AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy: ಬಿಸಿಸಿಐನಿಂದ ಅವಕೃಪೆಗೊಳಗಾಗಿರುವ ಪೃಥ್ವಿ ಶಾ; ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಡಬಲ್ ಸೆಂಚುರಿ!

ಪೃಥ್ವಿ ಶಾ ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ಪ್ರವಾಸ ತೆರಳಿದ್ದ ಭಾರತೀಯ ಟೀಮಿನ ಭಾಗವಾಗಿದ್ದರು. ಅಡೀಲೇಡ್​ನಲ್ಲಿ ಮೊದಲ ಟೆಸ್ಟ್​ನಲ್ಲಿ ನಿರಾಶಾದಾಯಕ ಪ್ರದರ್ಶನಗಳನ್ನು ನೀಡಿದ ಅವರನ್ನು ಮುಂದಿನ 3 ಪಂದ್ಯಗಳಿಗೆ ಪರಿಗಣಿಸಲಾಗಿರಲಿಲ್ಲ.

Vijay Hazare Trophy: ಬಿಸಿಸಿಐನಿಂದ ಅವಕೃಪೆಗೊಳಗಾಗಿರುವ ಪೃಥ್ವಿ ಶಾ; ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಡಬಲ್ ಸೆಂಚುರಿ!
ಪೃಥ್ವಿ ಶಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 25, 2021 | 5:47 PM

ಜೈಪುರ್: ಟೆಸ್ಟ್ ಹಾಗೂ ಸೀಮಿತ ಒವರ್​ಗಳ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಕಡೆಗಣಿಸಲ್ಪಟ್ಟಿರುವ 21 ವರ್ಷ ವಯಸ್ಸಿನ ಮುಂಬೈ ನಾಯಕ ಮತ್ತು ಆರಂಭ ಆಟಗಾರ ಪೃಥ್ವಿ ಶಾ ಗುರುವಾರದಂದು ವಿಜಯ್ ಹಜಾರೆ ಟ್ರೋಫಿಗಾಗಿ ಜೈಪುರಿನ ಸವಾಯ್ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪುದುಚೆರಿ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದೂ ಅಲ್ಲದೆ ಮೂಲಕ ಲಿಸ್ಟ್ ‘ಎ’ ಕ್ರಿಕೆಟ್ ಪಂದ್ಯಗಳಲ್ಲಿ ಒಬ್ಬ ನಾಯಕನಾಗಿ ಗರಿಷ್ಠ ರನ್ ಗಳಿಸಿದ ಹಿರಿಮೆಗೂ ಪಾತ್ರರಾದರು. ಶಾ, ಲಿಸ್ಟ್ ‘ಎ’ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿರುವ 8ನೇ ಭಾರತೀಯ ಆಟಗಾರನಾಗಿದ್ದಾರೆ. ಪುದುಚೆರಿಯ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಶಾ, ಕೇವಲ 142 ಎಸೆತಗಳಲ್ಲಿ 200 ರನ್ ಗಡಿ ದಾಟಿದರು. ಅಂತಿಮವಾಗಿ ಅವರು 227ರನ್ (152 ಎಸೆತ, 27ಬೌಂಡರಿ, 4 ಸಿಕ್ಸ್) ಬಾರಿಸಿ ಅಜೇಯರಾಗುಳಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲಾಗಿರುವ 4 ನೇ ಡಬಲ್ ಸೆಂಚುರಿ ಇದಾಗಿದೆ.

ಗಮನಾರ್ಹ ಸಂಗತಿಯೆಂದರೆ ಶಾ ಮೊದಲ ಬಾರಿಗೆ ಮುಂಬೈ ಟೀಮಿನ ನಾಯಕತ್ವ ವಹಿಸಿದ್ದಾರೆ. ಅವರಂತೆಯೇ ದುರ್ಬಲ ಪುದುಚೆರಿ ಬೌಲಿಂಗ್ ಆಕ್ರಮಣವನ್ನು ಮೈದಾನದೆಲ್ಲೆಡೆ ಚಚ್ಚಿದ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20ಐ ಸರಣಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಪ್ರತಿಭಾವಂತ ಬಲಗೈ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಅವರ ಮಿಂಚಿನ 133 (58 ಎಸೆತಗಳು 22ಬೌಂಡರಿ ಮತ್ತು 4 ಸಿಕ್ಸರ್) ನೆರವಿನಿಂದ ಮುಂಬೈ ಟೀಮು ನಿಗದಿತ 50 ಓವರ್​ಗಳಲ್ಲಿ ಬೃಹತ್ 457/4 ಮೊತ್ತ ಪೇರಿಸಿತು.

ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ ದ್ವಿಶತಕಗಳನ್ನು ಬಾರಿಸಿರುವ ಇತರ ಭಾರತೀಯ ಆಟಗಾರರ ಪಟ್ಟಿ ಹೀಗಿದೆ. ರೋಹಿತ್ ಶರ್ಮ, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಶಿಖರ್ ಧವನ್, ಕರಣ್ ವೀರ್ ಕೌಶಲ್ ಮತ್ತು ಸಂಜು ಸ್ಯಾಮ್ಸನ್. ಗಮನಿಸಬೇಕಾದ ಅಂಶವೆಂದರೆ, ಟೀಮ್ ಇಂಡಿಯಾದ ಆರಂಭ ಆಟಗಾರ ರೋಹಿತ್ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

Suryakumar Yadav

ಸೂರ್ಯಕುಮಾರ್ ಯಾದವ್

ಪೃಥ್ವಿ ಶಾ ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ಪ್ರವಾಸ ತೆರಳಿದ್ದ ಭಾರತೀಯ ಟೀಮಿನ ಭಾಗವಾಗಿದ್ದರು. ಅಡಿಲೇಡ್​ನಲ್ಲಿ ಮೊದಲ ಟೆಸ್ಟ್​ನಲ್ಲಿ ನಿರಾಶಾದಾಯಕ ಪ್ರದರ್ಶನಗಳನ್ನು ನೀಡಿದ ಅವರನ್ನು ಮುಂದಿನ 3 ಪಂದ್ಯಗಳಿಗೆ ಪರಿಗಣಿಸಲಾಗಿರಲಿಲ್ಲ. ಈ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆಗೆ ಔಟಾದ ಶಾ ಎರಡನೇ ಇನ್ನಿಂಗ್ಸ್​ನಲ್ಲಿ 4 ರನ್ ಗಳಿಸಿದ್ದರು. ಅವರ ಸ್ಥಾನದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಶುಭಮನ್ ಗಿಲ್ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಶಾ ಅವರನ್ನು ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಪಂದ್ಯಗಳಿಗೆ ಕೈಬಿಟ್ಟರೂ ಸೀಮಿತ ಓವರ್​ಗಳ ಪಂದ್ಯಗಳಿಗೆ ಪರಿಗಣಿಸಬಹುದೆಂದು ಕ್ರಿಕೆಟ್​ ವಲಯಗಳಲ್ಲಿ ಚರ್ಚೆಯಾಗಿತ್ತು, ಆದರೆ, ಬಿಸಿಸಿಐನ ಕೃಪಾಕಟಾಕ್ಷ ಅವರ ಮೇಲೆ ಬೀಳಲಿಲ್ಲ. ಪ್ರಾಯಶಃ ಅದೇ ಕೆಚ್ಚು ಅವರ ಎದೆಯಲ್ಲಿ ಹೊತ್ತಿರಬಹುದು. ಆದರೆ, ಪುದುಚೆರಿ ತಂಡದ ಬೌಲಿಂಗ್ ಬಹಳ ದುರ್ಬಲವಾಗಿದೆ ಅಂತ ಆಯ್ಕೆ ಮಂಡಳಿ ಸದಸ್ಯರಿಗೆ ಗೊತ್ತಿದೆ.

ಈಗ ಜಾರಿಯಲ್ಲಿರುವ ವಿಜಯ ಹಜಾರೆ ಟ್ರೋಫಿಯ ಗ್ರೂಪ್​ ಹಂತದ ಪಂದ್ಯಗಳು ಮಾರ್ಚ್​ 1ರಂದು ಕೊನೆಗೊಳ್ಳಲಿವೆ. ಮುಂಬೈ ಇನ್ನಿಂಗ್ಸ್​ನಲ್ಲಿ ಪುದುಚೆರಿಯ ನಾಯಕ್ ದಾಮೋದರನ್ ರೋಹಿತ್ 8 ಬೌಲರ್​ಗಳನ್ನು ಪ್ರಯೋಗಿಸಿದ್ದು ವಿಶೇಷ. ವೇಗದ ಬೌಲರ್​ಗಳಾದ ಸಂತ ಮೂರ್ತಿ ಮತ್ತು ಸಾಗರ್ ತ್ರಿವೇದಿ ತಲಾ 9 ಒವರ್​ಗಳನ್ನು ಬೌಲ್ ಮಾಡಿ ಕ್ರಮವಾಗಿ 92 ಮತ್ತು 99 ರನ್​ಗಳನ್ನು ನೀಡಿದರು.

ಇತ್ತೀಚಿನ ವರದಿಗಳು ಬಂದಾಗ ಪುದುಚೆರಿ 28 ಒವರ್​ಗಳಲ್ಲಿ 6ವಿಕೆಟ್​ಗೆ 161 ರನ್​ ಗಳಿಸಿತ್ತು. ಮುಬೈ ಪರ ಪ್ರಶಾಂತ್ ಸೋಳಂಕಿ 3 ವಿಕೆಟ್​ ಪಡೆದರೆ, ಪುದುಚೆರಿಯ ನಾಯಕ 68 ಎಸೆತಗಳಲ್ಲಿ 63 ರನ್​ ಗಳಿಸಿ ಔಟಾದರು.

ಇದನ್ನೂ ಓದಿ: Vijay Hazare Trophy 2021: ದೇಸಿ ಕ್ರಿಕೆಟ್​ ವಿಜಯ್​ ಹಜಾರೆ ಟ್ರೋಫಿ 2021 ಆರಂಭ.. ಪಂದ್ಯಾವಳಿಯ ವಿವರ ಇಲ್ಲಿದೆ

Published On - 5:31 pm, Thu, 25 February 21

ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ