India vs England: ಅಂತಿಮ ಟೆಸ್ಟ್​ನಿಂದ ಬುಮ್ರಾ ಔಟ್​.. ವೈಯಕ್ತಿಕ ಕಾರಣದಿಂದ ಯಾರ್ಕರ್​ ಕಿಂಗ್​ ಅಲಭ್ಯ ಎಂದ ಬಿಸಿಸಿಐ..!

India vs England: ಬಿಸಿಸಿಐ ಪ್ರಕಾರ, ವೈಯಕ್ತಿಕ ಕಾರಣಗಳಿಗಾಗಿ ತನ್ನನ್ನು 4ನೇ ಪಂದ್ಯದಿಂದ ಕೈಬಿಡುವಂತೆ ಬುಮ್ರಾ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಕೋರಿದ್ದರು ಎನ್ನಲಾಗಿದೆ

India vs England: ಅಂತಿಮ ಟೆಸ್ಟ್​ನಿಂದ ಬುಮ್ರಾ ಔಟ್​.. ವೈಯಕ್ತಿಕ ಕಾರಣದಿಂದ ಯಾರ್ಕರ್​ ಕಿಂಗ್​ ಅಲಭ್ಯ ಎಂದ ಬಿಸಿಸಿಐ..!
ಜಸ್ಪ್ರೀತ್ ಬುಮ್ರಾ
Follow us
ಪೃಥ್ವಿಶಂಕರ
|

Updated on: Feb 27, 2021 | 2:46 PM

ಅಹಮದಾಬಾದ್​: ಭಾರತ- ಇಂಗ್ಲೆಂಡ್​ ನಡುವೆ ನಡೆಯುತ್ತಿರುವ 4 ಟೆಸ್ಟ್​ ಪಂದ್ಯಗಳ ಸರಣಿಯ ಅಂತಿಮ ಟೆಸ್ಟ್​ ಪಂದ್ಯಕ್ಕೆ ಟೀಂ ಇಂಡಿಯಾ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಲಿದ್ದಾರೆ. ಮುಂದಿನ ಪಂದ್ಯದ ಆರಂಭಕ್ಕೂ ಮುನ್ನ ಈ ಮಾಹಿತಿ ಹೊರಬಿದ್ದಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫೆಬ್ರವರಿ 27 ರ ಶನಿವಾರ ಈ ಮಾಹಿತಿ ನೀಡಿದೆ. ಬಿಸಿಸಿಐ ಪ್ರಕಾರ, ವೈಯಕ್ತಿಕ ಕಾರಣಗಳಿಗಾಗಿ ತನ್ನನ್ನು 4ನೇ ಪಂದ್ಯದಿಂದ ಕೈಬಿಡುವಂತೆ ಬುಮ್ರಾ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಕೋರಿದ್ದರು ಎನ್ನಲಾಗಿದೆ.

ಹೀಗಾಗಿ ಬುಮ್ರಾ ಅವರ ಮನವಿಯನ್ನು ಮಂಡಳಿಯು ಸಹ ಒಪ್ಪಿಕೊಂಡಿದೆ. ಅಲ್ಲದೆ ಕೊನೆಯ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಬದಲಿಗೆ ತಂಡಕ್ಕೆ ಬೇರೆ ಯಾವುದೇ ಆಟಗಾರರನ್ನು ಸೇರಿಸಲಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಅಹಮದಾಬಾದ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಬುಮ್ರಾ ಕೇವಲ 6 ಓವರ್‌ಗಳನ್ನು ಎಸೆದಿದ್ದರು.

ಈ ಸರಣಿಯಲ್ಲಿ ಬುಮ್ರಾ ಇದುವರೆಗೆ 2 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಬುಮ್ರಾ ಅನೇಕ ಓವರ್​ಗಳನ್ನು ಎಸೆದಿದ್ದರು. ಆದರೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಇದರಿಂದಾಗಿ ಬುಮ್ರಾ ಅವರನ್ನು 2ನೇ ಟೆಸ್ಟ್​ ಪಂದ್ಯದಿಂದ ಕೈಬಿಡಲಾಯಿತು. ಅಹಮದಾಬಾದ್‌ನಲ್ಲಿ ನಡೆದ ಹಗಲು ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಬುಮ್ರಾ ಪುನರಾಗಮನ ಮಾಡಿದರು. ಆದರೆ ಯಾವುದೇ ವಿಕೆಟ್​ ಪಡೆಯುವಲ್ಲಿ ಬುಮ್ರಾ ಯಶಸ್ವಿಯಾಗಲಿಲ್ಲ.

Jasprit Bumrah ಬುಮ್ರಾ ವಿನಂತಿಸಿದ್ದರು.. ತನ್ನನ್ನು ತಂಡದಿಂದ ಬಿಡುಗಡೆ ಮಾಡುವಂತೆ ಬುಮ್ರಾ ಮಂಡಳಿಗೆ ಮನವಿ ಮಾಡಿದ್ದಾಗಿ ಬಿಸಿಸಿಐ ಶನಿವಾರ ಹೇಳಿಕೆ ನೀಡಿದ್ದು, ಇದನ್ನು ಅಂಗೀಕರಿಸಲಾಗಿದೆ ಎಂದು ಮಂಡಳಿಯು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ವೈಯಕ್ತಿಕ ಕಾರಣಗಳನ್ನು ನೀಡಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮೊದಲು ತಂಡದಿಂದ ಬಿಡುಗಡೆ ಮಾಡುವಂತೆ ಜಸ್ಪ್ರೀತ್ ಬುಮ್ರಾ ಬಿಸಿಸಿಐಗೆ ಮನವಿ ಮಾಡಿದ್ದರು. ಇದರ ಆಧಾರದ ಮೇಲೆ, ವೇಗದ ಬೌಲರ್ ಬಿಡುಗಡೆಯಾಗಿದ್ದು, ನಾಲ್ಕನೇ ಟೆಸ್ಟ್‌ನಲ್ಲಿ ಅವರು ಲಭ್ಯವಿರುವುದಿಲ್ಲ.

ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ, ಮಾರ್ಚ್ 4 ರಿಂದ ಕೊನೆಯ ಟೆಸ್ಟ್​ ಮುಂದಿನ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅವರ ಬದಲಾವಣೆಯಾಗಿ ಬೇರೆ ಯಾವ ಆಟಗಾರನನ್ನೂ ತಂಡಕ್ಕೆ ಸೇರಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಟೀಂ ಇಂಡಿಯಾ ಈಗಾಗಲೇ ಕಳೆದ ಟೆಸ್ಟ್ ಪಂದ್ಯದ ವೇಗದ ಬೌಲರ್‌ಗಳಾಗಿ ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹೊಂದಿದ್ದರೆ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗದಲ್ಲಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾರ್ಚ್ 4 ರಿಂದ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ. 4 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ತಂಡವು 2-1ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ಕೊನೆಯ ಟೆಸ್ಟ್‌ನಲ್ಲಿ ಗೆಲುವು ಅಥವಾ ಡ್ರಾ ಅಗತ್ಯವಿದೆ.