Ind vs Eng, 3rd Test, Day 2, LIVE Score: ಅಶ್ವಿನ್- ಅಕ್ಷರ್ ಅಬ್ಬರ, 3ನೇ ಟೆಸ್ಟ್ ಗೆದ್ದ ಭಾರತ, ಸರಣಿಯಲ್ಲಿ 2-1 ರಿಂದ ಮುನ್ನಡೆ
India vs England: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 2 ಇನ್ನಿಂಗ್ಸ್ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು.ಇಂಗ್ಲೆಂಡ್ ನೀಡಿದ 49 ರನ್ಗಳ ಸುಲಭ ಗುರಿಯನ್ನು ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನತ್ತಿತು. ರೂಟ್ ಓವರ್ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ನೊಂದಿಗೆ ರೋಹಿತ್ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು.
Key Events
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 2 ಇನ್ನಿಂಗ್ಸ್ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು.
ಮೊದಲ ದಿನದ ಪಂದ್ಯದಲ್ಲಿ, ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಸತತ ಎರಡನೇ ಪಂದ್ಯದಲ್ಲಿ 5 ಕ್ಕಿಂತ ಹೆಚ್ಚು ವಿಕೆಟ್ ಪಡೆದು ಸಂಭ್ರಮಿಸಿದರು. ಇದಕ್ಕೂ ಮೊದಲು ಚೆನ್ನೈನಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದರು. ಹಾಗೆಯೇ 2ನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ 5 ವಿಕೆಟ್ ಪಡೆದು ತಂಡಕ್ಕೆ ನೆರವಾದರು.
LIVE Cricket Score & Updates
-
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ನಿಂದ ಇಂಗ್ಲೆಂಡ್ ಔಟ್
ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಸೋಲಿನೊಂದಿಗೆ ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡುವ ಕನಸು ನುಚ್ಚು ನೂರಾಗಿದೆ. ನ್ಯೂಜಿಲೆಂಡ್ ಈಗಾಗಲೇ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಈಗ ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಸ್ಪರ್ಧೆ ಉಂಟಾಗಿದೆ.
-
ಸಿಕ್ಸರ್ನೊಂದಿಗೆ ಪಂದ್ಯ ಮುಗಿಸಿದ ರೋಹಿತ್
ಇಂಗ್ಲೆಂಡ್ ನೀಡಿದ 49 ರನ್ಗಳ ಸುಲಭ ಗುರಿಯನ್ನು ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನತ್ತಿತು. ರೂಟ್ ಓವರ್ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ನೊಂದಿಗೆ ರೋಹಿತ್ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು.
-
ಗಿಲ್ ಸಿಕ್ಸರ್, ಭಾರತ 28/0
ಗೆಲುವಿನ ಸನಿಹದಲ್ಲಿರುವ ಟೀಂ ಇಂಡಿಯಾ, ಆದಷ್ಟು ಬೇಗ ಆಟ ಮುಗಿಸಲು ಯತ್ನಿಸುತ್ತಿದೆ. ಇದರ ಫಲವಾಗಿ ಟೀಂ ಇಂಡಿಯಾದ ಆರಂಭಿಕ ಗಿಲ್, ರೂಟ್ ಎಸೆತವನ್ನು ನೇರವಾಗಿ ಸಿಕ್ಸರ್ಗೆ ಅಟ್ಟಿದರು.
3ನೇ ಸೆಷನ್ ಬೌಂಡರಿಯೊಂದಿಗೆ ಆರಂಭ
ಗೆಲುವಿನ ಸನಿಹದೊಂದಿಗೆ 3ನೇ ಸೆಷನ್ ಆರಂಭಿಸಿರುವ ಟೀಂ ಇಂಡಿಯಾ ಗಿಲ್ ಅವರ ಬೌಂಡರಿಯೊಂದಿಗೆ ಕೊನೆಯ ಸೆಷನ್ ಆರಂಭಿಸಿದೆ.
ಊಟದ ವಿರಾಮ, ಭಾರತ 11/0
ಊಟದ ವಿರಾಮದ ವೇಳೆಗೆ 49 ರನ್ಗಳ ಗೆಲುವಿನ ಗುರಿ ಬೆನ್ನತ್ತಿರುವ ಟೀಂ ಇಂಢಿಯಾ ವಿಕೆಟ್ ನಷ್ಟವಿಲ್ಲದೆ 11 ರನ್ಗಳಿಸಿದೆ. ರೋಹಿತ್ ಹಾಗೂ ಗಿಲ್ ಬ್ಯಾಟಿಂಗ್ನಲ್ಲಿದ್ದಾರೆ.
ಭಾರತದ 2ನೇ ಇನ್ನಿಂಗ್ಸ್ ಆರಂಭ
ಟೀಂ ಇಂಡಿಯಾ 49 ರನ್ಗಳ ಗೆಲುವಿನ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದಿದೆ. ರೋಹಿತ್ ಹಾಗೂ ಗಿಲ್ ಕಣಕ್ಕಿಳಿದಿದ್ದಾರೆ.
81 ರನ್ಗಳಿಗೆ ಇಂಗ್ಲೆಂಡ್ ಸರ್ವಪತನ
81 ರನ್ಗಳಿಗೆ ಇಂಗ್ಲೆಂಡ್ ತಂಡ ತನ್ನ 2ನೇ ಇನ್ನಿಂಗ್ಸ್ ಮುಗಿಸಿದೆ.ಈ ಮೂಲಕ ಟೀಂ ಇಂಡಿಯಾಕ್ಕೆ ಗೆಲ್ಲಲು 48 ರನ್ಗಳ ಟಾರ್ಗೆಟ್ ನೀಡಿದೆ.
9ನೇ ವಿಕೆಟ್ ಪತನ, ಇಂಗ್ಲೆಂಡ್ 80/9
9 ರನ್ ಗಳಿಸಿದ್ದ ಲೀಚ್ ಅಶ್ವಿನ್ ಎಸೆತದಲ್ಲಿ ಸ್ಲಿಪ್ನಲ್ಲಿ ನಿಂತಿದ್ದ ರಹಾನೆ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ. ಈ ಮೂಲಕ ಅಶ್ವಿನ್ ಈ ಇನ್ನಿಂಗ್ಸ್ನಲ್ಲಿ 4ವಿಕೆಟ್ ಪಡೆದಿದ್ದಾರೆ.
8ನೇ ವಿಕೆಟ್ ಪತನ, ಅಕ್ಷರ್ 5 ವಿಕೆಟ್
8 ರನ್ ಗಳಿಸಿದ್ದ ಫೋಕ್ಸ್, ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲಿನ್ LBW ಬಲೆಗೆ ಬಿದ್ದರು. ಫೋಕ್ಸ್ DRS ಮೊರ ಹೋದರು ಸಹ, ಪರಿಶೀಲಿಸಿದ 3ನೇ ಅಂಪೈರ್ ಅದು ಔಟ್ ಎಂದು ತೀರ್ಪು ನೀಡಿದರು. ಜೊತೆಗೆ ಫೋಕ್ಸ್ ವಿಕೆಟ್ನೊಂದಿಗೆ ಅಕ್ಷರ್ 5 ವಿಕೆಟ್ ಪಡೆದ ಸಾಧನೆ ಮಾಡಿದರು.
ಲೀಚ್ ಸಿಕ್ಸರ್
ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲಿಕಿದ್ದ ಇಂಗ್ಲೆಂಡ್ಗೆ ಲೀಚ್ ಅವರ ಸಿಕ್ಸರ್ ಸ್ವಲ್ಪ ಸಮಾಧಾನ ತಂದಿದೆ.
ಅಶ್ವಿನ್ 400ನೇ ವಿಕೆಟ್
ಟೀಂ ಇಂಡಿಯಾ ಬೌಲಿಂಗ್ ಅಸ್ತ್ರ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 400ನೇ ವಿಕೆಟ್ ಪಡೆದಿದ್ದಾರೆ. ಈ ಮೂಲಕ ವೇಗವಾಗಿ 400 ವಿಕೆಟ್ ತೆಗೆದ ಮೊದಲ ಭಾರತೀಯ ಆಟಗಾರ ಅಶ್ವಿನ್ ಆಗಿದ್ದಾರೆ. ಆರ್ಚರ್ ಅಶ್ವಿನ್ಗೆ 400ನೇ ಬಲಿಯಾದರು.
ಇಂಗ್ಲೆಂಡ್ 7ನೇ ವಿಕೆಟ್ ಪತನ
2ನೇ ಇನ್ನಿಂಗ್ಸ್ ಆರಂಭದಿಂದಲೂ ಇಂಗ್ಲೆಂಡ್ ತಂಡ ವಿಕೆಟ್ ಕಳೆದುಕೊಳ್ಳುತ್ತಾ ಬರುತ್ತಿದೆ. ಅದರ ಫಲವಾಗಿ ಇಂಗ್ಲೆಂಡ್ ತಂಡದ 7ನೇ ವಿಕೆಟ್ ಪತನವಾಗಿದೆ. ಈ ಮೂಲಕ ಅಶ್ವಿನ್ಗೆ ಆರ್ಚರ್ ಮುಖಾಂತರ 3ನೇ ಬಲಿ ಸಿಕ್ಕಿದೆ.
ಪೋಪ್ ಔಟ್
12 ರನ್ ಗಳಿಸಿದ್ದ ಪೋಪ್ ಅಶ್ವಿನ್ ಬೌಲಿಂಗ್ನಲ್ಲಿ ಕ್ಲಿನ್ ಬೋಲ್ಡ್ ಆಗಿದ್ದಾರೆ. ಈ ಮೂಲಕ ಇಂಗ್ಲೆಂಡ್ನ 6ನೇ ವಿಕೆಟ್ ಪತನವಾಗಿದೆ. 2ನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ಗೆ ಇದು 2ನೇ ವಿಕೆಟ್ ಆಗಿದೆ.
ರೂಟ್ ಔಟ್, ಇಂಗ್ಲೆಂಡ್ 56/5
ಇಂಗ್ಲೆಂಡ್ ತಂಡದ ಭರವಸೆಯಾಗಿ ಉಳಿದಿದ್ದ ನಾಯಕ ರೂಟ್ ಅಕ್ಷರ್ ಪಟೇಲ್ ಎಸೆತದಲ್ಲಿ LBW ಬಲೆಗೆ ಬಿದ್ದರು. ಔಟಾಗುವುದಕ್ಕೂ ಮುನ್ನ ರೂಟ್ 19 ರನ್ ಗಳಿಸಿದ್ದರು.
ಸ್ಟೋಕ್ಸ್ ಔಟ್
25 ರನ್ ಗಳಿಸಿ ತಂಡಕ್ಕೆ ಆಸರೆಯಾಗುತ್ತಿದ್ದ ಸ್ಟೋಕ್ಸ್ ಅಶ್ವಿನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
50 ರನ್ ಪೂರೈಸಿದ ಇಂಗ್ಲೆಂಡ್
ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದೆ. ನಾಯಕ ರೂಟ್ ಜೊತೆಗೂಡಿರುವ ಸ್ಟೋಕ್ಸ್ ತಾಳ್ಮೆಯ ಆಟದಿಂದಾಗಿ ಇಂಗ್ಲೆಂಡ್ 50 ರನ್ ಪೂರೈಸಿದೆ
ಇನ್ನಿಂಗ್ಸ್ ಮೊದಲ ಬೌಂಡರಿ
ಇಂಗ್ಲೆಂಡ್ ತಂಡದ 2ನೇ ಇನ್ನಿಂಗ್ಸ್ನ ಮೊದಲ ಬೌಂಡರಿ ಸ್ಟೋಕ್ಸ್ ಅವರ ಬ್ಯಾಟ್ನಿಂದ ಬಂದಿದೆ. ಅಶ್ವಿನ್ ಎಸೆತವನ್ನು ಲಾಂಗ್ ಆಫ್ ಕಡೆ ಬಾರಿಸಿ ಸ್ಟೋಕ್ಸ್ ಬೌಂಡರಿ ಪಡೆದುಕೊಂಡರು.
ಇಂಗ್ಲೆಂಡ್ 3ನೇ ವಿಕೆಟ್ ಪತನ
ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಾಳ್ಮೆಯ ಆಟಕ್ಕೆ ಮುಂದಾಗಿತ್ತು. ಆದರೆ ಭಾರತದ ನಿಖರ ದಾಳಿಗೆ ಹೆದರಿರುವ ಇಂಗ್ಲೆಂಡ್ ದಾಂಡಿಗರು ಸದ್ದಿಲ್ಲದೆ ವಿಕೆಟ್ ಒಪ್ಪಿಸುತ್ತಿದ್ದಾರೆ. 7 ರನ್ ಗಳಿಸಿದ್ದ ಆರಂಭಿಕ ಸಿಬ್ಲಿ, ಅಕ್ಷರ್ಗೆ ಬಲಿಯಾಗಿದ್ದಾರೆ.
ರೂಟ್, ಸಿಬ್ಲಿ ತಾಳ್ಮೆಯ ಆಟ, ಇಂಗ್ಲೆಂಡ್ 19/2
ಶೂನ್ಯಕ್ಕೆ 2 ವಿಕೆಟ್ ಉರುಳಿದ ಬಳಿಕ ನಾಯಕ ರೂಟ್ ಹಾಗೂ ಆರಂಭಿಕ ಸಿಬ್ಲಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ
ಶೂನ್ಯಕ್ಕೆ ಮತ್ತೊಂದು ವಿಕೆಟ್
2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ಶೂನ್ಯಕ್ಕೆ 2 ವಿಕೆಟ್ ಕಳೆದುಕೊಂಡಿದೆ. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಕ್ರಾವ್ಲೆ ಔಟಾದರೆ, 3ನೇ ಎಸೆತದಲ್ಲಿ ಬೈರ್ಸ್ಟೋವ್ ಔಟಾಗಿದ್ದಾರೆ.
2ನೇ ಇನ್ನಿಂಗ್ಸ್ ಆರಂಭ, ಮೊದಲ ಎಸೆತದಲ್ಲೇ ವಿಕೆಟ್
2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡಕ್ಕೆ ಮೊದಲ ಎಸೆತದಲ್ಲೇ ಆಘಾತ ಎದುರಾಗಿದೆ. ಅಕ್ಷರ್ ಎಸೆದ ಮೊದಲ ಎಸೆತದಲ್ಲೇ ಇಂಗ್ಲೆಂಡ್ ತಂಡದ ಕ್ರಾವ್ಲೆ ಕ್ಲಿನ್ ಬೋಲ್ಡ್ ಆಗಿದ್ದಾರೆ.
145 ರನ್ಗಳಿಗೆ ಇಂಡಿಯಾ ಆಲ್ಔಟ್
ಟೀಂ ಇಂಡಿಯಾ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 145 ರನ್ಗಳಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಪರ ನಾಯಕ ರೂಟ್ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಲೀಚ್ 4 ವಿಕೆಟ್ ಪಡೆದರೆ, ಆರ್ಚರ್ 1 ವಿಕೆಟ್ ಪಡೆದರು.
ಇಶಾಂತ್ ಸಿಕ್ಸರ್
ಪ್ರಮುಖ 9 ವಿಕೆಟ್‌ಗಳು ಉದುರಿದ ಬಳಿಕ ಮೈದಾನದಲ್ಲಿರುವ ಬೌಲರ್ ಇಶಾಂತ್ ಸರ್ಮಾ ಲೀಚ್ ಬೌಲಿಂಗ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಇದು ಟೀಂ ಇಂಡಿಯಾದ ಮೊದಲ ಸಿಕ್ಸರ್ ಸಹ ಆಗಿದೆ.
ಅಶ್ವಿನ್ ಔಟ್, ಭಾರತ 134/9
ಟೀಂ ಇಂಡಿಯಾದ ಪ್ರಮುಖ ಆಟಗಾರರ ವಿಕೆಟ್ ಉರುಳಿದ ಬಳಿಕ, ಭಾರತದ ಬಾಲಂಗೋಚಿಗಳು ಪೆವಿಲಿಯನ್ ಪರೆಡ್ ಆರಂಭಿಸಿದ್ದಾರೆ. ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದ ಅಶ್ವಿನ್ 16 ರನ್ಗಳಿಸಿ ರೂಟ್ಗೆ ವಿಕೆಟ್ ಒಪ್ಪಿಸಿದ್ದಾರೆ. ವಿಶೇಷವೆಂದರೆ ರೂಟ್ ಕೇವಲ 5 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.
ಅಕ್ಷರ್ ಔಟ್
ಸುಂದರ್ ವಿಕೆಟ್ ಬಳಿಕ ಬ್ಯಾಟಿಂಗ್‌ಗೆ ಇಳಿದಿದ್ದ ಅಕ್ಷರ್ ಪಟೇಲ್ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಶೂನ್ಯಕ್ಕೆ ಸುಂದರ್ ಔಟ್, ಇಂಡಿಯಾ 125/7
ರೋಹಿತ್ ವಿಕೆಟ್ ಬಳಿಕ ಮೈದಾನಕ್ಕಿಳಿದಿದ್ದ ಸುಂದರ್, ರೂಟ್ ಬೌಲಿಂಗ್ನಲ್ಲಿ ಖಾತೆ ತೆರೆಯದೆ ಔಟಾಗಿದ್ದಾರೆ.
ಅಶ್ವಿನ್ ಬೌಂಡರಿ
ಸತತ ವಿಕೆಟ್ ಬಳಿಕ ಸುಂದರ್ ಜೊತೆಗೂಡಿರುವ ಅಶ್ವಿನ್ ಉತ್ತಮ ಆಟ ಆಡುತ್ತಿದ್ದಾರೆ. ಲೀಚ್ ಬೌಲಿಂಗ್ನಲ್ಲಿ ಬೌಂಡರಿ ಬಾರಿಸುವ ಮೂಲಕ 4 ರನ್ ಸಂಪಾದಿಸಿದರು.
ಅಶ್ವಿನ್ ಬೌಂಡರಿ
ಸತತವಾಗಿ ವಿಕೆಟ್ ಕಳೆದುಕೊಂಡ ಬಳಿಕ ಅಶ್ವಿನ್ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಲೀಚ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಅಶ್ವಿನ್ ಬೌಂಡರಿ ಗಳಿಸಿದ್ದಾರೆ.
ಪಂತ್ ಔಟ್, ಭಾರತ 117/6
ರಹಾನೆ ವಿಕೆಟ್ ಬಳಿಕ ಬ್ಯಾಟಿಂಗ್‌ಗೆ ಇಳಿದಿದ್ದ ರಿಶಭ್ ಪಂತ್ ಕೇವಲ 1 ರನ್ಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಇನ್ನಿಂಗ್ಸ್ನ ಮೊದಲನೇ ಓವರ್ ಎಸೆಯಲು ಬಂದ ರೂಟ್ ಬೌಲಿಂಗ್ನಲ್ಲಿ ಪಂತ್ ಔಟಾದರು.
ರೋಹಿತ್ ಔಟ್
66 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಆರಂಭಿಕ ರೋಹಿತ್ ಶರ್ಮಾ ಲೀಚ್ ಬೌಲಿಂಗ್ನಲ್ಲಿ ಕ್ಲಿನ್ LBW ಬಲೆಗೆ ಬಿದ್ದರು. ರೋಹಿತ್ drs ಮೊರೆ ಹೋದರು ಸಹ, 3ನೇ ಅಂಪೈರ್ ಅದನ್ನು ಔಟ್ ಎಂದು ಘೋಷಿಸಿದರು.
ರಹಾನೆ ಔಟ್, ಭಾರತ 114/4
ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಅಜಿಂಕ್ಯಾ ರಹಾನೆ ಕೇವಲ 7 ರನ್ ಗಳಿಸಿ ಲಿಚ್ ಬೌಲಿಂಗ್ನಲ್ಲಿ LBW ಆಗಿ ಪೆವಿಲಿಯನ್ ಸೇರಿದ್ದಾರೆ.
ಇನ್ನಿಂಗ್ಸ್ ಮುನ್ನಡೆಯತ್ತಾ ಭಾರತ
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿರುವ 112 ರನ್ಗಳನ್ನು ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಬೆನ್ನತ್ತಿದೆ. ಸದ್ಯ ಬ್ಯಾಟಿಂಗ್ನಲ್ಲಿ ರೋಹಿತ್ ಹಾಗೂ ರಹಾನೆ ಇದ್ದಾರೆ. ಈ ಜೋಡಿ ಅದ್ಭುತ ಆಟ ಆಡಿದಲ್ಲಿ ಇಂಗ್ಲೆಂಡ್ಗೆ ಬಹಳ ಕಷ್ಟವಾಗಲಿದೆ
ರಹಾನೆ ಬೌಂಡರಿ
ರನ್ ಗಳಿಸಲು ಪರದಾಡುತ್ತಿದ್ದ ರಹಾನೆ ಲೀಚ್ ಎಸೆತವನ್ನು ಸ್ವಿಪ್ ಮಾಡುವ ಮೂಲಕ ಲಾಂಗ್ ಲೆಗ್ ಕಡೆ ಬಾರಿಸಿ ತಮ್ಮ ಇನ್ನಿಂಗ್ಸ್ ಮೊದಲ ಬೌಂಡರಿ ಪಡೆದರು
ರೋಹಿತ್ ಬೌಂಡರಿ
2ನೇ ದಿನದಾಟದ 3ನೇ ಓವರ್ನಲ್ಲಿ ಆಂಡರ್ಸನ್ ಅವರ 2ನೇ ಎಸೆತವನ್ನ ಡೀಪ್ ಕವರ್ ಪಾಯಿಂಟ್ ಕಡೆ ಬಾರಿಸಿ ರೋಹಿತ್ ಶರ್ಮಾ ಬೌಂಡರಿ ಪಡೆದರು.
ಶತಕ ಪೂರೈಸಿದ ಭಾರತ
2ನೇ ದಿನದಾಟದ ಮೊದಲನೇ ಓವರ್ನಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ರೋಹಿತ್ ಶರ್ಮಾ ತಂಡದ ಮೊತ್ತವನ್ನು 100 ಕ್ಕೆ ಏರಿಸಿದರು. ಜೊತೆಗೆ ರೋಹಿತ್ ವೈಯಕ್ತಿಕ ಮೊತ್ತ 58, ರಹಾನೆ 1 ರನ್ ಆಗಿದೆ
2ನೇ ದಿನದಾಟ ಆರಂಭ
ಮೊದಲ ದಿನದಲ್ಲಿ 99 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 2 ನೇ ದಿನದಾಟವನ್ನು ಆರಂಭಿಸಿದೆ. ಟೀಂ ಇಂಡಿಯಾ ಪರ ರೋಹಿತ್ ಹಾಗೂ ರಹಾನೆ ಕಣಕ್ಕಿಳಿದಿದ್ದಾರೆ. ಇಂಗ್ಲೆಂಡ್ ಪರ ಆಂಡರ್ಸನ್ ಬೌಲಿಂಗ್ ಆರಂಭಿಸಿದ್ದಾರೆ.
ಪಿಚ್ ರಿಪೋರ್ಟ್
ಪಿಂಕ್ ಬಾಲ್ ಟೆಸ್ಟ್‌ನ ಎರಡನೇ ದಿನದ ಪಿಚ್ ಕೂಡ ಬ್ಯಾಟಿಂಗ್‌ಗೆ ಸೂಕ್ತವಾಗಿರುತ್ತದೆ. ಅಲ್ಲದೆ ಬ್ಯಾಟ್ಸ್‌ಮನ್ ಹೇಗೆ ಆಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಗವಾಸ್ಕರ್ ಹೇಳಿದರು. ಮೊದಲ ದಿನ 12 ವಿಕೆಟ್‌ಗಳು ಮೊಟೆರಾ ಪಿಚ್‌ನಲ್ಲಿ ಬಿದ್ದವು.
ರೋಹಿತ್ ಶತಕದತ್ತ
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನ ಎರಡನೇ ದಿನ ಇಂದು. ಎಲ್ಲರ ಕಣ್ಣುಗಳು ತಮ್ಮ ಶತಕದಿಂದ ಕೇವಲ 33 ರನ್ ದೂರದಲ್ಲಿರುವ ರೋಹಿತ್ ಶರ್ಮಾ ಅವರ ಮೇಲೆ ಇದೆ. ರೋಹಿತ್ ಅವರನ್ನು ಬೆಂಬಲಿಸಲು ರಹಾನೆ ಇಂದು ಕ್ರೀಸ್ಗೆ ಬರಲಿದ್ದಾರೆ. ವಿರಾಟ್ ಕೊಹ್ಲಿ ಅವರ ವಿಕೆಟ್ ಮೊದಲ ದಿನದ ಕೊನೆಯ ಕ್ಷಣಗಳಲ್ಲಿ ಉರುಳಿತು.
Hello from Ahmedabad ☀️
We are Day 2️⃣ ready ?? #TeamIndia #INDvENG #PinkBallTest @Paytm pic.twitter.com/esHRzYYnIV
— BCCI (@BCCI) February 25, 2021
Published On - Feb 25,2021 7:59 PM