ಮೆಲ್ಬೋರ್ನ್: ಅಡಿಲೇಡ್‌ನ ಹೀನಾಯ ಸೋಲಿನ ನಂತರ ರಹಾನೆ ನೇತೃತ್ವದ ಭಾರತೀಯ ತಂಡ ಮೆಲ್ಬೋರ್ನ್‌ನಲ್ಲಿ ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್‌ನತ್ತ ಗಮನ ಹರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಮೊಹಮ್ಮದ್ ಶಮಿ ಸರಣಿಯಿಂದ ಹೊರಗುಳಿದಿದ್ದು, ತಂಡವನ್ನು ಗೆಲುವಿನ ಟ್ರ್ಯಾಕ್ಗೆ ಮರಳಿಸಲು ಟೀಂ ಇಂಡಿಯಾ ನಾಲ್ಕು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ.
ಈಗಾಗಲೇ ಪಿತೃತ್ವದ ರಜೆ ತೆಗೆದುಕೊಂಡಿರುವ ನಾಯಕ ಕೊಹ್ಲಿ ಸರಣಿಯಿಂದ ಹೊರಗುಳಿದಿದ್ದು, ಕೊಹ್ಲಿ ಸ್ಥಾನಕ್ಕೆ ಆಲ್ರೌಂಡರ್ ಜಡೇಜಾ ಆಯ್ಕೆಯಾಗಿದ್ದಾರೆ. ಹಾಗೆಯೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗದ ಬೌಲರ್ ಶಮಿ ಸ್ಥಾನಕ್ಕೆ ಮಹಮದ್ ಸಿರಾಜ್ ಆಯ್ಕೆಯಾಗಿದ್ದಾರೆ. ಇನ್ನೂ ಕಳಪೆ ಫಾರ್ಮ್ನಲ್ಲಿರುವ ಓಪನರ್ ಪೃಥ್ವಿ ಶಾ ಸ್ಥಾನದಲ್ಲಿ ಗಿಲ್ ಕಾಣಿಸಿಕೊಳ್ಳಲಿದ್ದು, ಇದು ಗಿಲ್ ಅವರ ಮೊದಲ ಅಂತರರಾಷ್ಟೀಯ ಟೆಸ್ಟ್ ಪಂದ್ಯವಾಗಿದೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಬದಲಿಗೆ ರಿಶಭ್ ಪಂತ್ ಮೈದಾನಕ್ಕಿಳಿಯಲ್ಲಿದ್ದಾರೆ.
ಈ ಕಾರಣದಿಂದಾಗಿ ರಾಹುಲ್‌ಗೆ ಅವಕಾಶ ಸಿಗಲಿಲ್ಲ
ಈ ಎಲ್ಲದರ ಮಧ್ಯೆ ವಿರಾಟ್ ಕೊಹ್ಲಿ ಬದಲಿಗೆ ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಸಿಗುತ್ತದೆ ಎಂಬ ಭರವಸೆ ಇತ್ತು. ಆದರೆ ಆ ಭರವಸೆ ಹುಸಿಯಾಗಿದೆ. ಇದಕ್ಕೆ ಕಾರಣವೆಂದರೆ ಆಡಳಿತ ಮಂಡಳಿ ಹನುಮಾ ವಿಹಾರಿಯನ್ನು 2ನೇ ಟೆಸ್ಟ್ನಲ್ಲಿ ಆಡಿಸಲು ತೀರ್ಮಾನಿಸಿದ್ದು, ಮೆಲ್ಬೋರ್ನ್ ಟೆಸ್ಟ್ನಲ್ಲಿ ಹನುಮಾ ವಿಹಾರಿ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ವರದಿಯಾಗಿದೆ.
ALERT?: #TeamIndia for 2nd Test of the Border-Gavaskar Trophy against Australia to be played in MCG from tomorrow announced. #AUSvIND pic.twitter.com/4g1q3DJmm7
— BCCI (@BCCI) December 25, 2020
Published On - 12:11 pm, Fri, 25 December 20