IPL 2020: ಪಂಜಾಬ್​ ದಾಳಿಗೆ ಡೆಲ್ಲಿ ಮಂಡಿಯೂರಿದ ದೃಶ್ಯಾವಳಿಗಳು..

|

Updated on: Oct 21, 2020 | 4:41 PM

ಐಪಿಎಲ್​ನಲ್ಲಿ ಮೊದಲಾರ್ಧದ ಪಂದ್ಯಗಳು ಮುಗಿಯುತ್ತಿದ್ದಂತೆ, ಇದೀಗ ಕೊನೇ ಹಂತದ ಮ್ಯಾಚ್​ಗಳು ರೋಚಕತೆ ಕಾಯ್ದುಕೊಳ್ಳುತ್ತಿವೆ. ದುಬೈನಲ್ಲಿ ನಡೆದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ರಣರೋಚಕ ಗೆಲುವು ಸಾಧಿಸಿದ್ದು, ಪ್ಲೇ ಆಫ್​ಗೆ ಎಂಟ್ರಿ ಕೊಡೋ ಕನಸು ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ ವಿರುದ್ಧ ಶತಕ ಬಾರಿಸಿದ ಶಿಖರ್ ಧವನ್ ಐಪಿಎಲ್​ನಲ್ಲಿ 5,000 ರನ್ ಪೂರೈಸಿದವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಕಿಂಗ್ಸ್ ಇಲೆವೆಬ್ ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಡೆನಿಯಲ್ ಸ್ಯಾಮ್ಸ್ ಐಪಿಎಲ್​ಗೆ ಪದಾರ್ಪಣೆ ಮಾಡಿದ್ರು. ನಾಲ್ಕು ಓವರ್ […]

IPL 2020: ಪಂಜಾಬ್​ ದಾಳಿಗೆ ಡೆಲ್ಲಿ ಮಂಡಿಯೂರಿದ ದೃಶ್ಯಾವಳಿಗಳು..
Follow us on

ಐಪಿಎಲ್​ನಲ್ಲಿ ಮೊದಲಾರ್ಧದ ಪಂದ್ಯಗಳು ಮುಗಿಯುತ್ತಿದ್ದಂತೆ, ಇದೀಗ ಕೊನೇ ಹಂತದ ಮ್ಯಾಚ್​ಗಳು ರೋಚಕತೆ ಕಾಯ್ದುಕೊಳ್ಳುತ್ತಿವೆ. ದುಬೈನಲ್ಲಿ ನಡೆದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ರಣರೋಚಕ ಗೆಲುವು ಸಾಧಿಸಿದ್ದು, ಪ್ಲೇ ಆಫ್​ಗೆ ಎಂಟ್ರಿ ಕೊಡೋ ಕನಸು ಜೀವಂತವಾಗಿರಿಸಿಕೊಂಡಿದೆ.


ಪಂಜಾಬ್ ವಿರುದ್ಧ ಶತಕ ಬಾರಿಸಿದ ಶಿಖರ್ ಧವನ್ ಐಪಿಎಲ್​ನಲ್ಲಿ 5,000 ರನ್ ಪೂರೈಸಿದವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.


ಕಿಂಗ್ಸ್ ಇಲೆವೆಬ್ ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಡೆನಿಯಲ್ ಸ್ಯಾಮ್ಸ್ ಐಪಿಎಲ್​ಗೆ ಪದಾರ್ಪಣೆ ಮಾಡಿದ್ರು. ನಾಲ್ಕು ಓವರ್ ಬೌಲಿಂಗ್ ಮಾಡಿದ ಇಂಗ್ಲೆಂಡ್​ನ ಡೆನಿಯಲ್ ಸ್ಯಾಮ್ಸ್, 7.50 ರ ಎಕಾನಮಿಯಲ್ಲಿ 30 ರನ್ ನೀಡಿದರು.


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಶತಕ ದಾಖಲಿಸಿದ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. 61 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ ಅಜೇಯ 106 ರನ್ ಕಲೆ ಹಾಕಿದ ಧವನ್, ಡೆಲ್ಲಿ ತಂಡದ ಸ್ಕೋರ್ ಹೆಚ್ಚಿಸಿದರು.


ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸತತ ಎರಡು ಪಂದ್ಯಗಳನ್ನ ಗೆದ್ದಿರೋ ಪಂಜಾಬ್, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.


ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಲ್​ರೌಂಡರ್ ಆಟವಾಡಿ ಪಂಜಾಬ್ ಗೆಲುವಿಗೆ ಕಾರಣವಾದ ಗ್ಲೇನ್ ಮ್ಯಾಕ್ಸ್​ವೆಲ್​ ಒಂದು ವಿಕೆಟ್ ಪಡೆದ್ರೆ, 32 ರನ್​ಗಳಿಸಿದರು.


ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ತುಷಾರ್ ದೇಶಪಾಂಡೆಯ ಒಂದೇ ಓವರ್​ನಲ್ಲಿ ಬರೋಬ್ಬರಿ 24 ರನ್ ಬಾರಿಸಿದರು.