ಭಾರತ ಬಾಂಗ್ಲಾ ಮೊದಲ ಟೆಸ್ಟ್, ದಿನದಾಟ ಅಂತ್ಯಕ್ಕೆ ಭಾರತ 86/1

|

Updated on: Nov 14, 2019 | 6:50 PM

ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಇಂಧೋರ್​ನಲ್ಲಿ ಶುರುವಾಗಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು, ಪ್ರಥಮ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಒಂದು ವಿಕೆಟ್​ ಕಳೆದುಕೊಂಡು 86 ರನ್ ಗಳಿಸಿದೆ. ಭಾರತದ ಪರ ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾಗಿದ್ದಾರೆ. ಮಯಾಂಕ್ ಅಜೇಯ 37 ಮತ್ತು ಪೂಜಾರ ಅಜೇಯ 43 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು.. ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ 150 ರನ್​ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ […]

ಭಾರತ ಬಾಂಗ್ಲಾ ಮೊದಲ ಟೆಸ್ಟ್, ದಿನದಾಟ ಅಂತ್ಯಕ್ಕೆ ಭಾರತ 86/1
Follow us on

ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಇಂಧೋರ್​ನಲ್ಲಿ ಶುರುವಾಗಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು, ಪ್ರಥಮ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಒಂದು ವಿಕೆಟ್​ ಕಳೆದುಕೊಂಡು 86 ರನ್ ಗಳಿಸಿದೆ. ಭಾರತದ ಪರ ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾಗಿದ್ದಾರೆ. ಮಯಾಂಕ್ ಅಜೇಯ 37 ಮತ್ತು ಪೂಜಾರ ಅಜೇಯ 43 ರನ್ ಗಳಿಸಿದ್ದಾರೆ.

ಇದಕ್ಕೂ ಮೊದಲು.. ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ 150 ರನ್​ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದಿದ್ದಾರೆ. ಇಶಾಂತ್, ಉಮೇಶ್ ಯಾದವ್, ಅಶ್ವಿನ್​ಗೆ ತಲಾ 2 ವಿಕೆಟ್ ಪಡೆದಿದ್ದು, ಮುಶ್ಫಿಕರ್ ರಹೀಮ್ ಬಾಂಗ್ಲಾ ಪರ 43 ರನ್​ಗಳಿಸಿದ್ದಾರೆ. ಬಾಂಗ್ಲಾದೇಶ ತಂಡದ ನಾಯಕ ಮೊಮಿನುಲ್ 37 ರನ್ ಗಳಿಸಿದ್ದಾರೆ.

Published On - 5:49 pm, Thu, 14 November 19