WTC 2021: ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಇಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಜೀವ ತುಂಬುವುದೇ?

|

Updated on: Jun 18, 2021 | 11:38 AM

ICC World Test Championship Final 2021: ಅಂದರೆ ಈಗಲೂ ಅಷ್ಟೇ.. ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಗೆದ್ದರೆ ಅದು ಟೆಸ್ಟ್​ ಕ್ರಿಕೆಟ್​​ ಜಗತ್ತಿನ ಮೇಲೆ ಅಪಾರ ಪ್ರಭಾವ ಬೀರಲಿದೆ. ಅಂದರೆ ನ್ಯೂಜಿಲ್ಯಾಂಡ್​ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ. ಏಕೆಂದರೆ ಪುಟ್ಟ ರಾಷ್ಟ್ರ ನ್ಯೂಜಿಲ್ಯಾಂಡ್ ಬೀಗುವುದಕ್ಕಿಂತ ಭಾರತ ಗೆದ್ದರೆ ಅದರ ತೂಕವೇ ಬೇರೆ ಆಗಿರುತ್ತದೆ.

WTC 2021: ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಇಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಜೀವ ತುಂಬುವುದೇ?
ನ್ಯೂಜಿಲ್ಯಾಂಡ್​ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ
Follow us on

ಸೌಥಾಂಪ್ಟನ್​​ ಕ್ರಿಕೆಟ್​ ಮೈದಾನ (Ageas Bowl, Southampton) ಇಂದು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ICC)​ ಮಹತ್ತರ ಉದ್ದೇಶದಿಂದ ಆಯೋಜಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಇದಾಗಿದೆ. ಇದರ ಸದುದ್ದೇಶ ಇಷ್ಟೇ… ಸೀಮಿತ ಓವರುಗಳ ಆರ್ಭಟದಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಮರುಜೀವ ತುಂಬುವ ಪ್ರಯತ್ನ ಇದಾಗಿದೆ. ಇದರಿಂದ ಟೆಸ್ಟ್ ಕ್ರಿಕೆಟ್​ ಜಗತ್ತಿಗೆ ಏನಾದೀತು!?

1983 World Cup ಮ್ಯಾಜಿಕ್​​ಗೆ ಘಟಿಸುವುದೇ?
ಅದಕ್ಕೂ ಮುನ್ನ ಸರಿಯಾಗಿ ಇದೇ ತಿಂಗಳಲ್ಲಿ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ಭಾರತ ಗೆದ್ದು ಬೀಗಿದಾಗ ಕ್ರಿಕೆಟ್​ ಜಗತ್ತಿನ ಮೇಲೆ ಅದರ ಪರಿಣಾಮ/ಪ್ರಭಾವಗಳು ಅಗಾಧವಾಗಿದ್ದವು. ಭಾರತಕ್ಕಂತೂ ಕ್ರಿಕೆಟ್​ ಧರ್ಮವಾಗಿ ಪರಿವರ್ತನೆಗೊಂಡಿತು. ಚಿಕ್ಕಪುಟ್ಟ ಮಕ್ಕಳೂ ಬ್ಯಾಟು-ಬಾಲು ಹಿಡಿದು ಆಡತೊಡಗಿದರು. ಅಂದರೆ ಅಷ್ಟರಮಟ್ಟಿಗೆ ಕಪಿಲ್​ ಪಡೆಯ ಗೆಲುವು ಪ್ರಭಾವ ಬೀರಿತ್ತು. ಇನ್ನು ಕ್ರಿಕೆಟ್​ ಆಟವನ್ನು ಪರಿಗಣಿಸಿದಾಗ ಮೈದಾನದ ಆಚೆಗೆ ಅದರ ರೂಪುರೇಷೆಗಳೇ ಬದಲಾದವು. ವಾಣಿಜ್ಯ ರಂಗದಲ್ಲಂತೂ ಅಪರಿಮಿತ ಸಾಧ್ಯತೆಗಳನ್ನು ತೆರೆದಿಟ್ಟಿತು. ಅಂದರೆ ಒಟ್ಟಾರೆಯಾಗಿ ಕ್ರಿಕೆಟ್​​ ಜಗತ್ತಿಗೆ ಜೀವ ಚೈತನ್ಯ ತುಂಬಿತು.

ಧೋನಿ ಪಡೆ ಚೊಚ್ಚಲ T20 ವಿಶ್ವ ಕಪ್ ಗೆದ್ದಾಗಲೂ ಕ್ರಿಕೆಟ್​ ಸ್ವರೂಪವೇ ಬದಲಾಯಿತು
ಎಕ್ಸಾಕ್ಟ್​ಲಿ ಈಗಲೂ ಅದೇ ಅವಕಾಶ ಒದಗಿಬಂದಿದೆ. 1983 World Cup ಗೆಲುವು ಟೆಸ್ಟ್​ ಕ್ರಿಕೆಟ್​​ ಅನ್ನು ಮರೆಮಾಚಿ, ಸೀಮಿತ ಓವರುಗಳ ಆರ್ಭಟಕ್ಕೆ ನಾಂದಿ ಹಾಡಿತು ಅನ್ನಬಹುದು. ಆದರೆ ಈಗ ಅದರ ರಿವರ್ಸ್​ ಆ್ಯಕ್ಷನ್​ ಆಗಬೇಕಿದೆ. ಇದೇನು ಈಗ ಸೀಮಿತ ಓವರುಗಳ ಆರ್ಭಟ ನಡೆದಿದೆ, ಅದರ ಜೊತೆಜೊತೆಗೆ ಸಾಂಪ್ರದಾಯಿಕ ಟೆಸ್ಟ್ ​ಕ್ರಿಕೆಟ್​ ಮತ್ತೆ ಜೀವಂತಿಕೆ ಪಡೆಯಬೇಕಿದೆ. ಮತ್ತು 1983ರಲ್ಲಿ ನಡೆದ ಪವಾಡದಂತೆ ಅದು ಈ ಬಾರಿಯೂ ಭಾರತದಿಂದಲೇ ಆಗಬೇಕಿದೆ. 2007ರಲ್ಲಿ ಧೋನಿ ಪಡೆ T20 ವಿಶ್ವ ಕಪ್ ಗೆದ್ದಾಗಲಂತೂ ಕ್ರಿಕೆಟ್​ ಸ್ವರೂಪವೇ ಬದಲಾಗಿಬಿಟ್ಟಿತು. ಐಪಿಎಲ್ ನಂತಹ ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದವು.​​

ನ್ಯೂಜಿಲ್ಯಾಂಡ್​ ಗೆಲುವಿಗಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ
ಅಂದರೆ ಈಗಲೂ ಅಷ್ಟೇ.. ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಗೆದ್ದರೆ ಅದು ಟೆಸ್ಟ್​ ಕ್ರಿಕೆಟ್​​ ಜಗತ್ತಿನ ಮೇಲೆ ಅಪಾರ ಪ್ರಭಾವ ಬೀರಲಿದೆ. ಅಂದರೆ ನ್ಯೂಜಿಲ್ಯಾಂಡ್​ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ. ಏಕೆಂದರೆ ಪುಟ್ಟ ರಾಷ್ಟ್ರ ನ್ಯೂಜಿಲ್ಯಾಂಡ್ ಬೀಗುವುದಕ್ಕಿಂತ ಭಾರತ ಗೆದ್ದರೆ ಅದರ ತೂಕವೇ ಬೇರೆ ಆಗಿರುತ್ತದೆ. ಇದು ಸ್ವತಃ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ICC)​ ಗೂ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿಯೇ ಮೊಟ್ಟಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂತಹ ಪಂದ್ಯಾವಳಿಯನ್ನು ಆಯೋಜಿಸಿದೆ. ಟೆಸ್ಟ್ ಕ್ರಿಕೆಟ್​ ಪುನ:ಶ್ಚೇತನಕ್ಕಾಗಿಯೇ ಇಂತಹ ಚೊಚ್ಚಲ ಚಾಂಪಿಯನ್​ಶಿಪ್​ ಆಯೋಜಿಸಿದೆ ಅಂದರೆ ತಪ್ಪಾಗಲಾರದು. ​

ಸೀಮಿತ ಓವರುಗಳ ಆರ್ಭಟದಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್
ಬಾರಿ ಕೊಹ್ಲಿ ಪಡೆ ಗೆದ್ದರೆ ಅನೇಕ ಯುವ ಪೀಳಿಗೆಗಳು ಮತ್ತೆ ದೀರ್ಘಾವಧಿ ಕಾಲ ಆಟದ ಮೈದಾನದಲ್ಲಿ ಬ್ಯಾಟ್​-ಬಾಲ್​ ಹಿಡಿದು ಆಡತೊಡಗುತ್ತಾರೆ. ಇಲ್ಲಾಂದ್ರೆ ಭ್ರಮನಿರಸನಗೊಂಡು ಇಂದಿನ ಫಾಸ್ಟ್​​ ಯುಗಕ್ಕೆ ತಕ್ಕಂತೆ ಅದೇ ಸೀಮಿತ ಓವರುಗಳ ಪಂದ್ಯಗಳಿಗೆ ಜೋತುಬೀಳುತ್ತಾರೆ. ಹಾಗಾಗದಿರಲಿ… ನಮ್ಮ ನೆಚ್ಚಿನ ಭಾರತ ತಂಡ ಗೆದ್ದು ಬೀಗಲಿ ಎಂಬುದೇ ನೂರಾರು ಕೋಟಿ ಭಾರತೀಯರ ಹೃದಯಾಳದ ಬಯಕೆ.

(ICC WTC Final 2021: what does it mean to test cricket if team india win inaugural WTC)

Published On - 11:30 am, Fri, 18 June 21