ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 97ರನ್ಗಳ ಸೋಲುಕಂಡಿದೆ. 207ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಆರ್ಸಿಬಿ 17 ಓವರ್ಗಳಲ್ಲಿ 109 ರನ್ಗೆ ಆಲೌಟ್ ಆಯ್ತು. ಇದ್ರೊಂದಿಗೆ ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಐಪಿಎಲ್ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಮೊದಲಿಗರಾಗಿದ್ದಾರೆ. ರಾಹುಲ್ ಔಟಾಗದೇ 132ರನ್ ಗಳಿಸಿದ್ರೆ, ವಾರ್ನರ್ 126, ಕೊಹ್ಲಿ 113ರನ್ ಗಳಿಸಿದ್ದಾರೆ.
ಮಿಸ್ಟರ್ 360 ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ 400 ಸಿಕ್ಸರ್ಗಳ ಕ್ಲಬ್ಗೆ ಸೇರ್ಪಡೆಗೊಂಡಿದ್ದಾರೆ. ಪಂಜಾಬ್ ವಿರುದ್ಧ ಸಿಕ್ಸ್ ಸಿಡಿಸುವ ಮೂಲಕ ಎಬಿಡಿ, 311 ಪಂದ್ಯಗಳಲ್ಲಿ 400 ಸಿಕ್ಸ್ ಬಾರಿಸಿದ್ದಾರೆ.
ಆರ್ಸಿಬಿ ತಂಡದ ಯುವ ಆಟಗಾರ ಜೋಶ್ ಫಿಲಿಫ್, ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 1ರನ್ ಗಳಿಸಿದ್ದ ಫಿಲಿಫ್, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇಲ್ ಸ್ಟೇನ್ ಬರೋಬ್ಬರಿ 57ರನ್ ನೀಡಿದ್ದಾರೆ. 4 ಓವರ್ ಬೌಲಿಂಗ್ ಮಾಡಿದ ಸ್ಟೇನ್, 57ರನ್ ಬಿಟ್ಟುಕೊಟ್ರು. ಇದು ಈ ಸೀಸನ್ನಲ್ಲಿ ಬೌಲರ್ಒಬ್ಬ ಬಿಟ್ಟು ಕೊಟ್ಟ ಅತೀ ಹೆಚ್ಚಿನ ರನ್ ಆಗಿದೆ.
ಆರ್ಸಿಬಿ ವಿರುದ್ಧ ಶತಕ ಬಾರಿಸಿದ ಕೆ.ಎಲ್.ರಾಹುಲ್, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಎರಡು ಪಂದ್ಯಗಳಲ್ಲಿ ಒಂದು ಶತಕ ಸೇರಿ ಒಟ್ಟು 153 ರನ್ ಗಳಿಸಿರೋ ರಾಹುಲ್, ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ
ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಸ್ಪೀಡ್ ಸ್ಟಾರ್ ಮೊಹಮ್ಮದ್ ಶಮಿ, ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಡೆಲ್ಲಿ ವಿರುದ್ಧ 3ವಿಕೆಟ್ ಪಡೆದಿದ್ದ ಮೊಹಮ್ಮದ್ ಶಮಿ, ಒಟ್ಟು 4ವಿಕೆಟ್ ಕಬಳಿಸಿದ್ದಾರೆ.
ಫೀಲ್ಡಿಂಗ್ನಲ್ಲಿ ಪಂಟರ್ ಎನಿಸಿಕೊಂಡಿರುವ ಕೊಹ್ಲಿ,ನೆನ್ನೆಯ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ಎರಡು ಅಧ್ಬುತ ಕ್ಯಾಚ್ಗಳನ್ನ ಕೈ ಚೆಲ್ಲಿ ಪಂಜಾಬ್ ಭಾರಿ ಮೊತ್ತ ಪೇರಿಸಲು ಕಾರಣ ಕರ್ತರಾದರು.
(Photo courtesy: Indian Premier League Twitter)
Published On - 3:46 pm, Fri, 25 September 20