India vs England Test Series: ‘ಮೊಟೆರಾ ಪಿಚ್ ಟೆಸ್ಟ್ ಕ್ರಿಕೆಟ್ಗೆ ಯೋಗ್ಯವಾಗಿರಲಿಲ್ಲ’ ಟ್ರೋಲ್ ಆಯ್ತು ಯುವರಾಜ್ ಸಿಂಗ್ ಹೇಳಿಕೆ
ತಾವಾಡುತ್ತಿದ್ದ ದಿನಗಳಲ್ಲಿ ಯುವರಾಜ್ ಸಿಂಗ್ ಕೇವಲ ಭಾರತ ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಹೆಸರುವಾಸಿ ಆಟಗಾರನಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಜೊತೆ ಉಪಯುಕ್ತ ಎಡಗೈ ಸ್ಪಿನ್ನರ್ ಆಗಿದ್ದ ಯುವಿಗೆ ಮೊಟೆರಾದ ಸ್ಟೇಡಿಯಂ ಸರಿಯೆನಿಸುತ್ತಿಲ್ಲ. ಹಾಗೆಯೇ ಅವರು ಮಾಡಿರುವ ಟೀಕೆ ಭಾರತದಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಸರಿಯೆನಿಸುತ್ತ್ತಿಲ್ಲ.
ಮೊಟೆರಾದ ನರೆಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿರುವ ಪಿಚ್ ಬಗ್ಗೆ ಎದ್ದಿರುವ ವಾದ-ವಿವಾದಗಳು ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವರು ಅದನ್ನು ವಹಿಸಿಕೊಂಡು ಮಾತಾಡಿದರೆ ಇನ್ನೂ ಕೆಲವರು ಅದು ಟೆಸ್ಟ್ ಕ್ರಿಕೆಟ್ಗೆ ಯೋಗ್ಯವಾದ ಪಿಚ್ ಅಗಿರಲಿಲ್ಲ ಅಂತ ಹೇಳುತ್ತಿದ್ದಾರೆ. ಇಂಗ್ಲೆಂಡ್ನ ಮಾಜಿ ಮತ್ತು ಹಾಲಿ ಅಟಗಾರರು ಪಿಚ್ ಸ್ವರೂಪವನ್ನು ಟೀಕಿಸಿದರೆ ಅದನ್ನು ಭಾರತೀಯರು ಒಪ್ಪಬಹುದು, ಅದರೆ ಭಾರತದ ಒಬ್ಬ ಮಾಜಿ ಆಟಗಾರ ಪಿಚ್ ಅನ್ನು ಟೀಕಿಸಿ ಟ್ರೋಲ್ಗಳಗಾಗಿದ್ದಾರೆ. ತಾವಾಡುತ್ತಿದ್ದ ದಿನಗಳಲ್ಲಿ ಯುವರಾಜ್ ಸಿಂಗ್ ಕೇವಲ ಭಾರತ ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಹೆಸರುವಾಸಿ ಆಟಗಾರನಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಜೊತೆ ಉಪಯುಕ್ತ ಎಡಗೈ ಸ್ಪಿನ್ನರ್ ಆಗಿದ್ದ ಯುವಿಗೆ ಮೊಟೆರಾದ ಸ್ಟೇಡಿಯಂ ಸರಿಯೆನಿಸುತ್ತಿಲ್ಲ. ಹಾಗೆಯೇ ಅವರು ಮಾಡಿರುವ ಟೀಕೆ ಭಾರತದಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಸರಿಯೆನಿಸುತ್ತ್ತಿಲ್ಲ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊಟೆರಾದಲ್ಲಿ ನಡೆದ ಮೂರನೆ ಟೆಸ್ಟ್ ಎರಡನೇ ದಿನವೇ ಕೊನೆಗೊಂಡಿದ್ದು ಈಗ ಇತಿಹಾಸ. ಈ ಟೆಸ್ಟ್ನಲ್ಲಿ ಅತಿಥೇಯರ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಸ್ಪಿನ್ ಜೋಡಿಯು ಪ್ರವಾಸಿಗರ 20 ವಿಕೆಟ್ಗಳ ಪೈಕಿ 18 ಅನ್ನು ಹಂಚಿಕೊಂಡರು. ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು ಎರಡೂ ಇನ್ನಿಂಗ್ಸ್ಗಳಲ್ಲಿ ಸೇರಿ 200 ರನ್ ಸಹ ಗಳಿಸಲು ವಿಫಲರಾದರು. ಮೊದಲ ಇನ್ನಿಂಗ್ಸ್ನಲ್ಲಿ ಅವರು 112 ರನ್ ಗಳಿಸಿದರೆ ಎರಡನೆಯದರಲ್ಲಿ ಕೇವಲ 81 ರನ್ಗಳಿಗೆ ಅಲೌಟ್ ಆದರು. ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ನ 81 ರನ್ಗಳ ಮೊತ್ತ ಭಾರತದ ವಿರುದ್ಧ ಇದುವರೆಗಿನ ಅತಿ ಕಡಿಮೆ ಸ್ಕೋರ್ ಅಗಿದೆ. ಅಲ್ಲದೆ ಅವರು ಎರಡನೇ ದಿನದಾಟದಲ್ಲಿ ಕೇವಲ ಒಂದು ಸೆಷನ್ನಲ್ಲಿ ಎಲ್ಲ ವಿಕೆಟ್ಗಳನ್ನು ಒಪ್ಪಿಸಿದರು.
ಈ ಟೆಸ್ಟ್ನಲ್ಲಿ 11 ವಿಕೆಟ್ಗಳನ್ನು ಪಡೆದ ಪಟೇಲ್ ಅಹರ್ನಿಶಿ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾದರು. ಅಶ್ವಿನ್ 7 ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಟೆಸ್ಟ್ ಕರೀಯರ್ನಲ್ಲಿ 400 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದರು. ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆಗೆ ಮೊಟೆರಾದಂಥ ಪಿಚ್ಗಳು ದೊರಕಿದ್ದರೆ ಅವರು ಕ್ರಮವಾಗಿ 800 ಮತ್ತು 1,000 ವಿಕೆಟ್ಗಳನ್ನು ಪಡೆದು ರಿಟೈರಾಗುತ್ತಿದ್ದರು ಎಂದು ಯುವಿ ಹೇಳಿದ್ದಾರೆ.
‘ಎರಡೇ ದಿನಗಳಲ್ಲಿ ಪಂದ್ಯ ಮುಗಿದಿದೆ, ಈ ಪಿಚ್ ಟೆಸ್ಟ್ ಕ್ರಿಕೆಟ್ಗೆ ಯೋಗ್ಯವಾಗಿತ್ತೆನ್ನುವ ಬಗ್ಗೆ ಸಂಶಯ ಹುಟ್ಟಿದೆ. ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಇಂಥ ಪಿಚ್ಗಳ ಮೇಲೆ ಬೌಲ್ ಮಾಡಿದ್ದರೆ, ಸಾವಿರ ಮತ್ತು 800 ವಿಕೆಟ್ ಗಳಿಸಿರುತ್ತಿದ್ದರು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದರೆ, ಈ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನಗಳನ್ನು ನೀಡಿದ ಅಕ್ಷರ್ ಮತ್ತು ಅಶ್ವಿನ್ ಅವರನ್ನು ಅಭಿನಂದಿಸುವುದನ್ನು ಯುವಿ ಮರೆತಿಲ್ಲ. ‘ಅಕ್ಷರ್ಗೆ ಅಭಿನಂದನೆಗಳು, ಎಂಥ ಸ್ಪೆಲ್! ಅಶ್ವಿನ್ ಅವರಿಗೂ ನನ್ನ ಅಭಿನಂದನೆಗಳು’ ಎಂದು ಯುವಿ ಟ್ವೀಟ್ ಮಾಡಿದ್ದಾರೆ,
finished in 2 days Not sure if that’s good for test cricket !If @anilkumble1074 and @harbhajan_singh bowled on these kind of wickets they would be sitting on a thousand and 800 ??However congratulations to ?? @akshar2026 what a spell! congratulations @ashwinravi99 @ImIshant ?
— Yuvraj Singh (@YUVSTRONG12) February 25, 2021
ಆದರೆ, ಯುವಿಯ ಟ್ವೀಟ್ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಅವರು ಸಹ ಟ್ವೀಟ್ಗಳ ಮೂಲಕ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಆಯುಶ್ ಶುಕ್ಲಾ ಹೆಸರಿನ ಅಭಿಮಾನಿಯೊಬ್ಬರು, ’ಯುವಿ ಭಾಯ್, ಬಾರತ ಮತ್ತು ಅಸ್ಟ್ರೇಲಿಯಾ ಮಧ್ಯೆ 2004ರಲ್ಲಿ ಮುಂಬೈಯಲ್ಲಿ ನಡೆದ ಒಂದು ಟೆಸ್ಟ್ ಕೇವಲ ಎರಡೂವರೆ ದಿನಗಳಲ್ಲಿ ಮುಗಿದಿತ್ತು ಎನ್ನುವುದನ್ನು ಮರೆಯಬೇಡಿ. ಆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಕೇವಲ 9 ರನ್ ನೀಡಿ 6 ವಿಕೆಟ್ ಪಡೆದ ಮೈಕೆಲ್ ಕ್ಲಾರ್ಕ್. ಆ ಪಂದ್ಯದಲ್ಲಿ ಕುಂಬ್ಳೆ ಮತ್ತು ಹರ್ಭಜನ್ ಸಹ ಆಡಿದ್ದರು’ ಅಂತ ಟ್ವೀಟ್ ಮಾಡಿದ್ದಾರೆ.
Yuvi bhai hope you didn't forget that 2004 Mumbai test against Australia which was over in just 2&half days..The best bowling figures of that match 6-9 was by M.Clarke..Both Kumble&Harbhajan played that test too#INDvsENG #INDvENG #PinkBallTest
— Ayush shukla (@ayushukla1) February 25, 2021
ವಾಸು ಮಿಶ್ರಾ ಹೆಸರಿನ ಮತ್ತೊಬ್ಬ ಅಭಿಮಾನಿ, ‘ಪಾಜಿ ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ. ಅದರೆ ನಿಮ್ಮ ಈ ಟ್ವೀಟ್ನ ಅವಶ್ಯಕತೆಯಿರಲಿಲ್ಲ. ಮೊದಲು ವಿರಾಟ್-ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್-ಸೆಹ್ವಾಗ್ ಮಧ್ಯೆ ಹೋಲಿಕೆಗಳನ್ನು ಮಾಡಿದಾಗ ರಿಟೈರ್ ಅಗಿರುವ ನಿಮ್ಮಂಥ ಆಟಗಾರರು ಹೋಲಿಕೆ ಮಾಡುವುದು ಸರಿಯಲ್ಲ ಅಂತ ಹೇಳುತ್ತೀರಿ ಮತ್ತು ಸಮಯ ಬಂದಾಗ ನೀವೇ ಹೋಲಿಕೆ ಮಾಡಲಾರಂಭಿಸುತ್ತೀರಿ’ ಎಂದು ಟ್ವೀಟ್ ಮಾಡಿದ್ದಾರೆ.
Pajji mai aapki bahot respect karta hun lekin aaj ke din pe ye tweet nahi banta tha pahle jav bhi virat vs sachin Rohit vs viru ye sav hota hai toh aap log joh aab ritirment le chuke ho bolte ho compare mat karo aur khud time aane pe karte ho .
— Vasu Mishra (@VasuMis97350860) February 25, 2021
ಸುಮ್ಮನಿರದೆ ಏನೋ ಮಾಡಿಕೊಂಡರು ಅಂತ ಹೇಳುತ್ತಾರಲ್ಲ, ಹಾಗಾಗಿದೆ ಯುವಿಯ ಸ್ಥಿತಿ.
ಇದನ್ನೂ ಓದಿ: India vs England Test Series: ಪಿಂಕ್ ಬಾಲ್ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್ ಮಾಡುವುದು ಕಷ್ಟ: ವಿರಾಟ್ ಕೊಹ್ಲಿ
Published On - 7:56 pm, Fri, 26 February 21