ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ಪ್ರತಿಷ್ಠಿತ ಮತ್ತು ಅತ್ಯಂತ ಜನಪ್ರಿಯ | India-Oz cricket series is more popular than The Ashes

|

Updated on: Nov 12, 2020 | 5:48 PM

ವಿರಾಟ್​ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯಾಗೆ ಹೊರಟಾಗಿದೆ. ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿ ಮಂಗಳವಾರದಂದು ಕೊನೆಗೊಂಡ ಮರುದಿನ ಅಂದರೆ ಬುಧವಾರದಂದು ದುಬೈನಿಂದ ಹೊರಟಿರುವ ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾದಲ್ಲಿ ಲ್ಯಾಂಡ್ ಅಗಲಿದೆ. ಈ ಸುದೀರ್ಘ ಪ್ರವಾಸದಲ್ಲಿ ಭಾರತ ಮೂರು ಒಂದು ದಿನದ, ಮೂರು ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ. ಒಡಿಐಗಳು ನವೆಂಬರ್ 27ರಿಂದ ಡಿಸೆಂಬರ್ 2ರವರೆ, ಟಿ20ಐ ಪಂದ್ಯಗಳು ಡಿಸೆಂಬರ್ 4ರಿಂದ 8ರವರೆಗೆ ಮತ್ತ್ತು ಟೆಸ್ಟ್​ಗಳು ಡಿಸೆಂಬರ್ 17ರಿಂದ ಶುರುವಾಗಲಿವೆ. ಅಂದಹಾಗೆ, […]

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ಪ್ರತಿಷ್ಠಿತ ಮತ್ತು ಅತ್ಯಂತ ಜನಪ್ರಿಯ | India-Oz cricket series is more popular than The Ashes
Follow us on

ವಿರಾಟ್​ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯಾಗೆ ಹೊರಟಾಗಿದೆ. ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿ ಮಂಗಳವಾರದಂದು ಕೊನೆಗೊಂಡ ಮರುದಿನ ಅಂದರೆ ಬುಧವಾರದಂದು ದುಬೈನಿಂದ ಹೊರಟಿರುವ ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾದಲ್ಲಿ ಲ್ಯಾಂಡ್ ಅಗಲಿದೆ. ಈ ಸುದೀರ್ಘ ಪ್ರವಾಸದಲ್ಲಿ ಭಾರತ ಮೂರು ಒಂದು ದಿನದ, ಮೂರು ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ. ಒಡಿಐಗಳು ನವೆಂಬರ್ 27ರಿಂದ ಡಿಸೆಂಬರ್ 2ರವರೆ, ಟಿ20ಐ ಪಂದ್ಯಗಳು ಡಿಸೆಂಬರ್ 4ರಿಂದ 8ರವರೆಗೆ ಮತ್ತ್ತು ಟೆಸ್ಟ್​ಗಳು ಡಿಸೆಂಬರ್ 17ರಿಂದ ಶುರುವಾಗಲಿವೆ.

ಅಂದಹಾಗೆ, ಟೀಮ್ ಇಂಡಿಯಾದ ಸದಸ್ಯರು ಸಿಡ್ನಿಯಲ್ಲಿ ಇಳಿದಾಕ್ಷಣ ಅಭ್ಯಾಸಕ್ಕಾಗಿ ಮೈದಾನಗಳಿಗೆ ತೆರಳುವಂತಿಲ್ಲ. ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿನ ಬಯೊ ಬಬಲ್​ನಿಂದ ಹೊರಬಂದಿರುವ ಕೊಹ್ಲಿಯ ಟೀಮು ಸಿಡ್ನಿಯಲ್ಲ್ಲೂ ಬಯೊ ಬಬಲ್ ಪ್ರವೇಶಿಸಲಿದ್ದು ಸದಸ್ಯರು 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗುವುದು ಕಡ್ಡಾಯವಾಗಿದೆ. ಆದರೆ ಸಮಾಧಾನಕರ ಸಂಗತಿಯೆಂದರೆ ಕ್ರಿಕೆಟ್ ಆಸ್ಟ್ರೇಲಿಯ ಮತ್ತು ಸಿಡ್ನಿಯ ಸ್ಥಳೀಯ ಆಡಳಿತ ಭಾರತೀಯ ಆಟಗಾರರಿಗೆ ಒಳಾಂಗಣಗಲ್ಲಿ ಅಭ್ಯಾಸ ಮಾಡುವ ಅವಕಾಶ ಕಲ್ಪಿಸಿದೆ. ಟೀಮಿನ ಸದಸ್ಯರು ಪರಸ್ಪರ ಭೇಟಿಯಾಗಲು, ಕೂತು ಚರ್ಚಿಸಲು ಅನುಮತಿ ಸಹ ಸಿಕ್ಕಿದೆ.

ಕ್ರಿಕೆಟಿಂಗ್ ರೈವಲ್ರೀ ವಿಷಯಕ್ಕೆ ಬಂದರೆ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಮತ್ತ್ತು ಆಸ್ಟ್ರೇಲಿಯಗಳ ನಡುವೆ ನಡೆಯುವ ದಿ ಌಶಸ್ ಅತ್ಯಂತ ಪುರಾತನವಾದದ್ದು ಮತ್ತು ಅಷ್ಟೇ ಪ್ರತಿಷ್ಠೆಯುಳ್ಳದ್ದು. ಆದರೆ, ಕ್ರಿಕೆಟ್ ಪಂಡಿತರ ಪ್ರಕಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆಯುವ ಸರಣಿಗಳು ಌಶಸ್​ಗಿಂತ ಹೆಚ್ಚು ಜನಪ್ರಿಯವಾಗಿವೆ. ಅವರ ವಾದದಲ್ಲಿ ಸತ್ಯಾಂಶವಿದೆ. ಯಾಕೆಂದರೆ ಉಪಖಂಡದ ರಾಷ್ಟ್ರಗಳ ನಡುವೆ ಕ್ರಿಕೆಟಿಂಗ್ ಹಿರಿಮೆಗಾಗಿ ನಡೆಯುವ ಸೆಣಸಾಟಗಳನ್ನು ಕೊಟ್ಯಾಂತರ ಜನ ಮೈದಾನಗಳಲ್ಲಿ ಮತ್ತು ಟಿವಿ ಮುಂದೆ ಕೂತು ವೀಕ್ಷಿಸುತ್ತಾರೆ. ಇಂಗ್ಲೆಂಡಿನ ಮಾಜಿ ಓಪನಿಂಗ್ ಬ್ಯಾಟ್ಸ್​ಮನ್ ಮತ್ತು ಕಾಮೆಂಟೇಟರ್ ಜೆಫ್ರಿ ಬಾಯ್ಕಾಟ್ ಹೇಳಿರುವಂತೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯಗಳನ್ನು ಬೇರೆ ಗ್ರಹಗಳಲ್ಲೂ ವೀಕ್ಷಿಸಲಾಗುತ್ತದೆ!

ಮತ್ತೊಂದು ಗುಂಪು, ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯಗಳು ಌಶಸ್ ಮತ್ತು ನೆರೆರಾಷ್ಟ್ರಗಳ ಮಧ್ಯೆ ನಡೆಯುವ ಪಂದ್ಯಗಳಷ್ಟೇ ಅಥವಾ ಅವುಗಳಿಗಿಂತ ಹೆಚ್ಚು ಪಾಪ್ಯುಲರ್ ಆಗಿವೆ. ಈ ರಾಷ್ಟ್ರಗಳು ಟೆಸ್ಟ್​ಗಳಲ್ಲಿ ಬಾರ್ಡರ್ಗವಾಸ್ಕರ್ ಟ್ರೋಫಿಗಾಗಿ ಸೆಣಸುವುದು ಕ್ರಿಕೆಟ್ ಪ್ರೇಮಿಗಳಿಗೆಲ್ಲ ಗೊತ್ತಿರುವ ವಿಷಯ. ಇವರೆಡರದ ಮಧ್ಯೆ ಇದುವರೆಗೆ ನಡೆದ ಸರಣಿಗಳನ್ನು ಗಮನಿಸಿದ್ದೇಯಾದರೆ, ಕೇವಲ ಇತ್ತೀಚಿನ ವರ್ಷಗಳಲ್ಲಿ ಅವು ಹೆಚ್ಚು ರೋಚಕವಾಗಿರುವುದು ಗೊತ್ತಾಗುತ್ತದೆ. ಈ ಅಂಶವನ್ನು ಸಾಬೀತುಗೊಳಿಸಲು, ಒಂದು ಅಂಕಿಆಂಶ ಸಾಕು. ಈ ರಾಷ್ಟ್ರಗಳ ನಡುವಿನ 71 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ, ಕಾಂಗರೂಗಳ ನಾಡಿನಲ್ಲಿ ಭಾರತ ಕೇವಲ ಒಮ್ಮೆ ಮಾತ್ರ ಸರಣಿ ಜಯ ಸಾಧಿಸಿದೆ, ಅದೂ ಕಳೆದ ಬಾರಿಯ ಪ್ರವಾಸದಲ್ಲಿ ಅಂದರೆ 2018-19 ಸರಣಿಯಲ್ಲಿ!

ಸ್ವದೇಶದಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿರುವ ಸರಣಿಗಳಲ್ಲಿ ಭಾರತ ಕೆಲವನ್ನು ಗೆದ್ದಿರುವದು ನಿಜ; ಆದರೆ, ಆ ದೇಶದಲ್ಲಿ ಕೇವಲ ಒಮ್ಮೆ ಮಾತ್ರ ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ ಗೆದ್ದಿದೆ. ಭಾರತೀಯರಿಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗೋದು ನಿಜ. ಅದರೆ, ವಾಸ್ತವ ಅದೇ, ಅರಗಿಸಿಕೊಳ್ಳದೆ ವಿಧಿಯಿಲ್ಲ.

ಮೊದಲೆಲ್ಲ ಭಾರತೀಯರಿಗೆ ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸುವುದು ಕಷ್ಟವಾಗುತ್ತಿದ್ದುದಕ್ಕೆ ಮುಖ್ಯ ಕಾರಣವೆಂದರೆ ಅಲ್ಲಿನ ಬೌನ್ಸಿ ಪಿಚ್​ಗಳು. ಉಪಖಂಡದ ಸ್ಪಿನ್ನರ್ಸ್ನೇಹಿ ಪಿಚ್​ಗಳಲ್ಲಿ ಆಡಿ ಆಭ್ಯಾಸವಿದ್ದ ಭಾರತೀಯ ಆಟಗಾರರಿಗೆ ಅಲ್ಲಿನ ವಿಕೆಟ್​ಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಕೇವಲ 2-3 ಮೂವರು ಬ್ಯಾಟ್ಸ್​ಮನ್​ಗಳು ಮಾತ್ರ ಬೌನ್ಸಿ ವಿಕೆಟ್​ಗಳ ಮೇಲೆ ಆಸ್ಸೀಗಳ ಭಯಾನಕ ಪೇಸ್ ಬ್ಯಾಟರಿಯನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸುತ್ತಿದ್ದರು. ಅವರೇನಾದರೂ ಬೇಗ ಔಟಾದರೆ, ಭಾರತ 150ರ ಮೊತ್ತ ದಾಟುವುದು ಸಹ ಕಷ್ಟವಾಗುತಿತ್ತು.

ಒಂದು ಸಂಗತಿ ನಿಮಗೆ ಗೊತ್ತಿರಲಿ, ಭಾರತ 1947-48ರಿಂದ ಆಸ್ಟ್ರೇಲಿಯ ಪ್ರವಾಸಕ್ಕೆ ಹೋಗುತ್ತಿದೆ. ಆದರೆ ಆ ದೇಶದಲ್ಲಿ ಮೊಟ್ಟಮೊದಲ ಟೆಸ್ಟ್ ಗೆದ್ದಿದ್ದು (ಸರಣಿಯಲ್ಲ) 1977-78ರ ಸರಣಿಯಲ್ಲಿ, ಬಿಷನ್ ಸಿಂಗ್ ಬೇಡಿ ನೇತೃತದಲ್ಲಿ. ಅಂದರೆ ಬರೋಬ್ಬರಿ 30 ವರ್ಷಗಳ ನಂತರ. ಗಮನಿಸಬೇಕಾದ ಅಂಶವೇನೆಂದರೆ, ಅದು ಆಸ್ಟ್ರೇಲಿಯಾದ ಅತ್ಯಂತ ದುರ್ಬಲ ತಂಡವಾಗಿತ್ತು. ಪ್ರಮುಖ ಆಟಗಾಗಾರರೆಲ್ಲ ಪ್ಯಾಕರ್ ಸರಣಿಯಲ್ಲಿ ಆಡುತ್ತಿದ್ದರಿಂದ ಕ್ರೀಡೆಯಿಂದ ರಿಟೈರಾಗಿ ಕುಟಂಬದ ಸದಸ್ಯರೊಂದಿಗೆ ಸುಖವಾಗಿ ಸಮಯ ಕಳೆಯುತ್ತಿದ್ದ 42 ವರ್ಷ ವಯಸ್ಸಿನ ಬಾಬಿ ಸಿಂಪ್ಸನ್ ಅವರನ್ನು ವಾಪಸ್ಸು ಕರೆದು ನಾಯಕತ್ವದ ಹೊಣೆ ಹೊರಿಸಲಾಗಿತ್ತು. ಆ ಸರಣಿಯಲ್ಲಿ ಭಾರತದ ವಿರುದ್ಧ ಆಡಿದ್ದು ಅನನುಭವಿ ಆಟಗಾರರನ್ನೊಳಗೊಂಡಿದ್ದ ಆಸ್ಸೀಗಳ ‘ಬಿ’ ಟೀಮ್. 

ಭಾರತ ಅಲ್ಲಿ ಆಡಿರುವ ಸರಣಿಗಳ ಫಲಿತಾಂಶಗಳನ್ನು ಕ್ಲುಪ್ತವಾಗಿ ತಿಳಿದುಕೊಳ್ಳೋಣ. ಮೊದಲ ಪ್ರವಾಸದಲ್ಲಿ (1947-48) ಆಡಿದ್ದು 5 ಟೆಸ್ಟ್​ಗಳ ಸರಣಿ, ಆಸ್ಟ್ರೇಲಿಯಾಗೆ 4-0 ಗೆಲುವು. 1967-68 ರಲ್ಲಿ ನಡೆದ 4 ಟೆಸ್ಟ್ ಪಂದ್ಯಗಳ ಸರಣಿಯನ್ನು ಅತಿಥೇಯರು ಎಲ್ಲವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡಿದರು. 1980-81ರಲ್ಲಿ ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ 3 ಟೆಸ್ಟ್​ಗಳ ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿತ್ತು.

1985-86 ಸಾಲಿನಲ್ಲಿ ನಡೆದ ಮೂರು ಪಂದ್ಯಗಳ ಸರಣಿ 0-0 ಸಮವಾಗಿತ್ತು. 1991-92 ರಲ್ಲಿ 4 ಟೆಸ್ಟ್​ಗಳ ಸರಣಿಯನ್ನು ಆಸ್ಟ್ರೇಲಿಯ ವ್ಹೈಟ್ ವಾಶ್ ಮಾಡಿತು. ಆಮೇಲೆ ಭಾರತ 1999-00 ರಲ್ಲಿ ನಡೆದ 5 ಪಂದ್ಯಗಳ ಸರಣಿಯನ್ನು 0-3 ಅಂತರದಿಂದ ಸೋತಿತು. ಸೌರವ್ ಗಂಗೂಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ಮೇಲೆ ಭಾರತದ ಓವರಸೀಸ್ ಪ್ರದರ್ಶನಗಳು ಉತ್ತಮಗೊಳ್ಳಲಾರಂಭಿಸಿದ್ದು ಸುಳ್ಳಲ್ಲ. 2003-04 ಸರಣಿಯನ್ನು ಅವರು 1-1 ರಿಂದ ಸಮ ಮಾಡಿಕೊಂಡರು.

ಅದರೆ, 2007-08 ರ ಸರಣಿಯನ್ನು ಅನಿಲ್ ಕುಂಬ್ಳೆ ನಾಯಕನಾಗಿದ್ದ ಟೀಮ್ ಇಂಡಿಯಾ 4ಟೆಸ್ಟ್​ಗಳಲ್ಲಿ ಒಂದನ್ನು ಗೆದ್ದಿತಾದರೂ ಸರಣಿಯನ್ನು 1-2 ಅತರದಿಂದ ಸೋತಿತು. 2011-12 ರಲ್ಲಿ ಎಮ್ ಎಸ್ ಧೋನಿಯ ತಂಡ ಎಲ್ಲ 4 ಟೆಸ್ಟ್​ಗಳನ್ನು ಸೋತು ವ್ಹೈಟ್ ವಾಶ್ ಮಾಡಿಸಿಕೊಂಡಿತು. 2014-15 ಸರಣಿಯಲ್ಲಿ ಧೋನಿ ಸರಣಿ ಮಧ್ಯಬಾಗದಲ್ಲಿ ನಾಯಕತ್ವವನ್ನು ವಿರಾಟ್​ ಕೊಹ್ಲಿಗೆ ವರ್ಗಾಯಿಸಿದರಾದರೂ ಟೀಮು 4 ಪಂದ್ಯಗಳ ಸರಣಿಯನ್ನು 0-2 ಅಂತರದಿಂದ ಭಾರತ ಸೋತಿತು.

ಕೊನೆಯಲ್ಲಿ ಬರೋದು ಭಾರತ ಜಯಭೇರಿ ಬಾರಿಸದ ಸರಣಿ. ಕೊಹ್ಲಿಯ ಟೀಮು 2018-19 ರ ಸರಣಿಯನ್ನು ಅಮೋಘವಾಗಿ 2-1 ಅಂತರದಿಂದ ಗೆದ್ದು ದಾಖಲೆ ಸ್ಥಾಪಿಸಿತು. ಏಷ್ಯನ್ ಟೀಮೊಂದು ಆಸ್ಟ್ರೇಲಿಯಾವನ್ನು ಅದರದ್ದೇ ನೆಲದಲ್ಲಿ ಸೋಲಿಸಿದ ದಾಖಲೆಯನ್ನು ಕೊಹ್ಲಿಯ ಟೀಮ್ ಇಂಡಿಯಾ ತನ್ನ ಹೆಸರಿಗೆ ಬರೆದುಕೊಂಡಿತು.

Published On - 5:48 pm, Thu, 12 November 20