರ್ಚ್ 12 ರಿಂದ ಉಭಯ ತಂಡಗಳ ನಡುವೆ ಐದು ಟಿ 20 ಪಂದ್ಯಗಳು ನಡೆಯಲಿವೆ. ಇದರ ನಂತರ ಮಾರ್ಚ್ 23 ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗಳ ನಂತರ ಐಪಿಎಲ್ 2021 ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಐಪಿಸಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಬಿಡುಗಡೆ ಮಾಡಿಲ್ಲ.
ಬುಮ್ರಾ ಏಕದಿನ ಮತ್ತು ಟಿ20 ಸರಣಿಗಳನ್ನು ಆಡುವುದಿಲ್ಲ ತನ್ನನ್ನು ತಂಡದಿಂದ ಕೈಬಿಡುವಂತೆ ಬುಮ್ರಾ ಮಂಡಳಿಗೆ ಮನವಿ ಮಾಡಿದ್ದಾಗಿ ಬಿಸಿಸಿಐ ಶನಿವಾರ ಹೇಳಿಕೆ ನೀಡಿದ್ದು, ಇದನ್ನು ಅಂಗೀಕರಿಸಲಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಈಗ ಬುಮ್ರಾ ಐಪಿಎಲ್‌ನೊಂದಿಗೆ ಕ್ರಿಕೆಟ್ಗೆ ಮರಳಲಿದ್ದಾರೆ. ನಿರಂತರ ಕ್ರಿಕೆಟ್‌ನಿಂದಾಗಿ ಆಟಗಾರರಿಗೆ ವಿರಾಮ ಬೇಕು. ಬುಮ್ರಾನನ್ನು ತಂಡದಿಂದ ಕೈಬಿಟ್ಟರೆ, ತಂಡಕ್ಕೆ ಹೊಸ ಆಟಗಾರರನ್ನು ಸೇರಿಸಲು ಟೀಂ ಇಂಡಿಯಾಕ್ಕೆ ಅವಕಾಶ ಸಿಗುತ್ತದೆ. ಈ ಸರಣಿಯಲ್ಲಿ ಬುಮ್ರಾ ಇದುವರೆಗೆ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬುಮ್ರಾ ಅನೇಕ ಓವರ್ಗಳನ್ನು ಎಸೆದರು. ಆದರೆ ಅವರು ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ. ಇದರ ನಂತರ, ಅವರಿಗೆ ಎರಡನೇ ಟೆಸ್ಟ್ನಿಂದ ವಿಶ್ರಾಂತಿ ನೀಡಲಾಯಿತು. ಅಹಮದಾಬಾದ್‌ನಲ್ಲಿ ನಡೆದ ಹಗಲು ರಾತ್ರಿ ಟೆಸ್ಟ್‌ನಲ್ಲಿ ಬುಮ್ರಾ ಪುನರಾಗಮನ ಮಾಡಿದರು ಸಹ ಯಶಸ್ಸು ಪಡೆಯುವಲ್ಲಿ ವಿಫಲರಾದರು.
ಫಿಟ್ನೆಸ್ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ವಿಫಲ ಮುಂದಿನ ಟಿ20 ಸರಣಿ ಹಾಗೂ ಏಕದಿನ ಸರಣಿಯಲ್ಲಿ ಹೊಸಬರಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಆದರೆ ಎನ್‌ಸಿಎನಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ವಿಫಲರಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಫಿಟ್‌ನೆಸ್ ಪರೀಕ್ಷೆಗಾಗಿ ಬಿಸಿಸಿಐ ಒಟ್ಟು 35 ಆಟಗಾರರನ್ನು ಎನ್‌ಸಿಎಗೆ ಕಳುಹಿಸಿದೆ. ವರುಣ್ ಅವರಲ್ಲದೆ, ಭಾರತದ ಮತ್ತೊಬ್ಬ ಆಟಗಾರ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಈ ಆಟಗಾರರನ್ನು ಎರಡನೇ ಸುತ್ತಿನ ಫಿಟ್‌ನೆಸ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: India vs England: ಅಂತಿಮ ಟೆಸ್ಟ್ನಿಂದ ಬುಮ್ರಾ ಔಟ್.. ವೈಯಕ್ತಿಕ ಕಾರಣದಿಂದ ಯಾರ್ಕರ್ ಕಿಂಗ್ ಅಲಭ್ಯ ಎಂದ ಬಿಸಿಸಿಐ..!