ಕ್ರಿಕೆಟ್‌ನಲ್ಲಿ ಪ್ರತಿದಿನ ಹೊಸ ಸಾಧ್ಯತೆಗಳ ಅನಾವರಣಕ್ಕೆ ಅವಕಾಶ ನಿಚ್ಚಳ. ಟೀಮ್ ಇಂಡಿಯಾ ಪಾಲಿಗೆ ಇಂಥದ್ದೊಂದು ಸಾಧ್ಯತೆಯನ್ನು ಬಾಕ್ಸಿಂಗ್ ಡೇ ಟೆಸ್ಟ್ ತೆರೆದಿಡುವ ಆಸೆ ಮೂಡಿದೆ. ಮೆಲ್ಬೋರ್ನ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಗೆಲ್ಲುವ ಮುಖಾಂತರ ಟೀಮ್ ಇಂಡಿಯಾ ಅಡಿಲೇಡ್‌ನ ಸೋಲನ್ನು ಮರೆಯುವ ಪ್ರಯತ್ನ ನಡೆಸುತ್ತಿದೆ. ವಿರಾಟ್ ಕೊಹ್ಲಿ ಮತ್ತು ಮೊಹಮದ್ ಶಮಿಯಂತಹ ಇಬ್ಬರು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಈ ಗೆಲುವಿನ ಹಾದಿ ಸುಲಭದ್ದಾಗಿಲ್ಲ.
ಭಾರತ-ಆಸ್ಟ್ರೇಲಿಯಾ ಮೆಲ್ಬೋರ್ನ್ ಮೈದಾನದಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಎರಡು ತಂಡಗಳ ನಡುವಿನ 100ನೇ ಹಣಾಹಣಿಯಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ನ ಅಂಕಿಅಂಶಗಳು..
ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯಲ್ಲಿ ವಿಜಯದ ಹಾದಿಗೆ ಮರಳು ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಈ ಐತಿಹಾಸಿಕ ಪರೀಕ್ಷೆಯಲ್ಲಿ ಪಾಸಾಗಲು ಟೀಮ್ ಇಂಡಿಯಾ ತನ್ನ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿನ ವಿಜಯವನ್ನು ನೆನಪಿಸಿಕೊಳ್ಳಬೇಕು. ಭಾರತ ಮತ್ತು ಆಸ್ಟ್ರೇಲಿಯಾದ ಎರಡೂ ತಂಡಗಳು ಇಲ್ಲಿಯವರೆಗೆ ಬಾಕ್ಸಿಂಗ್ ಡೇ ಟೆಸ್ಟ್ ಸಂದರ್ಭದಲ್ಲಿ 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 2 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದರೆ ಆಸ್ಟ್ರೇಲಿಯಾ 5 ಬಾರಿ ಗೆದ್ದು ಬೀಗಿದೆ. ಟೀಮ್ ಇಂಡಿಯಾದ 2018 ರ ಪ್ರವಾಸದಲ್ಲಿ ಗೆಲ್ಲುವ ಮೂಲಕ ಏಕೈಕ ಗೆಲುವು ಸಾಧಿಸಿದೆ.
ವಿರಾಟ್, ಶಮಿ ಇಲ್ಲದೆ ಪಂದ್ಯ ಗೆಲ್ಲಲು ಸಾಧ್ಯವೇ?
ಕ್ರಿಕೆಟ್‌ನಲ್ಲಿ ಅಂಕಿಅಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಪ್ರತಿ ಬಾರಿ ಪರಿಸ್ಥಿತಿ ಮತ್ತು ಮನಸ್ಥಿತಿಗೆ ಅನುಗುಣವಾಗಿ ಸಮೀಕರಣಗಳು ಬದಲಾಗುತ್ತವೆ. ಈ ಬಾರಿ ಟೀಮ್ ಇಂಡಿಯಾದ ನ್ಯೂನತೆಯೆಂದರೆ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಇಲ್ಲದಿರುವುದು. ಹಿಂದಿನ ಪ್ರವಾಸದಲ್ಲಿ ಪೂಜಾರ ನಂತರ ವಿರಾಟ್ ಎರಡನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಈ ಬಾರಿ ವಿರಾಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಮತ್ತೊಂದೆಡೆ ಶಮಿ ನಿರ್ಗಮನದ ನಂತರ ತಂಡದ ವೇಗದ ಬೌಲಿಂಗ್ ಅನುಭವವೂ ಕಡಿಮೆಯಾಗಿದೆ. ಹೀಗಾಗಿ ರಹಾನೆ ಅಂಡ್ ಕಂಪನಿ ಹೇಗೆ ಈ ಸರಣಿಯಲ್ಲಿ ಗೆಲುವಿನ ಲಯಕ್ಕೆ ಮರಳುತ್ತದೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಆಸ್ಟ್ರೇಲಿಯಾ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ, ಆದರೆ ಭಾರತ?
ಆತಿಥೇಯ ಆಸ್ಟ್ರೇಲಿಯಾ ತಂಡವು ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಭಾರತ ವಿರುದ್ಧದ 100ನೇ ಪಂದ್ಯವನ್ನು ಗೆಲ್ಲಲು ಸಿದ್ಧವಾಗಿದೆ. ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಪಂದ್ಯಕ್ಕೂ ಮೊದಲೇ ಆಡುವ ಹನ್ನೊಂದರ ಬಳಗವನ್ನು ಖಚಿತಪಡಿಸಿದ್ದಾರೆ. ಆದರೆ ಟೀಂ ಇಂಡಿಯಾ ಯಾವೆಲ್ಲಾ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲ್ಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Explainer | ಆಸ್ಟ್ರೇಲಿಯಾದಲ್ಲಿ ಡಿ.26ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಪಂದ್ಯ: Boxing Day ಎಂದರೇನು?