AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಮೊದಲ ಇನ್ನಿಂಗ್ಸ್‌ನಲ್ಲಿ.. ಟೀಂ ಇಂಡಿಯಾ ಇಂದೇ ಮುನ್ನಡೆ ಸಾಧಿಸಲಿದೆಯಾ!?

India vs England: ಮೊದಲನೇ ದಿನದ ಕೊನೆಯ ಸೆಷನ್​ ಆಡುತ್ತಿರುವ ಭಾರತ, ಇಂಗ್ಲೆಂಡ್​ ನೀಡಿರುವ ಅಲ್ಪ ಮೊತ್ತವನ್ನು ಇಂದೇ ಬೆನ್ನತ್ತಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗೇನಾದರೂ ಆದಲ್ಲಿ ಇನ್ನೂ ಉಳಿದಿರುವ 4 ದಿನಗಳ ಆಟದಲ್ಲಿ ಟೀಂ ಇಂಡಿಯಾ ಸಂಪೂರ್ಣವಾಗಿ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸಲಿದೆ.

India vs England: ಮೊದಲ ಇನ್ನಿಂಗ್ಸ್‌ನಲ್ಲಿ..  ಟೀಂ ಇಂಡಿಯಾ ಇಂದೇ ಮುನ್ನಡೆ ಸಾಧಿಸಲಿದೆಯಾ!?
ಶುಭಮನ್ ಗಿಲ್​, ರೋಹಿತ್​ ಶರ್ಮಾ
ಪೃಥ್ವಿಶಂಕರ
|

Updated on:Feb 24, 2021 | 8:25 PM

Share

ಅಹಮದಾಬಾದ್​: ಪಿಂಕ್ ಬಾಲ್ ಟೆಸ್ಟ್​ನಲ್ಲಿ, ಮೊದಲ ದಿನದ ಕೊನೆಯ ಸೆಷನ್ ಪ್ರಾರಂಭವಾಗಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭಾರತದ ಪರ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು 112 ರನ್‌ಗಳಿಗೆ ಆಲ್​ಔಟ್​ ಮಾಡಲಾಗಿದೆ. ಕ್ರೌಲಿ ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್ ಗಳಿಸಿದರು. ಟೀಂ ಇಂಡಿಯಾ ಪರ ಸ್ಥಳೀಯ ಆಟಗಾರ ಅಕ್ಷರ್ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಅಶ್ವಿನ್​ 3 ಹಾಗೂ ಇಶಾಂತ್ 1 ವಿಕೆಟ್​ ಪಡೆದು ಮಿಂಚಿದರು. ಹಗಲು ರಾತ್ರಿ ನಡೆಯುವ ಈ ಟೆಸ್ಟ್​ ಎರಡೂ ತಂಡಗಳಿಗೆ ಮುಖ್ಯವಾಗಿದೆ. ಅಲ್ಲದೆ ವಿಶ್ವ ಟೆಸ್ಟ್ ಸರಣಿಯ ಫೈನಲ್‌ನಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದಲೂ ಈ ಪಂದ್ಯ ಬಹಳ ವಿಶೇಷವಾಗಿದೆ. ಇದು ಭಾರತಕ್ಕೆ ಮೂರನೇ ಪಿಂಕ್ ಬಾಲ್ ಟೆಸ್ಟ್ ಮತ್ತು ಇಂಗ್ಲೆಂಡ್‌ಗೆ ನಾಲ್ಕನೇ ಪಂದ್ಯವಾಗಿದೆ.

ಇಂದೇ ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್​ ಪಡೆಯುತ್ತಾ ಭಾರತ? ಮೊದಲನೇ ದಿನದ ಕೊನೆಯ ಸೆಷನ್​ ಆಡುತ್ತಿರುವ ಭಾರತ, ಇಂಗ್ಲೆಂಡ್​ ನೀಡಿರುವ ಅಲ್ಪ ಮೊತ್ತವನ್ನು ಇಂದೇ ಬೆನ್ನತ್ತಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಕೊನೆಯ ಸೆಷನ್​ನಲ್ಲಿ ಇನ್ನೂ 2 ಗಂಟೆಗಳ ಆಟ ಬಾಕಿ ಇದ್ದು, ಇನ್ನೂ 20 ಓವರ್​ಗಳ ಆಟವನ್ನು ಭಾರತ ಆಡಲಿದೆ. ಹಾಗೇನಾದರೂ ಆದಲ್ಲಿ ಉಳಿದಿರುವ 4 ದಿನಗಳ ಆಟದಲ್ಲಿ ಟೀಂ ಇಂಡಿಯಾ ಸಂಪೂರ್ಣವಾಗಿ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸಲಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 400 ರನ್​ಗಳ ಟಾರ್ಗೆಟ್​ ನೀಡಿದಲ್ಲಿ, ಇಂಗ್ಲೆಂಡ್​ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದಾಗಿದೆ.

ಮಿಂಚಿದ ಲೋಕಲ್​ ಬಾಯ್​ ಅಕ್ಷರ್​.. ಆಡುತ್ತಿರುವ 2ನೇ ಪಂದ್ಯದಲ್ಲೇ ಮಿಂಚು ಹರಿಸಿರುವ ಸ್ಥಳೀಯ ಆಟಗಾರ ಅಕ್ಷರ್​ ಪಟೇಲ್​, ಇಂಗ್ಲೆಂಡ್ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭದಿಂದಲೂ ಇಂಗ್ಲೆಂಡ್ ಆಟಗಾರರ ಮೇಲೆ ಹಿಡಿತ ಸಾಧಿಸಿದ ಅಕ್ಷರ್​ ಪಟೇಲ್​ ಪ್ರಮುಖ 6 ವಿಕೆಟ್​ ಪಡೆದು ಮಿಂಚಿದರು. ಅಲ್ಲದೆ ತಾನು ಬೌಲಿಂಗ್​ ಆರಂಭಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಪಡೆದಿದ್ದು ಇನ್ನೂ ವಿಶೇಷವಾಗಿತ್ತು. ಇಂಗ್ಲೆಂಡ್ ತಂಡದ ಪ್ರಮುಖ 6 ಆಟಗಾರರನ್ನು ಬಹುಬೇಗನೇ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದ ಅಕ್ಷರ್​ 2ನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದರು.

Published On - 8:21 pm, Wed, 24 February 21

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ