Ind vs Eng, 3rd Test, Day 1, LIVE Score: ದಿನದಾಟ ಅಂತ್ಯ, ಭಾರತದ 3 ವಿಕೆಟ್ ಪತನ, ರೋಹಿತ್ ಅರ್ಧ ಶತಕ
India vs England: ಮೊದಲನೇ ದಿನದಾಟ ಅಂತ್ಯವಾಗುವ ಮುನ್ನ ಟೀಂ ಇಂಡಿಯಾ ನಾಯಕ ಕೊಹ್ಲಿಯ ವಿಕೆಟ್ ಕಳೆದುಕೊಂಡಿತು. ನಾಳಿನ ಆಟಕ್ಕೆ ಆರಂಭಿಕ ರೋಹಿತ್ ಹಾಗೂ ರಹಾನೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ. ರೋಹಿತ್ 57 ರನ್ ಗಳಿಸಿ ಅಜೇಯರಾಗುಳಿದರೆ, 3 ಬಾಲ್ ಎದುರಿಸಿದ ರಹಾನೆ 1 ರನ್ ಗಳಿಸಿದ್ದಾರೆ.
ಅಹಮದಾಬಾದ್: ಮೊದಲನೇ ದಿನದಾಟ ಅಂತ್ಯವಾಗುವ ಮುನ್ನ ಟೀಂ ಇಂಡಿಯಾ ನಾಯಕ ಕೊಹ್ಲಿಯ ವಿಕೆಟ್ ಕಳೆದುಕೊಂಡಿತು. ನಾಳಿನ ಆಟಕ್ಕೆ ಆರಂಭಿಕ ರೋಹಿತ್ ಹಾಗೂ ರಹಾನೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ. ರೋಹಿತ್ 57 ರನ್ ಗಳಿಸಿ ಅಜೇಯರಾಗುಳಿದರೆ, 3 ಬಾಲ್ ಎದುರಿಸಿದ ರಹಾನೆ 1 ರನ್ ಗಳಿಸಿದ್ದಾರೆ. ಮೊದಲ ದಿನವೇ.. ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದು, ಪಂದ್ಯದ ಮೆಲೆ ಹಿಡಿತ ಸಾಧಿಸಿ ವಿಜೃಂಭಿಸಬೇಕಿದ್ದ ಭಾರತ ತಂಡ ರಕ್ಷಣಾತ್ಮಕ ಬ್ಯಾಟಿಂಗ್ಗೆ ಮೊರೆಹೋಯಿತು. ಇದಕ್ಕೆ ತಕ್ಕಂತೆ ಮೂರು ವಿಕೆಟುಗಳು ಉರುಳಿದ್ದು ಭಾರತದ ತಂಡಕ್ಕೆ ಮಗ್ಗುಲ ಮುಳ್ಳು ಆಯಿತು. ಇದರಿಂದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾದರೂ ಭಾರತದ ಬ್ಯಾಟ್ಸ್ಮನ್ಗಳು ನಿಧಾನಕ್ಕೆ ಆಡಿಕೊಳ್ಳಲಿ… ಸಮಾಧಾನ ಪಟ್ಟಿಕೊಂಡಿದ್ದಾರೆ.
Published On - 10:16 pm, Wed, 24 February 21