ಒಡಿಶಾದಲ್ಲಿ ನಿರ್ಮಾಣವಾಗಲಿದೆ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ, 2023ರ ಪುರುಷರ ವಿಶ್ವಕಪ್ ನಡೆಯುವುದು ಇಲ್ಲೇ..

ಈ ಕ್ರಿಡಾಂಗಣದಲ್ಲಿ 20,000 ಆಸನಗಳ ವ್ಯವಸ್ಥೆ ಇರಲಿದೆ. 2023ಕ್ಕೆ ಪುರುಷರ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ ಎಂದು ಒಡಿಶಾ ಮುಖ್ಯಮಂತ್ರಿ ಹೇಳಿದ್ದಾರೆ.

ಒಡಿಶಾದಲ್ಲಿ ನಿರ್ಮಾಣವಾಗಲಿದೆ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ, 2023ರ ಪುರುಷರ ವಿಶ್ವಕಪ್ ನಡೆಯುವುದು ಇಲ್ಲೇ..
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
pruthvi Shankar

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 24, 2020 | 6:26 PM

ಭುವನೇಶ್ವರ: ಒಡಿಶಾದ ರೂರ್ಕೆಲಾದಲ್ಲಿ ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿಕೆ ನೀಡಿದ್ದಾರೆ. ಅಲ್ಲದೆ ಈ ಕ್ರಿಡಾಂಗಣದಲ್ಲಿ 20,000 ಆಸನಗಳ ವ್ಯವಸ್ಥೆ ಇರಲಿದೆ. ಜೊತೆಗೆ ಈ ಕ್ರಿಡಾಂಗಣದಲ್ಲಿ 2023ಕ್ಕೆ ಎಫ್‌ಐಹೆಚ್ ಪುರುಷರ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ ಎಂದು ಪ್ರಕಟಣೆ ನೀಡಿದ್ದಾರೆ. ಬಿಜು ಪಟ್ನಾಯಕ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ 15 ಎಕರೆ ವಿಸ್ತೀರ್ಣದಲ್ಲಿ ಈ ಕ್ರಿಡಾಂಗಣ ನಿರ್ಮಾಣವಾಗಲಿದೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತಾನಾಡಿದ ಪಟ್ನಾಯಕ್, ನಾವು ಮೊದಲೇ ಘೋಷಿಸಿದಂತೆ, ಒಡಿಶಾ 2023 ರಲ್ಲಿ ಪ್ರತಿಷ್ಠಿತ ಪುರುಷರ ಹಾಕಿ ವಿಶ್ವಕಪ್‌ನ ಆತಿಥ್ಯ ವಹಿಸಿಕೊಳ್ಳಲಿದೆ. ಪಂದ್ಯಾವಳಿಗಳನ್ನು ರಾಜಧಾನಿ ಭುವನೇಶ್ವರ ಮತ್ತು ಸುಂದರ್‌ಗಡ್​ ಜಿಲ್ಲೆಯ ರೂರ್ಕೆಲಾದಲ್ಲಿ ಆಯೋಜಿಸಲಾಗುವುದು. ಜಿಲ್ಲೆಯ ಖ್ಯಾತ ಆಟಗಾರರಾದ ದಿಲೀಪ್ ಟಿರ್ಕಿ ಮತ್ತು ಸುನೀತಾ ಲಕ್ರಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಜಿಲ್ಲೆಯಲ್ಲಿ ಜನಪ್ರಿಯ ಕ್ರೀಡೆಯಾಗಿದೆ ಎಂದರು.

20,000 ಆಸನ ಸಾಮರ್ಥ್ಯದ ಕ್ರಿಡಾಂಗಣ.. ಭಾರತೀಯ ಹಾಕಿಗೆ ಸುಂದರ್‌ಗಡ್ ಜಿಲ್ಲೆಯ ಕೊಡುಗೆಯ ಗೌರವವಾಗಿ ನಾವು 20,000 ಆಸನ ಸಾಮರ್ಥ್ಯದೊಂದಿಗೆ ರೂರ್ಕೆಲಾದಲ್ಲಿ ಹೊಸ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ನಿರ್ಮಿಸುತ್ತೇವೆ. ಕ್ರೀಡಾಂಗಣವು ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುವುದಲ್ಲದೆ ಇದು ವಿಶ್ವ ಹಾಕಿಗೆ ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಲಿದೆ ಎಂದು ಸಿಎಂ ಹೇಳಿದರು.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಅಂತರರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್‌ಐಹೆಚ್), ಕ್ರೀಡಾ ಮತ್ತು ಯುವಜನ ಸೇವೆಗಳ ಇಲಾಖೆ ಸೇರಿದಂತೆ ಉನ್ನತ ಮಟ್ಟದ ತಂಡ ಮತ್ತು ಹಾಕಿ ಇಂಡಿಯಾದ ಅಧಿಕಾರಿಗಳು ರೂರ್ಕೆಲಾಕ್ಕೆ ಭೇಟಿ ನೀಡಿದ್ದರು. ಈ ತಂಡವು ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸಲು ನಗರದ ಮೂಲಸೌಕರ್ಯಗಳನ್ನು ಪರಿಶೀಲಿಸಿತು. ಸುಂದರ್‌ಗಡ್​ ಜಿಲ್ಲೆಯ 17 ಬ್ಲಾಕ್‌ಗಳಲ್ಲಿ ಸಂಶ್ಲೇಷಿತ ಹಾಕಿ ಟರ್ಫ್ ಅಭಿವೃದ್ಧಿಪಡಿಸುವ ಕೆಲಸವು ಈಗಾಗಲೇ ಪ್ರಾರಂಭವಾಗಿದೆ.

ಒಳ್ಳೇ ಸುದ್ದಿ | ಕೋವಿಡ್ ಸಾಂಕ್ರಾಮಿಕ ಆವರಿಸಿದ್ದಾಗಲೇ ಶುರುವಾಯ್ತು ‘ರೈಸ್ ಎಟಿಎಂ’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada