India vs England Test Series: ಪಿಂಕ್ ಬಾಲ್ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್ ಮಾಡುವುದು ಕಷ್ಟ: ವಿರಾಟ್ ಕೊಹ್ಲಿ
ಪಿಚ್ ಸ್ವರೂಪ ಹೇಗಾದರೂ ಇರಲಿ. ಹೊನಲು ಬೆಳಕಿನಲ್ಲಿ ಪಿಂಕ್ ಬಾಲ್ ಎದುರಿಸುವುದು ಬ್ಯಾಟ್ಸ್ಮನ್ಗಳಿಗೆ ದೊಡ್ಡ ಸವಾಲಿನ ಕೆಲಸವಾಗಲಿದೆ. ಸಾಯಂಕಾಲ ಸಮಯದಲ್ಲಿ ಬ್ಯಾಟ್ ಮಾಡುವ ಸಂದರ್ಭ ಎದುರಾದರೆ ಮೊದಲಿನ ಒಂದೂವರೆ ಗಂಟೆ ಅವಧಿಯ ಆಟ ಭಾರೀ ಸವಾಲಿನದಾಗಿರುತ್ತದೆ ಅಂತ ವಿರಾಟ್ ಕೊಹ್ಲಿ ಹೇಳುತ್ತಾರೆ.
ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಸಕ್ತ ಸರಣಿಯ ಮೂರನೇ ಟೆಸ್ಟ್ ಪಂದ್ಯ ನಾಳೆಯಿಂದ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಮುನ್ನಾ ದಿನ ಅಹಮದಾಬಾದಿನಲ್ಲಿ ವರ್ಚ್ಯುವಲ್ ಸುದ್ದಿಗೋಷ್ಟಿಯೊಂದರಲ್ಲಿ ಮಾತಾಡಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಪಿಚ್ನ ಸ್ವರೂಪ ಹೇಗಾದರೂ ಇರಲಿ, ಅದರೆ ಪಿಂಕ್ ಬಾಲ್ ಕ್ರಿಕೆಟ್ ಟೆಸ್ಟ್ ಅಡುವುದು ಸವಾಲಿನ ಕೆಲಸ ಅಂತ ಹೇಳಿದರು. ಎರಡೂ ತಂಡದ ಆಟಗಾರರರಿಗೆ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಪಿಚ್ ಹೇಗೆ ವರ್ತಿಸಬಹುದೆನ್ನುವುದರ ಬಗ್ಗೆ ಮಾಹಿತಿಯಿಲ್ಲ, ಆದರೆ, ಸಾಮಾನ್ಯವಾಗಿ ಪಿಂಕ್ ಬಾಲ್ ವೇಗದ ಬೌಲರ್ಗಳಿಗೆ ನೆರವಾಗುತ್ತದೆ. ಆದರೆ ಭಾರತದ ಬಲ ಸ್ಪಿನ್ ಬೌಲಿಂಗ್; ಅವರಿಗೂ ಪಿಚ್ ಸಹಕಾರಿಯಾಗಬಲ್ಲದೇ?
ಸಾಯಂಕಾಲ ಆಗುತ್ತಿದ್ದಂತೆ ಮಾಸ್ಟ್ ಇಲ್ಲವೇ ಎಲ್ಈಡಿ ಬಲ್ಬುಗಳ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ ಎಂದು ವರ್ಚ್ಯುವಲ್ ಪ್ರೆಸ್ಮೀಟ್ನಲ್ಲಿ ಕೊಹ್ಲಿ ಹೇಳಿದರು.
‘ಪಿಚ್ ಸ್ವರೂಪ ಹೇಗಾದರೂ ಇರಲಿ. ಆದರೆ ಹೊನಲು ಬೆಳಕಿನಲ್ಲಿ ಪಿಂಕ್ ಚೆಂಡನ್ನು ಎದುರಿಸಿ ಆಡುವುದು ಬ್ಯಾಟ್ಸ್ಮನ್ಗಳಿಗೆ ದೊಡ್ಡ ಸವಾಲಿನ ಕೆಲಸವಾಗಲಿದೆ. ಸಾಯಂಕಾಲದ ಸಮಯದಲ್ಲಿ ಬ್ಯಾಟ್ ಮಾಡುವ ಸಂದರ್ಭ ಎದುರಾದರೆ ಮೊದಲಿನ ಒಂದೂವರೆ ಗಂಟೆ ಅವಧಿಯ ಆಟ ಭಾರೀ ಸವಾಲಿನದಾಗಿರುತ್ತದೆ. ಪಿಂಕ್ ಚೆಂಡಿನಿಂದ ಸ್ಪಿನ್ ಬೌಲರ್ಗಳೂ ಪರಾಕ್ರಮ ಮೆರೆಯಬಹುದು. ಆದರೆ ವೇಗದ ಬೌಲರ್ಗಳನ್ನು ಕಡೆಗಣಿಸುವಂತಿಲ್ಲ. ಪಿಂಕ್ ಚೆಂಡಿನ ಮೇಲೆ ಹೊಳಪು ಇರುವವರೆಗೂ ವೇಗದ ಬೌಲರ್ಗಳು ಪರಿಣಾಮಕಾರಿಯಾಗಿರುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ತಯಾರಿ ನಡೆಸಬೇಕು’ ಎಂದು ಕೊಹ್ಲಿ ಹೇಳಿದರು.
Who doesn't love the crowd ??
We are happy to have the support of #TeamIndia ?? fans and it shall be no different at Motera ?️ @imVkohli #INDvENG @paytm pic.twitter.com/6m1TJPPmZu
— BCCI (@BCCI) February 23, 2021
ಭಾರತ ಇದುವರೆಗೆ ಕೇವಲ 2 ಅಹರ್ನಿಶಿ ಪಂದ್ಯಗಳನ್ನು ಮಾತ್ರ ಅಡಿದೆ. 2019ರಲ್ಲಿ ಬಾಂಗ್ಲಾದೇಶದ ವಿರುದ್ದ ಸ್ವದೇಶದಲ್ಲಿ ಅಡಿದ ಮೊದಲ ಪಂದ್ಯದಲ್ಲಿ ಭಾರತ ಭಾರಿ ಅಂತರದ ಗೆಲುವು ಸಾಧಿಸಿತ್ತು. ಆದರೆ ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧ ಆಡಿದ ತನ್ನ ಎರಡನೇ ಹಗಲು-ರಾತ್ರಿ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗಿ ಅವಹೇಳನಕಾರಿ ಸೋಲು ಅನುಭವಿಸಿತ್ತು.
ಈ ಎರಡು ಪಂದ್ಯಗಳಲ್ಲಿ ಭಾರತ ದೊರಕಿರುವ ಅನುಭವದ ಬಗ್ಗೆ ಮತಾಡಿದ ಕೊಹ್ಲಿ, ‘ದಿನದ ಮೊದಲ ಸೆಷನ್ನಲ್ಲಿ ಅಂದರೆ ಶುಭ್ರವಾದ ಸೂರ್ಯನ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರುತ್ತದೆ. ಪ್ರಖರವಾದ ಸೂರ್ಯನ ಬೆಳಕಿನಲ್ಲಿ ಜಾಸ್ತಿ ಹೊಯ್ದಾಡುವುದಿಲ್ಲ. ಅದರೆ ಸಾಯಂಕಾಲವಾಗುತ್ತಿದ್ದಂತೆ ಅಂದರೆ ಇಳಿಸಂಜೆಯಲ್ಲಿ ಬ್ಯಾಟ್ ಮಾಡುವುದು ತುಂಬಾ ಪ್ರಯಾಸಕರವಾಗಿರುತ್ತದೆ’ ಎಂದು ಕೊಹ್ಲಿ ಹೇಳಿದರು.
Snapshots from #TeamIndia's training session at the Motera ahead of the pink-ball Test.@Paytm #INDvENG pic.twitter.com/RTWxUVVNla
— BCCI (@BCCI) February 20, 2021
‘ಬೆಳಕು ಬದಲಾಗುತ್ತಿದ್ದಂತೆ, ಹೊನಲು ಬೆಳಕಿನಲ್ಲಿ ಚೆಂಡು ಗುರುತಿಸುವುದು ಕಷ್ಟವಾಗುತ್ತದೆ. ಮಾಮೂಲಿ ಟೆಸ್ಟ್ ಪಂದ್ಯವೊಂದರ ಮೊದಲ ಸೆಷನ್ನಲ್ಲಿ ಆಡುವಂತಿರುತ್ತದೆ. ಇಂಥ ಪಂದ್ಯಗಳಲ್ಲಿ ಬೆಳಗಿನ ಸಮಯದಲ್ಲಿ ಬಾಲು ಜಾಸ್ತಿ ಸ್ವಿಂಗ್ ಆಗುತ್ತದೆ. ಈ ಪಂದ್ಯಗಳಲ್ಲಿನ ಬೆಳಗಿನ ಆಟ ಮತ್ತು ಅಹರ್ನಿಶಿ ಟೆಸ್ಟ್ಗಳಲ್ಲಿ ಸಾಯಂಕಾಲದ ಅಟ ಒಂದೇ ತೆರನಾಗಿರುತ್ತದೆ. ಈ ಬದಲಾವಣೆಗೆ ನಾವು ಕೂಡಲೇ ಒಗ್ಗಿಕೊಳ್ಳಬೇಕಾಗುತ್ತದೆ,’ ಎಂದು ಕೊಹ್ಲಿ ಹೇಳಿದರು.
ಇದನ್ನೂ ಓದಿ: Motera Stadium: ಹಲವಾರು ವೈಶಿಷ್ಟ್ಯತೆಗಳ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ವಿಶ್ವದಲ್ಲೇ ಅತಿ ದೊಡ್ಡದು!
Published On - 10:24 pm, Tue, 23 February 21