‘ಈ ಸಲ ಕಪ್ ನಮ್ದೇ’ IPL ಸೀಸನ್-13ರ ಬಿಡ್ಡಿಂಗ್​ನಲ್ಲಿ RCBಗೆ ಬಲಿಷ್ಠ ಆಟಗಾರರು

|

Updated on: Dec 20, 2019 | 12:54 PM

ಐಪಿಎಲ್ ಸೀಸನ್-13ರ ಬಿಡ್ಡಿಂಗ್​ನಲ್ಲಿ ಆರ್​ಸಿಬಿ ತಂಡ ಸ್ಟಾರ್ ಆಟಗಾರರನ್ನ ಖರೀದಿಸಿದೆ. ಬೆಂಗಳೂರು ತಂಡಕ್ಕೆ ಆ ಮೂವರ ಎಂಟ್ರಿಯಿಂದ ಆನೆಬಲ ಬಂದಾಂತಾಗಿದೆ. ಹಾಗಾದ್ರೆ ಆರ್​ಸಿಬಿ ಖರೀದಿಸಿದ ಆಟಗಾರರು ಯಾಱರು..? ಯಾಱರ ಪರಾಕ್ರಮ ಹೇಗಿದೆ..? ಯಾಱರು ಎಷ್ಟು ಮೊತ್ತಕ್ಕೆ ಆರ್​ಸಿಬಿಗೆ ಸೇಲ್ ಆದ್ರು ಅಂತ ಇಲ್ಲಿ ಓದಿ. ಈ ಸಲ ಕಪ್ ನಮ್ದೇ.. ಈ ಸಲ ಕಪ್ ನಮ್ದೇ ಅಂತ ಪ್ರತಿಬಾರಿ ಐಪಿಎಲ್ ಸೀಸನ್ ಶುರುವಾದಾಗ್ಲೂ ಆರ್​ಸಿಬಿ ಅಭಿಮಾನಿಗಳು ಸ್ಲೋಗನ್ ಶುರುಮಾಡ್ತಾರೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಆರ್​ಸಿಬಿ ಕ್ರಿಕೆಟಿಗರು […]

‘ಈ ಸಲ ಕಪ್ ನಮ್ದೇ IPL ಸೀಸನ್-13ರ ಬಿಡ್ಡಿಂಗ್​ನಲ್ಲಿ RCBಗೆ ಬಲಿಷ್ಠ ಆಟಗಾರರು
Follow us on

ಐಪಿಎಲ್ ಸೀಸನ್-13ರ ಬಿಡ್ಡಿಂಗ್​ನಲ್ಲಿ ಆರ್​ಸಿಬಿ ತಂಡ ಸ್ಟಾರ್ ಆಟಗಾರರನ್ನ ಖರೀದಿಸಿದೆ. ಬೆಂಗಳೂರು ತಂಡಕ್ಕೆ ಆ ಮೂವರ ಎಂಟ್ರಿಯಿಂದ ಆನೆಬಲ ಬಂದಾಂತಾಗಿದೆ. ಹಾಗಾದ್ರೆ ಆರ್​ಸಿಬಿ ಖರೀದಿಸಿದ ಆಟಗಾರರು ಯಾಱರು..? ಯಾಱರ ಪರಾಕ್ರಮ ಹೇಗಿದೆ..? ಯಾಱರು ಎಷ್ಟು ಮೊತ್ತಕ್ಕೆ ಆರ್​ಸಿಬಿಗೆ ಸೇಲ್ ಆದ್ರು ಅಂತ ಇಲ್ಲಿ ಓದಿ.

ಈ ಸಲ ಕಪ್ ನಮ್ದೇ.. ಈ ಸಲ ಕಪ್ ನಮ್ದೇ ಅಂತ ಪ್ರತಿಬಾರಿ ಐಪಿಎಲ್ ಸೀಸನ್ ಶುರುವಾದಾಗ್ಲೂ ಆರ್​ಸಿಬಿ ಅಭಿಮಾನಿಗಳು ಸ್ಲೋಗನ್ ಶುರುಮಾಡ್ತಾರೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಆರ್​ಸಿಬಿ ಕ್ರಿಕೆಟಿಗರು ಈಗಾಗ್ಲೇ ಈ ಸಲ ಕಪ್ ನಮ್ದೇ ಅನ್ನೋ ಘೋಷಣೆ ಕೂಡಿ ಬೆಂಗಳೂರು ಅಭಿಮಾನಿಗಳನ್ನ ರಂಜಿಸಿದ್ದಾರೆ. ಆರ್​ಸಿಬಿ ಅಂದ್ರೆ ಕೇವಲ ತಂಡ ಅಲ್ಲ.

ಬೆಂಗಳೂರು ತಂಡ ಅಂದ್ರೆ ಅದು ನಮ್ಮ ಉಸಿರು. ನಮ್ಮ ಹೆಮ್ಮೆ ಅಂತಲೇ ಬಾವಿಸುವ ಆರ್​ಸಿಬಿ ಅಭಿಮಾನಿಗಳು, ಆರ್​ಸಿಬಿಗೆ ಜೈಕಾರ ಹಾಕೋ ಹಾಡು ಹಾಡಿ, ಡ್ಯಾನ್ಸ್ ಮಾಡಿ ತಂಡಕ್ಕೆ ಪ್ರತಿ ಸೀಸನ್​ನಲ್ಲೂ ಜೋಷ್ ತುಂಬುತ್ತಾ ಬಂದಿದ್ದಾರೆ. ಆದರೆ ಕೊನೆಯಲ್ಲಿ ಅಭಿಮಾನಿಗಳಿಗೆ ಸೋತು ನಿರಾಶೆ ಮೂಡಿಸುತ್ತೆ. ಒಮ್ಮೆಯೂ ಚಾಂಪಿಯನ್ ಆಗೋಕೆ ಸಾಧ್ಯವಾಗದ ಆರ್​ಸಿಬಿಯ ಹಣೆಬರಹ ಈ ಬಾರಿಯ ಐಪಿಎಲ್​ನಲ್ಲಿ ಖಂಡಿತ ಬದಲಾಗಲಿದೆ.

ಎಬಿಡಿ ಗೂಡಿನಿಂದ ಬೆಂಗಳೂರಿಗೆ ಬಂದ ದೈತ್ಯ ಆಲ್​ರೌಂಡರ್!
ಎಬಿ ಡಿವಿಲಿಯರ್ಸ್.. ಆರ್​ಸಿಬಿ ತಂಡದಲ್ಲಿ ಕೊಹ್ಲಿಗೆ ಸಿಗೋ ಪ್ರೀತಿ ಮತ್ತು ಗೌರವ ಎಬಿಡಿಗೂ ಸಿಕ್ತಿದೆ. ಆರ್​ಸಿಬಿ ಅಭಿಮಾನಿಗಳ ಆರಾಧ್ಯದೈವ ಕೊಹ್ಲಿ ಮತ್ತು ಎಬಿಡಿ ಅಂದ್ರೆ ತಪ್ಪಾಗೋಲ್ಲ. ಇದೇ ಎಬಿಡಿ ಗೂಡಿನಿಂದ ಈಗ ಒಬ್ಬ ದೈತ್ಯ ಆಲ್​ರೌಂಡರ್ ಆರ್​ಸಿಬಿ ತಂಡವನ್ನ ಸೇರಿಕೊಂಡಿದ್ದಾನೆ. ಆತನೇ ಕ್ರಿಸ್ ಮೋರಿಸ್.

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್​ರೌಂಡರ್ ಆಗಿರುವ ಕ್ರಿಸ್ ಮೋರಿಸ್, ಎಬಿಡಿಯ ನೆಚ್ಚಿನ ಬೌಲರ್. ಅದ್ಭುತ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮಾಡುವ ಮೋರಿಸ್, ಭರವಸೆಯ ಕ್ರಿಕೆಟಿಗ ಅಂತಲೇ ಹೆಸರುವಾಸಿ. ದಕ್ಷಿಣ ಆಫ್ರಿಕಾದ ದೈತ್ಯ ಆಲ್​ರೌಂಡರ್ ಕ್ರಿಸ್ ಮೋರಿಸ್​ರನ್ನ ಆರ್​ಸಿಬಿ ಫ್ರಾಂಚೈಸಿ 10 ಕೋಟಿಗೆ ಖರೀದಿಸಿದೆ.

ಆಸ್ಟ್ರೇಲಿಯಾದಿಂದ ಕೊಹ್ಲಿ ಪಡೆ ಸೇರಿತು ಎರಡು ಕ್ಷಿಪಣಿ!
ಪ್ಯಾಟ್ ಕಮಿನ್ಸ್ ಜಸ್ಟ್ ಮಿಸ್ ಆದ್ರೂ ಅನ್ನೋ ಕಾರಣಕ್ಕೆ ಆರ್​ಸಿಬಿ ಬಲಾಢ್ಯ ಆಲ್​ರೌಂಡರ್ ಕ್ರಿಸ್ ಮೋರಿಸ್ ಖರೀದಿಸಿ ಖುಷಿಪಟ್ಟಿದೆ. ದಕ್ಷಿಣ ಆಫ್ರಿಕಾದ ಬಾಂಬ್ ಮೋರಿಸ್ ಜೊತೆಗೆ ಆಸ್ಟ್ರೇಲಿಯಾದ 2 ಮಿಸೈಲ್​ಗಳನ್ನ ಆರ್​ಸಿಬಿ ಖರೀದಿಸಿದೆ. ಆರ್​ಸಿಬಿ ತಂಡ ಸೇರಿದ ಮೊದಲ ಕಾಂಗರೂ ಕ್ಷಿಪಣಿ ಌರೋನ್ ಫಿಂಚ್.

ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಬ್ಯಾಟಿಂಗ್​ನಲ್ಲಿ ಬಾಹುಬಲಿ. ಕ್ರಿಸ್ ಕಚ್ಚಿ ನಿಂತ್ರೆ ರನ್​ಸುನಾಮಿ ಎಬ್ಬಿಸುವ ಫಿಂಚ್ ಆರ್ಭಟಕ್ಕೆ ಯಾರಿಂದ್ಲೂ ಬ್ರೇಕ್ ಹಾಕೋಕೆ ಅಸಾಧ್ಯ. ಫಿಂಚ್ ಎಂಟ್ರಿಕೊಟ್ಟಿರೋದು ಆರ್​ಸಿಬಿ ಬ್ಯಾಟಿಂಗ್​ಗೆ ಆನೆ ಬಲ ಬಂದಾಂತಾಗಿದೆ.. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಜೊತೆಗೆ ಆರ್​ಸಿಬಿ ತಂಡದಲ್ಲಿ ಫಿಂಚ್ ರನ್​ಮಾರುತ ಎಬ್ಬಿಸೋದು ಗ್ಯಾರೆಂಟಿ.. ಐಪಿಎಲ್​ನಲ್ಲಿ ಫಿಂಚ್​ರನ್ನ ಆರ್​ಸಿಬಿ 4.40 ಕೋಟಿಗೆ ಖರೀದಿಸಿದೆ.

ಆಸ್ಟ್ರೇಲಿಯಾ ತಂಡದಿಂದ ಬಂದಿರುವ ಮತ್ತೊಂದು ಮಿಸೈಲ್ ಅಂದ್ರೆ ಅದು ಕೇನ್ ರಿಚರ್ಡ್​ಸನ್. ಸದ್ಯ ಆಸ್ಟ್ರೇಲಿಯಾ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಕಾರುರುವಾಕ್ ಸ್ಪೆಲ್ ಮಾಡಿ ರಿಚರ್ಡಸನ್ ಹವಾ ಕ್ರಿಯೆಟ್ ಮಾಡಿದ್ದಾರೆ. ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದ ಕೇನ್, ಸ್ಟಾರ್ ಬ್ಯಾಟ್ಸ್​ಮನ್​ಗಳನ್ನೇ ನಡುಗಿಸಬಲ್ಲರು. ಇವರ ಬೌಲಿಂಗ್ ಮೆಚ್ಚಿಕೊಂಡ ಆರ್​ಸಿಬಿ ಪ್ರಾಂಚೈಸಿ, 4 ಕೋಟಿ ವ್ಯಯಿಸಿ ಖರೀದಿಸಿದೆ.

ಕೊನೆಯಲ್ಲಿ ಮತ್ತೆ ಡೇಲ್ ಸ್ಟೇನ್​ರನ್ನ ಉಳಿಸಿಕೊಂಡ ಆರ್​ಸಿಬಿ!
ಆರ್​ಸಿಬಿ ತಂಡದ ಬೌಲಿಂಗ್ ಸ್ಟ್ರೆಂಥ್ ಆಗಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಕಳೆದ ಸೀಸನ್ ಆರಂಭದಲ್ಲಿ ಜೋಷ್​ನಿಂದ ಆಡಿ ಬಳಿಕ ಇಂಜುರಿಗೆ ತುತ್ತಾಗಿದ್ರು. ಮತ್ತೆ ಸ್ಟೇನ್ ತಂಡಕ್ಕೆ ಸೇರಿಕೊಂಡಿರಲಿಲ್ಲ. ಆದ್ರೆ ಈ ಸೀಸನ್​ನ ಬಿಡ್ಡಿಂಗ್​ನಲ್ಲಿ ಆರ್​ಸಿಬಿ ಆರಂಭದಲ್ಲಿ ಸ್ಟೇನ್ ಖರೀದಿಸುವ ಮನಸ್ಸು ಮಾಡಿರಲಿಲ್ಲ. ಕೊನೆ ಗಳಿಗೆಯಲ್ಲಿ ನಡೆದ ಬಿಡ್ಡಿಂಗ್​ನಲ್ಲಿ ಮತ್ತೆ ಸ್ಟೇನ್​ರನ್ನ 2 ಕೋಟಿಗೆ ಆರ್​ಸಿಬಿ ಉಳಿಸಿಕೊಂಡಿದೆ.

ಆರ್​ಸಿಬಿ ಜೋಶ್ ಹೆಚ್ಚಿಸಲಿದ್ದಾರೆ ಜೋಶ್ ಪಿಲಿಪ್!
ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಜೋಶ್ ಫಿಲಿಪ್​ರನ್ನ ಆರ್​ಸಿಬಿ ತಂಡ ಖರೀದಿಸಿದೆ. 22 ವರ್ಷದ ಜೋಶ್ ಇನ್ನು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿಲ್ಲ. ಆದ್ರೆ ಬಿಗ್​ಬ್ಯಾಷ್ ಲೀಗ್​ನಲ್ಲಿ ಜೋಶ್ ಸಿಡ್ನಿ ಸಿಕ್ಸರ್ ತಂಡದ ಪರ ಬ್ಯಾಟಿಂಗ್​ನಲ್ಲಿ ಅಬ್ಬರಿಸುತ್ತಿದ್ದಾನೆ. ಓಪನಿಂಗ್ ಬ್ಯಾಟ್ಸ್​ಮನ್ ಆಗಿರುವ ಜೋಶ್, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ನಿಭಾಯಿಸ್ತಾನೆ. 20 ಲಕ್ಷ ಮೂಲಬೆಲೆ ಹೊಂದಿದ್ದ ಆಸ್ಟ್ರೇಲಿಯಾದ ಜೋಶ್ ಫಿಲಿಪ್​ರನ್ನ 20 ಲಕ್ಷಕ್ಕೆ ಆರ್​ಸಿಬಿ ಖರೀದಿಸಿದೆ.

ಆರ್​ಸಿಬಿ ತಂಡ ಬಲಿಷ್ಠ ಆಟಗಾರರನ್ನ ಈ ಬಾರಿಯ ಐಪಿಎಲ್​ನಲ್ಲಿ ಖರೀದಿಸಿರೋದು, ಈ ಸಲ ಕಪ್ ನಮ್ದೇ ಅನ್ನೋ ಸ್ಲೋಗನ್​ಗೆ ರಿದಮ್ ಹೆಚ್ಚಿಸಿದೆ. ಹೀಗಾಗಿ ಮತ್ತೆ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಅಂತ ಮತ್ತಷ್ಟು ಜೋಷ್​ನಲ್ಲಿ ಹೇಳಲು ಶುರುಮಾಡಿದ್ದಾರೆ.