ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಿಶನ್ ಹಾಗೂ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ನಿಂದಾಗಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ರಾಯ್ ಅಬ್ಬರದ ಬ್ಯಾಟಿಂಗ್ ಹಾಗೂ ಮಾರ್ಗನ್, ಸ್ಟೋಕ್ಸ್ ಅವರ ಸಮಯೋಜಿತ ಆಟದಿಂದಾಗಿ 164 ರನ್ಗಳ ಟಾರ್ಗೆಟ್ ನೀಡಿತು.
ಇಂಗ್ಲೆಂಡ್ ನೀಡಿದ 164 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು. ಆರಂಭಿಕ ಆಟಗಾರ ರಾಹುಲ್ ಶೂನ್ಯಕ್ಕೆ ಔಟಾದರು. ನಂತರ ಬಂದ ಕೊಹ್ಲಿ, ಕಿಶನ್ ಜೊತೆಗೂಡಿ ಅಬ್ಬರದ ಬ್ಯಾಟಿಂಗ್ ಮಾಡಿದರು. ಪರಿಣಾಮವಾಗಿ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಸುಲಭ ಜಯ ಗಳಿಸಿತು. ಈ ಇಬ್ಬರು ಆಟಗಾರರು ತಲಾ ಅರ್ಧ ಶತಕ ಬಾರಿಸಿ ಮಿಂಚಿದರು. ಕೊಹ್ಲಿಗೆ ಸಾಥ್ ನೀಡಿದ ಶ್ರೇಯಸ್ ಅಜೇಯರಾಗಿ ಉಳಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಿಶನ್ ಹಾಗೂ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ನಿಂದಾಗಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ರಾಹುಲ್ ಹೊರತು ಪಡಿಸಿ ಉಳಿದ ಆಟಗಾರರ ನೆರವಿನಿಂದ ಟೀಂ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದು ನಿಂತಿದೆ. ಕಿಶನ್ ಅರ್ಧ ಶತಕದ ಬಳಿಕ, ಅಬ್ಬರಿಸಿದ ಕೊಹ್ಲಿ ಸಹ ಅವಶ್ಯಕ ಅರ್ಧ ಶತಕ ಗಳಿಸಿದರು. ಕೊಹ್ಲಿಯ ಈ ಆಟದಿಂದಾಗಿ ಭಾರತ 150 ರನ್ಗಳ ಗಡಿ ದಾಟಿದೆ.
ಇಷ್ಟು ದಿನ ಸದ್ದು ಮಾಡದೇ ಮಂಕಾಗಿದ್ದ ಕೊಹ್ಲಿ ಬ್ಯಾಟ್ ಇಂದಿನ ಪಂದ್ಯದಲ್ಲಿ ಅಬ್ಬರಿಸಿತು. ಆರಂಭದಿಂದಲೂ ಉತ್ತಮ ಶಾಟ್ ಆಡುತ್ತಿರುವ ಕೊಹ್ಲಿ ಸಿಕ್ಸರ್ ಮೂಲಕ ಅರ್ಧ ಶತಕ ಪೂರ್ಣಗೊಳಿಸಿದರು. ಕೊಹ್ಲಿಯ ಈ ಆಟದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿವೆ
ಆರ್ಚರ್ ಅವರ 13ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗಟ್ಟಿದ್ದ ಪಂತ್, ಜೋರ್ಡನ್ ಅವರ 14ನೇ ಓವರ್‌ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು. 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಪಂತ್, ನಂತರದ ಎಸೆತವನ್ನು ಸಿಕ್ಸರ್ ಬಾರಿಸಲು ಯತ್ನಿಸಿ ಬೈರ್ಸ್ಟೋವ್ಗೆ ಕ್ಯಾಚಿತ್ತು ಔಟಾದರು.
ಕಿಶನ್ ವಿಕೆಟ್ ಬಳಿಕ ಬ್ಯಾಟಿಂಗ್ಗೆ ಇಳಿದಿರುವ ರಿಶಭ್ ಪಂತ್ ರಶೀದ್ ಅವರ ಬೌಲಿಂಗ್ನಲ್ಲಿ ಕವರ್ ತಲೆಯ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು.
56 ರನ್ಗಳಿಸಿ ಅಬ್ಬರಿಸುತ್ತಿದ್ದ ಕಿಶನ್, ರಶೀದ್ ಬೌಲಿಂಗ್ನಲ್ಲಿ ರಿವರ್ ಸ್ವಿಪ್ ಬಾರಿಸಲು ಹೋಗಿ ಕ್ಲಿನ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಚೊಚ್ಚಲ ಪಂದ್ಯ ಆಡುತ್ತಿರುವ ಕಿಶನ್ ತಮ್ಮ ಮೊದಲ ಪಂದ್ಯದಲ್ಲೆ ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡುತ್ತಿರುವ ಕಿಶನ್ ಅವರ ಈ ಇನ್ನಿಂಗ್ಸ್ನಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿ ಸೇರಿವೆ
ಇಶಾನ್ ಅವರಿಗೆ ದೊಡ್ಡ ಜೀವದಾನ ಸಿಕ್ಕಿದೆ. ರಶೀದ್ ಎಸೆತವನ್ನು ಲಾಂಗ್ ಆನ್ ಕಡೆಗೆ ಕಿಶನ್ ಎತ್ತಿದರು. ಆದರೆ ಬೆನ್ ಸ್ಟೋಕ್ಸ್ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು.
7ನೇ ಓವರ್ ಅನ್ನು ಅದ್ಭುತವಾಗಿ ಬಳಿಸಿಕೊಂಡ ಕೊಹ್ಲಿ ಹಾಗೂ ಕಿಶನ್ ಬೊಂಬಾಟ್ ಬ್ಯಾಟಿಂಗ್ ಮಾಡಿದರು. ಸ್ಟೋಕ್ಸ್ ಎಸೆದ ಈ ಓವರ್‌ನಲ್ಲಿ 2 ಭರ್ಜರಿ ಸಿಕ್ಸರ್ ಬಂದವು. ಫ್ರೀ ಹಿಟ್ಗೆ ಕೊಹ್ಲಿ ಸಿಕ್ಸರ್ ಬಾರಿಸಿದರೆ. 5ನೇ ಎಸೆತವನ್ನು ಕಿಶನ್ ಸಿಕ್ಸರ್ಗೆ ತಳ್ಳಿದರು.
ಪವರ್ ಪ್ಲೇನ ಅಂತಿಮ ಓವರ್ ಅನ್ನು ಉತ್ತಮವಾಗಿ ಬಳಸಿಕೊಂಡ ಟೀಂ ಇಂಡಿಯಾದ ಆರಂಭಿಕ ಆಟಗಾರ ಕಿಶನ್ 6ನೇ ಓವರ್‌ನಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಈ ಮೂಲಕ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 50 ರನ್ ಪೂರೈಸಿದೆ.
ಜೋರ್ಡಾನ್ ಅವರ 4ನೇ ಓವರ್‌ನಲ್ಲಿ ಉತ್ತಮವಅಗಿ ಬ್ಯಾಟ್ ಬೀಸಿದ ಕೊಹ್ಲಿ, ತಮ್ಮ ಹಳೆಯ ಆಟವನ್ನು ಪ್ರದರ್ಶಿಸಿದರು. ಒಟ್ಟಾರೆ ಈ ಓವರ್‌ನಲ್ಲಿ 2 ಬೌಂಡರಿ ಗಳಿಸಿದ ಕೊಹ್ಲಿ, ತಂಡದ ಮೊತ್ತವನ್ನು ಏರಿಸಿದರು.
ಸತತ 2 ಪಂದ್ಯಗಳಲ್ಲಿ ವಿಫಲವಾದ ನಂತರ, ರಾಹುಲ್ ಅವರ ಆಟ ಚಿಂತೆಗಿಡು ಮಾಡಿದೆ. ಇಲ್ಲಿ ಸಂಜಯ್ ಮಂಜ್ರೇಕರ್ ರಾಹುಲ್ ಅವರಿಗೆ ಮಹತ್ವದ ಸಲಹೆ ನೀಡಿದ್ದಾರೆ. ರಾಹುಲ್ ‘ಲುಕ್ ಅಂಡ್ ಬಾಲ್ ಹಿಟ್’ ನೀತಿಯನ್ನು ಅನುಸರಿಸಬೇಕು ಎಂದು ಮಂಜ್ರೇಕರ್ ಬರೆದಿದ್ದಾರೆ.
K L Rahul, see the ball hit the ball. That’s when you are at your best in T20s.#INDvENG
— Sanjay Manjrekar (@sanjaymanjrekar) March 14, 2021
ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. 4ನೇ ಓವರ್ ಎಸೆಯಲು ಬಂದ ಆರ್ಚರ್ ಅವರ ಮೊದಲ ಎಸೆತವನ್ನೇ ಕೊಹ್ಲಿ ಬೌಂಡರಿಗಟ್ಟಿದ್ದರು.
ರಾಹುಲ್ ವಿಕೆಟ್ ತೆಗೆದ ಕರನ್ 3ನೇ ಓವರ್ ಎಸೆದರು. ಕರನ್ ಬೌಲಿಂಗ್ ಎದುರಿಸಿದ ಕಿಶನ್ ಮೊದಲ ಎಸೆತದಲ್ಲೇ ಬೌಂಡರಿ ಗಳಿಸಿದರು. ಉಳಿದಂತೆ ಓವರ್‌ನಲ್ಲಿ 9 ರನ್ ಬಂದವು
ಮೊದಲನೇ ಓವರ್‌ನಲ್ಲಿ ರಾಹುಲ್ ವಿಕೆಟ್ ಬಳಿಕ 2ನೇ ಓವರ್ ಎದುರಿಸಿದ ಕಿಶನ್ ತಮ್ಮ ಮೊದಲ ಎಸೆತದಲ್ಲಿಯೇ ಬೌಂಡರಿ ಗಳಿಸಿದರು.
ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಮೊದಲನೇ ಓವರ್‌ನ ಎಲ್ಲಾ 6 ಬಾಲ್ಗಳನ್ನು ಎದುರಿಸಿದ ರಾಹುಲ್ ಯಾವುದೇ ರನ್ ಗಳಿಸಿದೆ, ಅಂತಿಮ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.
ಅಂತಿಮ ಓವರ್ ಅನ್ನು ಉತ್ತಮವಾಗಿ ಮಾಡಿದ ಠಾಕೂರ್ ತಮ್ಮ ಓವರ್‌ನ ಕೊನೆಯ ಎಸೆತದಲ್ಲಿ ಕರ್ರನ್ ಕಡೆಯಿಂದ ಬೌಂಡರಿ ಪಡೆದರು. ಹೀಗಾಗಿ ಎಲ್ಲಾ ಓವರ್‌ಗಳ ಮುಕ್ತಾಯಕ್ಕೆ ಇಂಗ್ಲೆಂಡ್ 164 ರನ್ ಗಳಿಸಿದೆ
ಕೊನೆಯ ಓವರ್ ಎಸೆದ ಠಾಕೂರ್ ಸ್ಟೋಕ್ಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 24 ರನ್ ಗಳಿಸಿ ಆಡುತ್ತಿದ್ದ ಸ್ಟೋಕ್ಸ್ ಠಾಕೂರ್ ಎಸೆತವನ್ನು ಸಿಕ್ಸರ್ ಬಾರಿಸಲು ಯತ್ನಿಸಿ, ಲಾಂಗ್ ಆಫ್ನಲ್ಲಿ ನಿಂತಿದ್ದ ಪಾಂಡ್ಯಗೆ ಕ್ಯಾಚಿತ್ತು ಔಟಾದರು.
19ನೇ ಓವರ್ ಎಸೆಯುತ್ತಿರುವ ಭುವಿ ಅವರ 5ನೇ ಎಸೆತವನ್ನು ನೇರವಾಗಿ ಬೌಲರ್ ತಲೆಯ ಮೇಲೆ ಸ್ಟೋಕ್ಸ್ ಭರ್ಜರಿ ಬೌಂಡರಿ ಬಾರಿಸಿದರು. ಉಳಿದಂತೆ ಭುವಿಯ ಅಂತಿಮ ಓವರ್ ಉತ್ತಮವಾಗಿ ಮೂಡಿಬಂತು.
28 ರನ್ ಗಳಿಸಿ ಅಬ್ಬರಿಸುತ್ತಿದ್ದ ಮಾರ್ಗನ್, 18ನೇ ಓವರ್ ಎಸೆಯಲು ಬಂದ ಠಾಕೂರ್ ಅವರ ಮೊದಲ ಎಸೆತದಲ್ಲೇ ಕೀಪರ್ ಕೈಗೆ ಕ್ಯಾಚ್ ನೀಡಿ ಔಟಾದರು. ಇಂಗ್ಲೆಂಡ್ 142/5
ದಾಳಿಗೆ ಮರಳಿದ ಭುವನೇಶ್ವರ್ ಉತ್ತಮ ಓವರ್ ಎಸೆದಿದ್ದಾರೆ. 16 ನೇ ಓವರ್‌ನಲ್ಲಿ ಬೌಲಿಂಗ್‌ಗಾಗಿ ಬಂದ ಭುವಿಗೆ, ಇಂಗ್ಲೆಂಡ್ ದಾಂಡಿಗರು ಈ ಓವರ್‌ನಲ್ಲಿ ಒಂದೇ ಒಂದು ದೊಡ್ಡ ಶಾಟ್ ಆಡುವ ಅವಕಾಶ ಸಿಗಲಿಲ್ಲ ಮತ್ತು ಕೇವಲ 7 ರನ್ ಗಳಿಸಿದರು.
20 ರನ್ ಗಳಿಸಿ ಅಪಾಯಕಾರಿಯಾಗಿ ಕಾಣಿಸುತ್ತಿದ್ದ ಬೈರ್‌ಸ್ಟೋವ್, ಸುಂದರ್ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಯತ್ನದಲ್ಲಿ ವಿಫಲರಾಗಿ,ಬೌಂಡರಿಯಲ್ಲಿ ನಿಂತಿದ್ದ ಸೂರ್ಯಕುಮಾರ್ ಯಾದವ್ಗೆ ಕ್ಯಾಚಿತ್ತು ಔಟಾದರು.
13ನೇ ಓವರ್ ಎಸೆಯಲು ಬಂದ ಶಾರ್ದೂಲ್ ಅದೃಷ್ಟ ಸರಿ ಇರಲಿಲ್ಲ. ಮೊದಲನೇ ಎಸೆತ ಬಾಲ್ಗೆ ಟಚ್ ಆಗಿ ಕೀಪರ್ ಹಿಂದೆ ಬೌಂಡರಿ ಸೇರಿದರೆ, 5ನೇ ಎಸೆತ ಅಯ್ಯರ್ ಅವರ ಮಿಸ್ ಫಿಲ್ಡಿಂಗ್ ಇಂದ ಬಂತು. ಹಾಗೆಯೇ ಕೊನೆಯ ಬಾಲ್ ಮಾರ್ಗನ್ ಹೆಲ್ಮೆಟ್ಗೆ ತಗುಲಿ ಬೌಂಡರಿ ಸೇರಿತು.
12ನೇ ಓವರ್ ಎಸೆಯಲು ಬಂದ ಸುಂದರ್ ಅವರ ಮೊದಲ ಎಸೆತವನ್ನು ಸಿಕ್ಸರ್ ಬಾರಿಸಲು ಯತ್ನಿಸಿದ ಜೇಸನ್ ರಾಯ್, ಬೌಂಡರಿ ಲೈನ್ನಲ್ಲಿ ನಿಂತಿದ್ದ ಭುವಿ ಕೈಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ. ಔಟಾಗುವುದಕ್ಕೂ ಮುನ್ನ ರಾಯ್ 46 ರನ್ ಗಳಿಸಿದ್ದರು
ಇಂಗ್ಲೆಂಡ್ ತಂಡ 10 ಓವರ್‌ಗಳ ನಂತರ ಉತ್ತಮ ಸ್ಥಾನದಲ್ಲಿದೆ. ತಂಡವು ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡಿದೆ ಮತ್ತು 83 ರನ್ ಗಳಿಸಿದೆ. ಹಾರ್ದಿಕ್ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಯಾವುದೇ ಬೌಂಡರಿ ಸಿಗಲಿಲ್ಲ. ಆದರೆ ಇಂಗ್ಲೆಂಡ್ 9 ರನ್ ಗಳಿಸಿತು.
9ನೇ ಓವರ್ ಎಸೆಯಲು ಬಂದ ಚಾಹಲ್ ಅವರ 5 ಮತ್ತು 6ನೇ ಎಸೆತವನ್ನು ರಿವರ್ ಸ್ವಿಪ್ ಮಾಡುವ ಮೂಲಕ ರಾಯ್,ಥರ್ಡ್ ಮ್ಯಾನ್ ಗಲ್ಲಿಯೆಡೆಗೆ ಬಾರಿಸಿ 2 ಬೌಂಡರಿ ಪಡೆದುಕೊಂಡರು.
9ನೇ ಓವರ್ ಎಸೆಯಲು ಬಂದ ಚಾಹಲ್ ತಮ್ಮ 2ನೇ ಎಸೆತದಲ್ಲಿಯೇ ಮಲನ್ ಅವರನ್ನು ತಮ್ಮ ಸ್ಪಿನ್ ಬಲೆಗೆ ಬಿಳಿಸಿಕೊಂಡರು. ಚಾಹಲ್ ಎಸೆತವನ್ನು ಬಾರಿಸಲು ಯತ್ನಿಸಿದ ಮಲನ್ ಕ್ಲಿನ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಅಂಪೈರ್ ಮೊದಲಿಗೆ ನಾಟ್ಔಟ್ ನೀಡಿದ್ದರು. ಆದರೆ ಟೀಂ ಇಂಡಿಯಾ ಡಿಆರ್ಎಸ್ ಮೊರೆಹೋಯಿತು. ಅಲ್ಲಿ ಮಲನ್ ಔಟ್ ಎಂದು ನಿರ್ಧಾರ ಹೊರಬಿತ್ತು.
ತಮ್ಮ ಖಾತೆಯ 2ನೇ ಓವರ್ ಮಾಡಲು ಬಂದ ಪಾಂಡ್ಯ ಅವರ ಮೊದಲ ಎಸೆತವನ್ನು ಬೌಂಡರಿಗಟ್ಟಿದ ರಾಯ್, ನಂತರದ 4ನೇ ಎಸೆತವನ್ನು ನೇರವಾಗಿ ಬಾರಿಸುವ ಮೂಲಕ ಮತ್ತೊಂದು ಬೌಂಡರಿ ಪಡೆದರು.
ವಿಕೆಟ್‌ಗಳ ಹುಡುಕಾಟದಲ್ಲಿ ಕೊಹ್ಲಿ ತಮ್ಮ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಕಣಕ್ಕಿಳಿಸಿದ್ದಾರೆ. ಚಾಹಲ್, ರಾಯ್ ಅವರನ್ನು ಮೊದಲ 3 ಎಸೆತಗಳಲ್ಲಿ ಸರಿಯಾಗಿಯೇ ಆಟ ಆಡಿಸಿದರು. ಆದರೆ 5ನೇ ಎಸೆತವನ್ನು ರಾಯ್ ಸಿಕ್ಸರ್ಗೆ ಅಟ್ಟಿದರು.
ಪವರ್ ಪ್ಲೇನ ಕೊನೆಯ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ದಾಂಡಿಗರ ಬೌಂಡರಿ ಅಬ್ಬರಕ್ಕೆ ಕಡಿವಾಣ ಹಾಕಿದರು. ತಮ್ಮ ಓವರ್‌ನಲ್ಲಿ 1 ವೈಡ್ ಎಸೆತವನ್ನು ಬಿಟ್ಟರೆ, ಉಳಿದಂತೆ ಹಾರ್ದಿಕ್ ಉತ್ತಮ ಬೌಲಿಂಗ್ ಮಾಡಿದರು.
ಶಾರ್ದುಲ್ ಠಾಕೂರ್ ಅವರ ಮೊದಲ ಓವರ್‌ನಲ್ಲಿ ಭಾರತ ತಂಡ ಸತತ ಎರಡು ಎಸೆತಗಳಲ್ಲಿ ಡೇವಿಡ್ ಮಲನ್ ಅವರ ವಿಕೆಟ್ ಪಡೆಯುವ ಸನಿಹಕ್ಕೆ ಬಂದಿತು. ಮಲನ್, ಠಾಕೂರ್ ಎಸೆತವನ್ನು ಲೆಗ್ ಸೈಡ್‌ನಲ್ಲಿ ಚೆಂಡನ್ನು ಫೈನ್ ಲೆಗ್ ಕಡೆಗೆ ಬಾರಿಸಿದರು. ಆದರೆ ಯುಜ್ವೇಂದ್ರ ಚಾಹಲ್ ಶಾರ್ಟ್ ಫೈನ್ ಲೆಗ್‌ನಲ್ಲಿ ನಿಂತಿದ್ದ ಕೆಲವೇ ಇಂಚುಗಳ ಮುಂದೆ ಬಾಲ್ ಬಿದ್ದಿತು. ಮುಂದಿನ ಎಸೆತದಲ್ಲಿ ಮಲನ್‌ನ ಬ್ಯಾಟ್‌ಗೆ ಎಡ್ಜ್ ಸಿಕ್ಕಿತು. ಆದರೆ ಎರಡನೇ ಸ್ಲಿಪ್‌ನಲ್ಲಿ ಫೀಲ್ಡರ್ ಇಲ್ಲದ ಕಾರಣ ಮಲನ್‌ಗೆ 4 ರನ್ ಸಿಕ್ಕಿತು.
ಸುಂದರ್ ಅವರ ಮತ್ತೊಂದು ಉತ್ತಮ ಓವರ್ ಹೊರಬಂದಿದೆ. ಓವರ್‌ನ ಮೊದಲ 5 ಎಸೆತಗಳಲ್ಲಿ ಕೇವಲ 3 ರನ್ಗಳು ಮಾತ್ರ ಬಂದವು. ಆದರೆ ಮಲನ್ ಕೊನೆಯ ಎಸೆತವನ್ನು ನೇರ ಬೌಂಡರಿ ಕಡೆಗೆ ಬಾರಿಸಿದರು ಮತ್ತು 4 ರನ್ ಗಳಿಸಿದರು.
ಭುವಿ ಮಾಡಿದ 3ನೇ ಓವರ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ 2 ಬೌಂಡರಿಗಳು ಸೇರಿಕೊಂಡವು. ಮೊದಲನೇ ಬೌಂಡರಿ ವಿಕೆಟ್ ಹಿಂದೆ ಇಂದ ಬಂದರೆ. ಮತ್ತೊಂದು ಬೌಂಡರಿ ರಾಯ್ ಅವರ ಬ್ಯಾಟ್ನಿಂದ ಬಂತು.
2ನೇ ಓವರ್ ಎಸೆಯಲು ಬಂದ ಸುಂದರ್ ಅವರ ಮೊದಲ ಎಸೆತವನ್ನು ಲಾಂಗ್ ಆನ್ ಕಡೆ ಬಲವಾಗಿ ಬಾರಿಸಿದ ರಾಯ್, ತಂಡಕ್ಕೆ ಮೊದಲ ಸಿಕ್ಸರ್ ತಂದುಕೊಟ್ಟರು. ಈ ಓವರ್‌ನಲ್ಲಿ ಸುಂದರ್ 7 ರನ್ ಬಿಟ್ಟುಕೊಟ್ಟರು.
ಬಟ್ಲರ್ ವಿಕೆಟ್ ಬಳಿಕ ಬಂದ ಡೇವಿಡ್ ಮಲನ್, ಭುವಿ ಓವರ್‌ನ ಕೊನೆಯ ಎಸೆತವನ್ನು ಡೀಪ್ ಮಿಡ್ ವಿಕೆಟ್ ಕಡೆ ಬಾರಿಸಿ ತಂಡಕ್ಕೆ ಮೊದಲ ಬೌಂಡರಿ ತಂದುಕೊಟ್ಟರು.
ಮೊದಲ ಓವರ್ ಆರಂಭಿಸಿದ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಬಟ್ಲರ್ ಶೂನ್ಯಕ್ಕೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಭುವಿ ಎಸೆದ ಎಸೆತವನ್ನು ಡಿಪೆಂಡ್ ಮಾಡಲು ಹೋದ ಬಟ್ಲರ್ ಕ್ಲಿನ್ ಎಲ್ಬಿಡಬ್ಲೂ ಬಲೆಗೆ ಬಿದ್ದರು.
ಇಂಗ್ಲೆಂಡ್ ಪರ ಆರಂಭಿಕರಾಗಿ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್ಗೆ ಇಳಿದಿದ್ದಾರೆ. ಟೀಂ ಇಂಡಿಯಾ ಪರ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬೌಲಿಂಗ್ ಆರಂಭಿಸಿದ್ದಾರೆ. ಇಂದು ಭಾರತ 5 ಬೌಲರ್ಗಳೊಂದಿಗೆ ಆಟ ಆಡುತ್ತಿದೆ.
ಟೀಮ್ ಇಂಡಿಯಾದಲ್ಲಿ ಇಬ್ಬರು ಹೊಸ ಆಟಗಾರರನ್ನು ಕಾಣಬಹುದಾಗಿದೆ. ಆರಂಭಿಕ ಜವಾಬ್ದಾರಿಯನ್ನು ಇಶಾನ್ ಕಿಶನ್ ಅವರಿಗೆ ನೀಡಲಾಗಿದ್ದು, ಅಕ್ಷರ್ ಪಟೇಲ್ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಅಂದರೆ, ಭಾರತ ಇಂದು ತನ್ನ ಬಲವಾದ ಬ್ಯಾಟಿಂಗ್ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.
BIG DAY for @surya_14kumar & @ishankishan51 who are all set for their T20I debuts ??
What a moment for these two ?? #TeamIndia ????#INDvENG @Paytm pic.twitter.com/cFVVxDgvIO
— BCCI (@BCCI) March 14, 2021
ಇಶಾನ್ ಕಿಶನ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಶಭ್ ಪಂತ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್
2nd T20I. India XI: I Kishan, KL Rahul, V Kohli, R Pant, S Iyer, S Yadav, H Pandya, W Sundar, S Thakur, B Kumar, Y Chahal https://t.co/gU4AGpZy2O #INDvENG @Paytm
— BCCI (@BCCI) March 14, 2021
ಜೆಸನ್ ರಾಯ್, ಜೋಶ್ ಬಟ್ಲರ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಇಯಾನ್ ಮೋರ್ಗಾನ್, ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಜೋಪ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್
2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳಾಗಿದ್ದು, ಧವನ್ ಬದಲಿಗೆ ಇಶಾನ್ ಕಿಶನ್ ಕಣಕ್ಕಿಳಿಯಲ್ಲಿದ್ದಾರೆ. ಹಾಗೆಯೇ ಅಕ್ಷರ್ ಪಟೇಲ್ ಬದಲಿಗೆ ಸೂರ್ಯ ಕುಮಾರ್ ಯಾದವ್ ಮೈದಾನಕ್ಕಿಳಿಯಲ್ಲಿದ್ದಾರೆ.
Toss Update: @imVkohli has won the toss & #TeamIndia have elected to bowl against England in the 2nd @Paytm #INDvENG T20I.
Follow the match ? https://t.co/gU4AGqh8Um pic.twitter.com/3VaDUO32SK
— BCCI (@BCCI) March 14, 2021
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಗೆ ಚೊಚ್ಚಲ ಪಂದ್ಯಕ್ಕೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಉಭಯ ಆಟಗಾರರು ಮೊದಲ ಬಾರಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಅವರಿಗೆ ಸರಣಿಯ ಎರಡನೇ ಪಂದ್ಯದಲ್ಲಿ ಅವಕಾಶ ನೀಡುವ ನಿರೀಕ್ಷೆ ಹೆಚ್ಚಿದೆ.
ಮೊದಲ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ನಿಷ್ಪರಿಣಾಮಕಾರಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಏನಾದರೂ ಬದಲಾವಣೆಗಳಾಗಬಹುದೇ? ರೋಹಿತ್ ಶರ್ಮಾ ಆಡುವ ಹನ್ನೊಂದಕ್ಕೆ ಹಿಂದಿರುಗುವರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ
Published On - 10:34 pm, Sun, 14 March 21