ಇಂದೋರ್: ಭಾರತ, ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿದೆ. ಎರಡನೇ ದಿನವಾದ ಇಂದು ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 493 ರನ್ ಗಳಿಸಿದೆ.
ಭಾರತ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ 243 ರನ್, ರೋಹಿತ್ 6 ರನ್, ಚೇತೇಶ್ವರ್ ಪೂಜಾರ 54 ರನ್, ಅಜಿಂಕ್ಯಾ ರಹಾನೆ 86 ರನ್, ವಿರಾಟ್ ಕೊಹ್ಲಿ 0, ವೃದ್ಧಿಮಾನ್ ಸಾಹ 12 ರನ್, ಜಡೇಜಾ ಔಟಾಗದೆ 60 ರನ್, ಉಮೇಶ್ ಔಟಾಗದೆ 25 ರನ್ಗಳಿಸಿದ್ದಾರೆ.
ಪ್ರಥಮ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ 150 ರನ್ಗಳಿಗೆ ಆಲೌಟ್ ಆಗಿದೆ. ಬಾಂಗ್ಲಾದೇಶದ ಪರ ಅಬು ಜಾಯಿದ್ 4 ವಿಕೆಟ್ ಪಡೆದಿದ್ದಾರೆ. ಒಟ್ಟು 343 ರನ್ಗಳ ಮುನ್ನಡೆಯಲ್ಲಿ ಟೀಂ ಇಂಡಿಯಾ ಮುನ್ನುಗ್ಗಿದೆ.
Published On - 5:46 pm, Fri, 15 November 19